ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಚಕ್ರವರ್ತಿ ಸೂಲಿಬೆಲೆಗೆ ಸಂಸದರಾಗೋ ಹುಚ್ಚಿಲ್ಲ!' ಬೆಂಬಲಕ್ಕೆ ನಿಂತ ದೇವೇಗೌಡ್ರು

|
Google Oneindia Kannada News

Recommended Video

ಸೂಲಿಬೆಲೆ ಬೆಂಬಲಕ್ಕೆ ನಿಂತ ದೇವೇಗೌಡರು..? | Chakravarty Sulibele | Oneindia Kannada

ಬೆಂಗಳೂರು, ಅಕ್ಟೋಬರ್ 05: ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಸಂಸದ ಡಿವಿ ಸದಾನಂದ ಗೌಡ ಅವರು ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಮಾಡಿದ್ದ ಟ್ವೀಟ್ ಇನ್ನೂ ಚರ್ಚೆಯಲ್ಲಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು, "ಚಕ್ರವರ್ತಿ ಸೂಲಿಬೆಲೆ ಅವರೊಬ್ಬ ಉತ್ತಮ ವಾಗ್ಮಿ. ಅವರನ್ನು ದೇಶದ್ರೋಹಿ ಎಂದು ಕರೆದಿರುವುದು ಸರಿಯಲ್ಲ. ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ಒಬ್ಬ ಪ್ರಜೆಯಾಗಿ ದನಿ ಎತ್ತಿದ್ದಾರೆ. ಆದರೆ ಅವರಿಗೆ ಶಾಸಕರಾಗುವ ಅಥವಾ ಸಂಸದರಾಗುವ ಹುಚ್ಚಿಲ್ಲ" ಎಂದು ಬೆಂಬಲ ಸೂಚಿಸಿದ್ದಾರೆ.

ದೇಶದ್ರೋಹಿ ಹೇಳಿಕೆಗೆ ಕ್ಷಮೆ ಕೋರುತ್ತೇನೆ, ಆದರೆ ಹಿಂಪಡೆಯೊಲ್ಲ: ಡಿವಿಎಸ್ದೇಶದ್ರೋಹಿ ಹೇಳಿಕೆಗೆ ಕ್ಷಮೆ ಕೋರುತ್ತೇನೆ, ಆದರೆ ಹಿಂಪಡೆಯೊಲ್ಲ: ಡಿವಿಎಸ್

ಡಿವಿ ಸದಾನಂದಗೌಡರ ಹೇಳಿಕೆಯನ್ನು ಈ ಮೂಲಕ ವಿರೋಧಿಸಿದ್ದಾರೆ.

ಚಕ್ರವರ್ತಿ ಟ್ವೀಟ್

ಚಕ್ರವರ್ತಿ ಟ್ವೀಟ್

'ರಾಜ್ಯಕ್ಕೆ ಕೇಂದ್ರದಿಂದ ನೆರೆ ಪರಿಹಾರ ಕೊಡಿಸುವಲ್ಲಿ ಬಿಜೆಪಿ ಸಂಸದರು ಎಡವಿದ್ದಾರೆ, ಮೋದಿ ನಾಮಬಲದಿಂದ ಗೆದ್ದ ಅವರಿಗೆ ಸ್ವಂತ ಶಕ್ತಿ ಇಲ್ಲ' ಎಂದು ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮಾಡಿದ್ದರು.

'ಸೂಲಿಬೆಲೆ ದೇಶದ್ರೋಹಿ': ಸದಾನಂದಗೌಡ ವಿರುದ್ಧ ಮುಗಿಬಿದ್ದ ಬಿಜೆಪಿ ಬೆಂಬಲಿಗರು'ಸೂಲಿಬೆಲೆ ದೇಶದ್ರೋಹಿ': ಸದಾನಂದಗೌಡ ವಿರುದ್ಧ ಮುಗಿಬಿದ್ದ ಬಿಜೆಪಿ ಬೆಂಬಲಿಗರು

