ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲ್ಲೇಶ್ವರದಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ : ಎಂ.ಆರ್.ಸೀತಾರಾಮ್

|
Google Oneindia Kannada News

ಬೆಂಗಳೂರು, ಏಪ್ರಿಲ್ 22 : 'ಮಲ್ಲೇಶ್ವರ ಕ್ಷೇತ್ರದಿಂದ ಕಣಕ್ಕಿಳಿಯಲು ನನಗೆ ಆಸಕ್ತಿ ಇಲ್ಲ' ಎಂದು ಸಚಿವ ಎಂ.ಆರ್.ಸೀತಾರಾಮ್ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್‌ ಕ್ಷೇತ್ರದಲ್ಲಿ ಸಚಿವ ಎಂ.ಆರ್.ಸೀತಾರಾಮ್ ಅವರು ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು.

'ಚುನಾವಣೆಗೆ ಸಜ್ಜಾಗುವಂತೆ ವರಿಷ್ಠರು ಕನಿಷ್ಠ ಪಕ್ಷ ಮೂರು ತಿಂಗಳ ಮೊದಲಾದರೂ ಸೂಚನೆ ನೀಡಿದ್ದರೆ ನನಗೂ ಕಾಲಾವಕಾಶ ಸಿಗುತ್ತಿತ್ತು. ಪಕ್ಷ ಕೊನೆ ಗಳಿಗೆಯಲ್ಲಿ ಏಕಾಏಕಿ ಹೆಸರನ್ನು ಪ್ರಕಟಿಸಿದೆ. ಹಾಗಾಗಿ ಈ ಬಾರಿ ಇಲ್ಲಿಂದ ಸ್ಪರ್ಧಿಸುವುದಿಲ್ಲ. ಪಕ್ಷದ ವರಿಷ್ಠರಿಗೂ ಈ ಕುರಿತು ತಿಳಿಸಿದ್ದೇನೆ' ಎಂದು ಹೇಳಿದರು.

ಮಲ್ಲೇಶ್ವರಂ ಕ್ಷೇತ್ರದಿಂದ ಟಿಕೆಟ್ ಬಯಸಿಲ್ಲಮಲ್ಲೇಶ್ವರಂ ಕ್ಷೇತ್ರದಿಂದ ಟಿಕೆಟ್ ಬಯಸಿಲ್ಲ

'10 ವರ್ಷಗಳಲ್ಲಿ ಅನೇಕ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ನಾನು ಇಲ್ಲಿನ ಶಾಸಕನಾಗಿದ್ದಾಗ ನಡೆದಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅವರಿಗೆ ಅಷ್ಟಾಗಿ ತಿಳಿದಿಲ್ಲ. ಇಲ್ಲಿ ಚುನಾವಣೆಗೆ ಸ್ಪರ್ಧಿಸಲು ಪಕ್ಷದ ಕೆಲವು ಮುಖಂಡರು ಸಿದ್ಧತೆ ಮಾಡಿಕೊಂಡಿದ್ದಾರೆ' ಎಂದು ಸಚಿವರು ಹೇಳಿದರು.

Karnataka elections : MR Seetharam will not contest for elections

'ಇಲ್ಲಿನ ಪಾಲಿಕೆ ಸದಸ್ಯರು ಹಾಗೂ ಸ್ಥಳೀಯ ಮುಖಂಡರ ಜೊತೆ ಸಮಾಲೋಚನೆ ನಡೆಸಿದ್ದೇನೆ ಅವರೂ ಇದೇ ಅಭಿಪ್ರಾಯ ಹೊಂದಿದ್ದಾರೆ. ಈ ಬಾರಿಯ ಚುನಾವಣೆ ಸ್ಪರ್ಧಿಸುವುದಿಲ್ಲ. ಪಕ್ಷದ ವರಿಷ್ಠರಿಗೂ ಈ ಕುರಿತು ಮಾಹಿತಿ ನೀಡಿದ್ದೇನೆ' ಎಂದು ಎಂ.ಆರ್.ಸೀತಾರಾಮ್ ತಿಳಿಸಿದರು.

