• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿದ್ಯುತ್ ದರ ಏರಿಕೆ ಮಧ್ಯೆ ಲೋಡ್ ಶೆಡ್ಡಿಂಗ್ ಕೊಡುಗೆ

By Srinath
|

ಬೆಂಗಳೂರು, ಮೇ 12- 'ಲೋಕಸಭೆ ಚುನಾವಣೆ ಮುಗಿಯಲಿ ಅಂತ್ಲೇ ಕಾಯ್ತಿದ್ದಿವಿ. ಹಾಗಾಗಿ ಇದೀಗ ಒಂದೊಂದೇ ಸರಕು/ಸೇವೆಗಳ ದರಗಳನ್ನು ಏರಿಸುತ್ತಿದ್ದೇವೆ' ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಆಘಾತಕಾರಿ ಹೇಳಿಕೆ ನೀಡಿದ ಮೇಲೆ ವಿದ್ಯುತ್ ದರ ಈ ತಿಂಗಳಿಂದಲೇ ಜಾರಿಗೆ ಬರುವಂತೆ ಇಂದು ಏರಿಸಲಾಗಿದೆ.

ಹೌದು, ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 66 ಪೈಸೆ ಹೆಚ್ಚಿಸುವಂತೆ ವಿದ್ಯುತ್ ವಿತರಣೆ ಕಂಪನಿಗಳು ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿದ್ದವು. ಅದರಂತೆ ರಾಜ್ಯದ ಎಲ್ಲ ಐದು ವಿದ್ಯುತ್ ವಿತರಣಾ ಕಂಪನಿಗಳ (ಎಸ್ಕಾಂ) ವ್ಯಾಪ್ತಿಯಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ ಸಿ) ಇಂದು ಸೋಮವಾರ ನಿರೀಕ್ಷೆಯಂತೆ 32 ಪೈಸೆಯಷ್ಟು ದರ ಹೆಚ್ಚಳ ಮಾಡಿದೆ. ಆಯೋಗದ ಅಧ್ಯಕ್ಷ ಎಂಆರ್ ಶ್ರೀನಿವಾಸಮೂರ್ತಿ ದರ ಏರಿಕೆಯನ್ನು ಸುದ್ದಿಗೋಷ್ಠಿಯಲ್ಲಿ ಇದೀಗತಾನೆ ಪ್ರಕಟಿಸಿದ್ದಾರೆ.

ವಿದ್ಯುತ್ ಕಂಪನಿಗಳನ್ನು ನಷ್ಟದಿಂದ (1229 ಕೋಟಿ ರೂ. ನಷ್ಟ) ಬಚಾವ್ ಮಾಡಲು, ಗ್ರಾಹಕರ ಹಿತದೃಷ್ಟಿಯಿಂದ ಈ ದರ ಏರಿಕೆ ಮಾಡಲಾಗಿದೆ. ಎಲ್ಲಾ ಐದು ವಿದ್ಯುತ್ ಕಂಪನಿಗಳಿಂದ ಯೂನಿಟ್‌ಗೆ 66 ಪೈಸೆ ಹೆಚ್ಚಳ ಮಾಡಬೇಕೆಂದು ಬೇಡಿಕೆ ಬಂದಿತ್ತು. ವಿದ್ಯುತ್ ನಿಯಂತ್ರಣ ಆಯೋಗ ಪರಿಶೀಲಿಸಿ ರೈತರು, ಗ್ರಾಹಕರು, ವಿದ್ಯುತ್ ಕಂಪನಿಗಳು, ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು ಮುಂತಾದವರಿಂದ ಅಹವಾಲು ಸ್ವೀಕರಿಸಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದರು.

ನಾಲ್ಕೂವರೆ ವರ್ಷದಲ್ಲಿ 6ನೇ ಬಾರಿ: 2009ರ ನವೆಂಬರ್‌ ತಿಂಗಳಿಂದ ಕಳೆದ ನಾಲ್ಕೂವರೆ ವರ್ಷದಲ್ಲಿ ವಿದ್ಯುತ್ ದರ ಹೆಚ್ಚಳವಾಗುತ್ತಿರುವುದು ಇದು 6ನೇ ಬಾರಿಯಾಗಿದೆ. ಈಗಾಗಲೇ ಬಸ್ ಪ್ರಯಾಣ ದರ ಏರಿಕೆಯಾಗಿದೆ. ನೀರಿನ ಶುಲ್ಕ ಹೆಚ್ಚಳ ಸಾಧ್ಯತೆ ಸದ್ಯದಲ್ಲೇ ಇದೆ. ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್‌ ದರ ಏರಿಕೆ ಇಲ್ಲ.

