ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಗಿಗೆ ಭರ್ಜರಿ ಬೆಂಬಲ ಬೆಲೆ, ಸಚಿವ ಕೃಷ್ಣಬೈರೇ ಗೌಡ ಭರವಸೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 14 : ಪ್ರತಿ ಕ್ವಿಂಟಾಲ್ ರಾಗಿಗೆ 2,300 ರೂ. ಬೆಂಬಲ ಬೆಲೆ ನಿಗದಿ ಮಾಡಿದ್ದು ಇನ್ನು 15 ದಿನಗಳಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಬೈರೇ ಗೌಡ ಭರವಸೆ ನೀಡಿದರು.

ಕಬ್ಬು, ಭತ್ತಕ್ಕೆ ಬೆಂಬಲ ಬೆಲೆ ನೀಡಲು ಒತ್ತಾಯಿಸಿ ರಾಜ್ಯದಲ್ಲಿ ಸಾಕಷ್ಟು ಪ್ರತಿಭಟನೆಗಳು ನಡೆಯುತ್ತಲೇ ಇದೆ. ಆದರೆ ಇದೀಗ ರಾಗಿಯ ಸರದಿ. ರಾಗಿಯನ್ನು ಕೇವಲ ಬಡವರು ಮಾತ್ರ ಸೇವಿಸುವ ಧಾನ್ಯವಾಗಿ ಉಳಿದಿಲ್ಲ. ಬಡವ, ಶ್ರೀಮಂತರೆನ್ನದೆ ಸಾಕಷ್ಟು ಮಂದಿ ರಾಗಿಯನ್ನು ಬಳಸುತ್ತಾರೆ. ಕರಾವಳಿ ಭಾಗ ಇನ್ನಿತರೆ ಕೆಲವು ಪ್ರದೇಶಗಳನ್ನು ಹೊರತು ಪಡಿಸಿ, ಬೆಂಗಳೂರು, ಮೈಸೂರು, ಹಾಸನ ಭಾಗಗಳಲ್ಲಿ ರಾಗಿಯನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ.

ರೈತರ ಆದಾಯ ದ್ವಿಗುಣ ಹೇಗೆ ? : ಕೃಷಿ ಸಚಿವರ 10 ಸೂತ್ರಗಳುರೈತರ ಆದಾಯ ದ್ವಿಗುಣ ಹೇಗೆ ? : ಕೃಷಿ ಸಚಿವರ 10 ಸೂತ್ರಗಳು

ಆದರೆ ಇದೀಗ ರಾಗಿಯ ಬೆಲೆ ಇಳಿಕೆ ಕಂಡಿದೆ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಬೆಲೆ ಕುಸಿದಿದೆ ಎಂದು ಗಾಬರಿಯಾಗಿ ಯಾರೂ ಕೂಡ ಕಡಿಮೆ ಹಣಕ್ಕೆ ಮಾರುವುದು ಬೇಡ. ಸರ್ಕಾರ ಖರೀದಿಸುವವರೆಗೆ ಕಾಯುವುದು ಸೂಕ್ತ ಎಂದು ಸಚಿವ ಕೃಷ್ಣ ಬೈರೇ ಗೌಡ ಹೇಳಿದರು.

Karnataka Government has fixed MSP for Ragi

ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗೆ 1,500 ರೂ.ನಿಂದ 1,700 ಇದೆ. ಕೇಂದ್ರ ಸರ್ಕಾರ ಕ್ವಿಂಟಾಲ್ ಗೆ 1,900 ಬೆಂಬಲ ಬೆಲೆ ನಿಗದಿ ಪಡಿಸಿದೆ. ಅದಕ್ಕೆ ರಾಜ್ಯ 400 ರೂ. ಬೋನಸ್ ನೀಡಲಿದ್ದು ಒಟ್ಟು 2,300 ರೂ. ನೀಡಿ ಖರೀದಿ ಮಾಡಲಾಗುವುದು ಎಂದರು.

ಶೇಂಗಾ, ಹೆಸರು, ಉದ್ದಿಮೆ ದಾರರಿಗೆ ಸದ್ಯವೇ ಖರೀದಿ ಕೇಂದ್ರ ಆರಂಭಿಸಲಾಗುವುದು. ಬೆಂಬಲ ಬೆಲೆಯಡಿ ರಾಗಿ, ಉದ್ದು, ಶೇಂಗಾ ಖರೀದಿಗೆ ಯಾವುದೇ ಸಮಸ್ಯೆ ಇಲ್ಲ. ತೊಗರಿ ಮತ್ತು ಮೆಕ್ಕೆ ಜೋಳ ಖರೀದಿಗೆ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ . ಶೇಂಗಾ ಖರೀದಿ್ಎ ೪೦ ಕೇಂದ್ರಗಳನ್ನು ಆರಂಭಿಸಲಾಗುವುದು. ಕ್ವಿಂಟಲ್ ಗೆ 4,450 ರಂತೆ ಈ ವರ್ಷ 47,500 ಟನ್ ಶೇಂಗಾ ಖರೀದಿಸಲಾಗುವುದು.

10 ಲಕ್ಷ ಟನ್ ಉತ್ಪಾದನೆ: ಈ ವರ್ಷ 105 ರಿಂದ 110 ಲಕ್ಷ ಟನ್‌ ಆಹಾರ ಧಾನ್ಯಗಳ ಉತ್ಪಾದನೆ ಆಗುವ ಸಾಧ್ಯತೆ ಇದೆ. ಮುಂಗಾರಿನಲ್ಲಿ 30.85 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಿದ್ದು, 27 ಲಕ್ಷ ಟನ್‌ ಇಳುವರಿ ಬರುವ ನಿರೀಕ್ಷೆ ಇದೆ. ಹಿಂಗಾರಿನಲ್ಲಿ 64 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದ್ದು, 75 ಲಕ್ಷ ಟನ್‌ ಇಳುವರಿ ಬರುವ ನಿರೀಕ್ಷೆ ಇದೆ ಎಂದು ಹೇಳಿದರು.

English summary
Karnataka Government has fixed MSP - Minimum support Price for Ragi at Rs 2,300. Agriculture minister Krishna Byre Gowda told media persons in Bengaluru. Present price rs 1,700 per Quintal. Central Govt MSP 1,900.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X