ದೇಶದ್ರೋಹಿ ಎಂದಿದ್ದ ಸದಾನಂದಗೌಡ

ದೇಶದ್ರೋಹಿ ಎಂದಿದ್ದ ಸದಾನಂದಗೌಡ

ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದ ಸಂಸದ ಡಿವಿ ಸದಾನಂದ ಗೌಡ, "ಮಂತ್ರಿಗಿರಿ ಭಿಕ್ಷೆ ಅಂತ ನಮಗೆ ಹೇಳುವವರು, ಚಪ್ಪಾಳೆ ಗಿಟ್ಟಿಸಿಕೊಂಡು ದೇಶ ಕಟ್ಟುವವರು ಎಂದು ಹೇಳಿಕೊಳ್ಳುವವರು. ಈ ರೀತಿಯ ಮಾತುಗಳು ಸರಿಯಲ್ಲ. ಹಾರಿಕೆ ಸುದ್ದಿ ಹರಡುವವರು ದೇಶ ದ್ರೋಹಿಗಳು ಎಂದು ಗಾಂಧೀಜಿ ಹೇಳಿದ್ದಾರೆ. ಇವರೆಲ್ಲಾ ಅದೇ ಬ್ರಾಂಡ್‌ಗೆ ಸೇರುತ್ತಾರೆ" ಎಂದಿದ್ದರು.

ಚಕ್ರವರ್ತಿ ಪರ ನಿಂದ ಸಾಮಾಜಿಕ ಮಾಧ್ಯಮ

ಚಕ್ರವರ್ತಿ ಪರ ನಿಂದ ಸಾಮಾಜಿಕ ಮಾಧ್ಯಮ

ಈ ಹೇಳಿಕೆಯ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಸದಾನಂದ ಗೌಡರ ಹೇಳಿಕೆಯ ವಿರುದ್ಧ ಮತ್ತು ಪರ ಚರ್ಚೆಗಳಾದವಾದರೂ ಹೆಚ್ಚಿನ ಜನ ಚಕ್ರವರ್ತಿ ಸೂಲಿಬೆಲೆ ಅವರ ಪರ ನಿಂತರು. ಸಂಸದರಾಗಿ ಒಬ್ಬ ವ್ಯಕ್ತಿಯನ್ನು ಹೀಗೆ ದೇಶದ್ರೋಹಿ ಎಂದು ಘೋಷಿಸುವುದು ಎಷ್ಟು ಸರಿ? ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವುದೇ ಅಪರಾದವೇ ಎಂಬಿತ್ಯಾದಿ ಪ್ರಶ್ನೆಗಳು ಎದ್ದವು.

ಚಕ್ರವರ್ತಿ ಸೂಲಿಬೆಲೆಗೆ ದೇಶದ್ರೋಹ ಪಟ್ಟ: ಟ್ವಿಟ್ಟಿಗರ ಅಭಿಪ್ರಾಯವೇನು?ಚಕ್ರವರ್ತಿ ಸೂಲಿಬೆಲೆಗೆ ದೇಶದ್ರೋಹ ಪಟ್ಟ: ಟ್ವಿಟ್ಟಿಗರ ಅಭಿಪ್ರಾಯವೇನು?

ಕೊನೆಗೂ ಕ್ಷಮೆ ಯಾಚಿಸಿದ ಡಿವಿಎಸ್

ಕೊನೆಗೂ ಕ್ಷಮೆ ಯಾಚಿಸಿದ ಡಿವಿಎಸ್

ಈ ಬೆಳವಣಿಗೆಯ ನಂತರ ಬಿಜೆಪಿಯವರೇ ಕೆಲವರು ತಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದನ್ನು ನೋಡಿ ಎಚ್ಚೆತ್ತುಕೊಂಡ ಸದಾನಂದ ಗೌಡ, 'ನಾನು ಚಕ್ರವರ್ತಿ ಸೂಲಿಬೆಲೆ ಅವರ ಹೆಸರನ್ನೇ ಪ್ರಸ್ತಾಪಿಸಿರಲಿಲ್ಲ. ಆದರೆ ಮಾಧ್ಯಮದವರು ಅವರ ಹೆಸರನ್ನು ಸುಮ್ಮನೆ ಹಾಕುತ್ತಿದ್ದಾರೆ. ಹಾರಿಕೆ ಸುದ್ದಿ ಹರಡುವವರು ದೇಶದ್ರೋಹಿಗಳು ಎನ್ನುವುದು ಗಾಂಧೀಜಿ ಅವರ ಮಾತು. ಮೋದಿ ಬಗ್ಗೆ ಟೀಕೆಗಳನ್ನು ಮಾಡಿರುವುದಕ್ಕೆ ಅವರ ಸಂಪುಟದ ಸಚಿವನಾಗಿ ಹಾಗೆ ಪ್ರತಿಕ್ರಿಯೆ ನೀಡಿದ್ದೇನೆ. ಇದರಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ" ಎಂದರು.

English summary
Karnataka Flood Relief Issue: HD Deve Gowda Backs Chakravarty Sulibele,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X