ಮಲ್ಲೇಶ್ವರಂನಲ್ಲಿ ಕಮಲದ ಕಂಪು ಮತ್ತೆ ಹರಡುವುದೇ?ಮಲ್ಲೇಶ್ವರಂನಲ್ಲಿ ಕಮಲದ ಕಂಪು ಮತ್ತೆ ಹರಡುವುದೇ?

ಯೋಜನೆ, ಸಾಂಖ್ಯಿಕ, ಹಣಕಾಸು ಮತ್ತು ಅನುಷ್ಠಾನ ಖಾತೆ ಸಚಿವರಾದ ಎಂ.ಆರ್.ಸೀತಾರಾಮ್, 'ನಾನು ಮತ್ತು ನನ್ನ ಮಗ ಮಲ್ಲೇಶ್ವರಂ ಕ್ಷೇತ್ರದ ಟಿಕೆಟ್ ಬಯಸಿಲ್ಲ' ಎಂದು ಹೇಳಿದ್ದರು. ಆದರೆ, ಕಾಂಗ್ರೆಸ್ ಪಕ್ಷ ಅಭ್ಯರ್ಥಿಯಾಗಿ ಘೋಷಣೆ ಮಾಡಿತ್ತು.

ಮಲ್ಲೇಶ್ವರಂನಿಂದ ರಾಕ್‌ಲೈನ್ ವೆಂಕಟೇಶ್ ಕಾಂಗ್ರೆಸ್ ಅಭ್ಯರ್ಥಿ?ಮಲ್ಲೇಶ್ವರಂನಿಂದ ರಾಕ್‌ಲೈನ್ ವೆಂಕಟೇಶ್ ಕಾಂಗ್ರೆಸ್ ಅಭ್ಯರ್ಥಿ?

ಯಾರು ಅಭ್ಯರ್ಥ? : ಎಂ.ಆರ್.ಸೀತಾರಾಮ್ ಅವರು ಚುನಾವಣೆಗೆ ಸ್ಪರ್ಧಿಸಲು ನಿರಾರಿಸಿದ್ದಾರೆ. ಹಾಗಾಗದರೆ ಮಲ್ಲೇಶ್ವರಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂಬ ಪ್ರಶ್ನೆ ಎದ್ದಿದೆ. ಕ್ಷೇತ್ರದಲ್ಲಿ ಮೂವರು ಟಿಕೆಟ್ ಆಕಾಂಕ್ಷಿಗಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಮೊಮ್ಮಗ ಶ್ರೀಪಾದ ರೇಣು, ಪಾಲಿಕೆಯ ಮಾಜಿ ಸದಸ್ಯ ಗಿರೀಶ್ ಲಕ್ಕಣ್ಣ, ವಕೀಲ ಕೆ.ದಿವಾಕರ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು. ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಮೊಮ್ಮಗ ಶ್ರೀಪಾದ ರೇಣು, ಪಾಲಿಕೆಯ ಮಾಜಿ ಸದಸ್ಯ ಗಿರೀಶ್ ಲಕ್ಕಣ್ಣ, ವಕೀಲ ಕೆ.ದಿವಾಕರ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು.

ಎಂ.ಆರ್.ಸೀತಾರಾಮ್ ಎರಡು ಬಾರಿ (1999, 2004) ಮಲ್ಲೇಶ್ವರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಸದ್ಯ ಅವರು ವಿಧಾನಪರಿಷತ್ ಸದಸ್ಯರಾಗಿದ್ದು, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದಾರೆ. 2013ರ ಚುನಾವಣೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು.

2018ರ ಚುನಾವಣೆಗೆ ಡಾ.ಅಶ್ವಥ್ ನಾರಾಯಣ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಇನ್ನೂ ಅಂತಿಮಗೊಳಿಸಿಲ್ಲ.

English summary
Member of legislative council, Minister for Planning, Statistics, Science and Technology M.R. Seetharam said that, he will not contest for Karnataka assembly elections 2018 from Malleshwaram constituency, Bengaluru. Party announced his name as candidate for constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X