ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್-19 ಎದುರಿಸಲು 2 ಕೋಟಿ ರು ಕೊಟ್ಟ ಸಂಸದ ಮೋಹನ್

|
Google Oneindia Kannada News

ಬೆಂಗಳೂರು, ಮಾರ್ಚ್ 26: ಕೇಂದ್ರ ಬಿಜೆಪಿ ಸಂಸದ ಪಿಸಿ ಮೋಹನ್ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ, ಕೊವಿಡ್19 ವಿರುದ್ಧ ಹೋರಾಟಕ್ಕಾಗಿ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 2 ಕೋಟಿ ರೂ ನೀಡಿದರು.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ COVID19 ವಾರ್ಡ್‌ನಲ್ಲಿ ಬಳಸಲು ವೈಯಕ್ತಿಕ ರಕ್ಷಣಾ ಸಲಕರಣೆ, ವೈದ್ಯಕೀಯ ಕಿಟ್‌ಗಳು, ವೆಂಟಿಲೇಟರ್‌ಗಳು, N95 ಮಾಸ್ಕ್ ಗಳು ಮತ್ತು ಇತರ ಉಪಕರಣಗಳ ತುರ್ತು ಖರೀದಿಗೆ ತಮ್ಮ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 2 ಕೋಟಿ ರೂ. ಬಿಡುಗಡೆ ಮಾಡಿರುವ ಪತ್ರವನ್ನು ನೀಡಿದರು. ಈ ಸಂದರ್ಭದಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಆರ್.ಅಶೋಕ್, ಡಾ.ಕೆ ಸುಧಾಕರ್ ಉಪಸ್ಥಿತರಿದ್ದರು.

ಕೇಂದ್ರ ಸರ್ಕಾರ ಸರಿಯಾದ ದಿಕ್ಕಿಗೆ ಮೊದಲ ಹಜ್ಜೆ ಇಟ್ಟಿದೆ: ರಾಹುಲ್ ಗಾಂಧಿಕೇಂದ್ರ ಸರ್ಕಾರ ಸರಿಯಾದ ದಿಕ್ಕಿಗೆ ಮೊದಲ ಹಜ್ಜೆ ಇಟ್ಟಿದೆ: ರಾಹುಲ್ ಗಾಂಧಿ

ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್-19 ಪ್ರತ್ಯೇಕ ನಿಗಾ ಘಟಕದಲ್ಲಿ ತುರ್ತಾಗಿ ವೆಂಟಿಲೇಟರ್ ಗಳು, ಅಗತ್ಯ ವೈದ್ಯಕೀಯ ಪರಿಕರಗಳ ಖರೀದಿಗೆ ಮೋಹನ್ ತಮ್ಮ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 2 ಕೋಟಿ ರೂ. ಮೊತ್ತವನ್ನು ಇಂದು ಬಿಡುಗಡೆ ಮಾಡಿದ್ದಾರೆ.

Karnataka fight against Covid19: MP PC Mohan donotes Rs 2 Cr to CM Relief fund

ಕೊರೋನಾ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 1700 ಹಾಸಿಗೆಗಳ ಪ್ರತ್ಯೇಕ ಘಟಕ ಘೋಷಣೆಯಾದ ಬೆನ್ನಲ್ಲೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬೇಕಾದ ಎಲ್ಲ ಉಪಕರಣಗಳ ಸಿದ್ಧತೆಗೆ ಜನಪ್ರತಿನಿಧಿಗಳು ಕೂಡ ಕೈಜೋಡಿಸಿದ್ದಾರೆ. ಪ್ರಸಕ್ತ ಬಿಕ್ಕಟ್ಟನ್ನು ಎದುರಿಸಲು ಸಾಧ್ಯವಿರುವ ಎಲ್ಲಾ ಸಹಕಾರವನ್ನು ತಾವು ಸರ್ಕಾರಕ್ಕೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಕೊರೋನ ಎದುರಿಸಲು ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಶ್ಲಾಘಿಸಿರುವ ಮೋಹನ್, ಈಗಾಗಲೇ ರಾಜ್ಯ ಸರ್ಕಾರವ 1700 ಹಾಸಿಗೆಗಳನ್ನೊಳಗೊಂಡ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸಮುಚ್ಚಯವನ್ನು ಕೋವಿಡ್-19 ಸೋಂಕಿತರಿಗಾಗಿ ಪ್ರತ್ಯೇಕವಾಗಿರಿಸಿದ್ದು, ಈ ಆಸ್ಪತ್ರೆ ಸಮುಚ್ಚಯಗಳ ತೀವ್ರ ನಿಗಾ ಘಟಕಗಳಲ್ಲಿ ಅತ್ಯಾವಶ್ಯವಾಗಿರುವ ವೆಂಟಿಲೇಟರ್ ಸೌಲಭ್ಯ, ಎನ್-95 ರೆಸ್ಪಿರೇಟರ್ಸ್ ಮತ್ತು ಸರ್ಜಿಕಲ್ ಮಾಸ್ಕ್ ಸೇರಿದಂತೆ ಪರ್ಸನಲ್ ಪ್ರೊಟೆಕ್ಟೀವ್ ಉಪಕರಣಗಳೇ ಮೊದಲಾದ ಅಗತ್ಯ ಪರಿಕರಗಳನ್ನು ತುರ್ತಾಗಿ ಖರೀದಿಸಲು ತಮ್ಮ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 2 ಕೋಟಿ ರೂ. ನೀಡುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

English summary
Karnataka fight against Covid19: MP PC Mohan today donoted Rs 2 Cr from his MP fund to Karnataka CM Relief fund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X