• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಟ್ವಿಟರ್ ಖಾತೆ ಹ್ಯಾಕ್..!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 03: ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಅಧಿಕೃತ ಟ್ವಿಟರ್ ಖಾತೆಯನ್ನ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಅಧಿಕೃತ ಪ್ರಕಟಣೆ ಈ ವಿಚಾರವನ್ನು ತಿಳಿಸಲಾಗಿದೆ.

ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸಲು ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಹೊಂದಿದ್ದ ಟ್ವಿಟರ್ ಖಾತೆಯಯನ್ನ ಎರಡು ದಿನಗಳ ಹಿಂದೆ ಹ್ಯಾಕ್ ಮಾಡಲಾಗಿದ್ದು, ಅಸಂಬದ್ಧವಾಗಿ ಸರಣಿ ಟ್ವೀಟ್ ಮಾಡಲಾಗುತ್ತಿದೆ.

ಸದ್ಯ ಖಾತೆ ಹ್ಯಾಕ್ ಆಗಿರುವುದನ್ನ ಗಮನಿಸಿರುವ ಇಲಾಖೆಯ ಡಿಜಿಟಲ್ ಕಮ್ಯುನಿಕೇಷನ್ ತಂಡ ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ನೀಡಿದ್ದು ಪರಿಶೀಲನೆ ನಡೆಸಲಾಗುತ್ತಿದೆ.

ಸೈಬರ್ ಖದೀಮರು ಹ್ಯಾಕರ್ ಗಳು ಸರ್ಕಾರದ ವಿವಿಧ ಇಲಾಖೆಯ ಟ್ಲಿಟ್ಟರ್ ಖಾತೆಗಳನ್ನು ಆಗಿಂದಾಗ್ಗೆ ಹ್ಯಾಕ್ ಮಾಡುವ ಮೂಲಕ ಸೈಬರ್ ಪೊಲೀಸರಿಗೆ ಸವಾಲಾಗಿ ಪರಿಣಮಿಸುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ಅನಾವಶ್ಯಕ ಸಂದೇಶಗಳನ್ನು ಹಾಕುತ್ತಿದ್ದ ಖದೀಮರ ವಿರುದ್ದ ಸೈಬರ್ ಠಾಣೆಗೆ ದೂರನ್ನು ನೀಡಲಾಗಿದೆ.

Karnataka Fire and Emergency Services Department Official Twitter account on hacked!

ಈ ಹಿಂದೆಯೂ ಸಹ ಸೈಬರ್ ವಂಚಕರು ಜಯನಗರ ಸಂಚಾರಿ ಪೊಲೀಸ್, ವಿವೇಕನಗರ ಪೊಲೀಸ್ ಠಾಣೆ ಸೇರಿದಂತೆ ಅನೇಕ ಅಧಿಕೃತ ಟ್ವಿಟರ್ ಖಾತೆಗಳನ್ನ ಹ್ಯಾಕ್ ಮಾಡಿ ಅಸಂಬದ್ಧ ಟ್ವೀಟ್ ಮಾಡಿರುವ ಪ್ರಕರಣಗಳು ವರದಿಯಾಗಿದ್ದವು.

English summary
Miscreants have hacked the official Twitter account of the State Fire and Emergency Services Department. The official announcement of the State Fire and Emergency Services Department has informed this matter, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X