ಗೃಹ ಬಳಕೆ ಪ್ರಮಾಣ 30 ಯೂನಿಟಿಗಿಂತ ಕಡಿಮೆ ಇದ್ದರೆ 32 ಪೈಸೆ ಹೆಚ್ಚಳ ಮಾಡಲಾಗಿದೆ. ಇದಕ್ಕಿಂತ ಮೇಲಿದ್ದರೆ 30 ಪೈಸೆ ಹೆಚ್ಚಳ ನಿಗದಿ ಮಾಡಲಾಗಿದೆ. ನಗರ ಪ್ರದೇಶಗಳಲ್ಲಿ 30 ಯೂನಿಟ್‌ ವೊಳಗಿದ್ದರೆ 2.70 ಪೈಸೆ, 30-100 ಯೂನಿಟ್‌ ವರೆಗಿದ್ದರೆ 4 ರೂ. ಅದಕ್ಕಿಂತ ಜಾಸ್ತಿ ಇದ್ದರೆ 6.25 ರೂ. ಆಗುತ್ತದೆ. ವಾಣಿಜ್ಯ ಮತ್ತು ಕೈಗಾರಿಕಾ ವಲಯಕ್ಕೆ 30 ರಿಂದ 40 ಪೈಸೆ ಹೆಚ್ಚಳ ಮಾಡಲಾಗಿದೆ. ನಗರದ ಅಪಾರ್ಟ್‌ ಮೆಂಟುಗಳಲ್ಲಿ 4.90 ಪೈಸೆ ಇದ್ದ ವಿದ್ಯುತ್ ದರವನ್ನು 5.35 ಪೈಸೆಗೆ ಏರಿಸಲಾಗಿದೆ.

ಲೋಡ್ ಶೆಡ್ಡಿಂಗ್ ಅನಿವಾರ್ಯ: ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಪ್ರಮಾಣ ಹೆಚ್ಚಾಗಿ ಉತ್ಪಾದನೆ ಕೊರತೆ ಇರುವ ಕಾರಣ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಿ ಮುಂದುವರಿಯಲಿದೆ ಎಂದು ಕೆಇಆರ್‌ಸಿ ಅಧ್ಯಕ್ಷ ಶ್ರೀನಿವಾಸಮೂರ್ತಿ ಸ್ಪಷ್ಟಪಡಿಸಿದ್ದಾರೆ.

ಯಾವ ಎಸ್ಕಾಂನಲ್ಲಿ ಎಷ್ಟು ಏರಿಕೆ?:

ಬೆಂಗಳೂರು ವಿದ್ಯುತ್ ಸರಬರಾಜು ನಿಗಮ -ಬೆಸ್ಕಾಂ, ಹಾಸನ ವಿದ್ಯುತ್ ಸರಬರಾಜು ನಿಗಮ - ಹೆಸ್ಕಾಂ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ -ಚೆಸ್ಕಾಂ, ಮಂಗಳೂರು ವಿದ್ಯುತ್ ಸರಬರಾಜು ನಿಗಮ - ಮೆಸ್ಕಾಂ ಮತ್ತು ಗುಲ್ಬರ್ಗ ವಿದ್ಯುತ್ ಸರಬರಾಜು ನಿಗಮ - ಗೆಸ್ಕಾಂ ವಲಯಗಳಲ್ಲಿ ಈ ದರ ನೀತಿ ಏಕ ರೀತಿಯಲ್ಲಿ ಮೇ 1ರಿಂದ ಜಾರಿಗೆ ಬಂದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka ESCOMs power tariff hike by KERC on May 12. Unit price of electricity has been hiked with immediate effect in all the five Escoms by Karnataka Electricity Regulatory Commission (KERC) on May 12, 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more