ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಗ್ರಾಮಾಂತರ ಮತಗಟ್ಟೆ ಸಿಬ್ಬಂದಿಗಳಿಗೆ ನಾಳೆ ತರಬೇತಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 21: ಬೆಂಗಳೂರು ಗ್ರಾಮಾಂತರದ ಚುನಾವಣೆ ಮತಗಟ್ಟೆಗಳ ನಿಯೋಜಿತ ಅಧಿಕಾರಿ-ಸಿಬ್ಬಂದಿಗಳಿಗೆ ಭಾನುವಾರ ತರಬೇತಿ ನಡೆಯಲಿದೆ.

ಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಸಾರ್ವತ್ರಿಕ ಚುನಾವಣೆ 2018ರ ಸಂಬಂಧ ಚುನಾವಣಾ ಕಾರ್ಯಕ್ಕಾಗಿ ಪ್ರಜಾಪ್ರತಿನಿಧಿಗಳ ಕಾಯ್ದೆ 1951 ಕಲಂ 26(1)(3) ಅನ್ವಯ ಸಹಾಯಕ ಮತಗಟ್ಟೆ ಅಧ್ಯ್ಷಾಧಿಕಾರಿ ಹಾಗೂ ಮತಗಟ್ಟೆ ಸಿಬ್ಬಂದಿಗಳನ್ನು ನೇಮಕಮಾಡಿ, ನೇಮಕಾತಿ ಆದೇಶಗಳನ್ನು ಈಗಾಗಲೇ ಹೊರಡಿಸಲಾಗಿದೆ.

ಪರಿಷ್ಕೃತ ವೇತನ ಜಾರಿಗೆ ಚುನಾವಣಾ ಆಯೋಗ ಒಪ್ಪಿಗೆಪರಿಷ್ಕೃತ ವೇತನ ಜಾರಿಗೆ ಚುನಾವಣಾ ಆಯೋಗ ಒಪ್ಪಿಗೆ

ನೇಮಕಗೊಂಡಿರುವ ಅಧ್ಯಕ್ಷಾಧಿಕಾರಿ(ಪಿಆರ್ ಒ) ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ(ಎಪಿಆರ್ ಒ ) ಗಳಿಗೆ ಏಪ್ರಿಲ್ 22ರಂದು ಅವರ ನೇಮಕಾತಿ ಆದೇಶದಲ್ಲಿ ನಮೂದಿಸಿರುವ ಸ್ಥಳದಲ್ಲಿ ತರಬೇತಿ ಕಾರ್ಯಕ್ಕೆ ಹಾಜರಾಗಬೇಕು, ಎಲ್ಲ ಮತಗಟ್ಟೆ ಸಿಬ್ಬಂದಿಗೆ ನೇಮಕಾತಿ ಆದೇಶವನ್ನು ಜಾರಿಮಾಡಲು ಕ್ರಮ ಕೈಗೊಳ್ಳಲಾಗುತ್ತದೆ.

karnataka elections: EC issues orders to presiding officers

ಒಂದು ವೇಳೆ ನೇಮಕಾತಿ ಆದೇಶ ಜಾರಿ ಆಗಿರುವುದಿಲ್ಲ ಎಂಬ ಕಾರಣ ತೋರಿಸಿ ತರಬೇತಿಗೆ ಹಾಜರಾಗಲು ಸಾಧ್ಯವಿಲ್ಲ ಎಂಬ ಕಾರಣವನ್ನು ನೀಡಬಾರದು. ಮತಗಟ್ಟೆ ಕಾರ್ಯಕ್ಕೆ ನೇಮಕಗೊಂಡಿರುವ ಬಗ್ಗೆ ಚುನಾವಣಾಧಿಕಾರಿ/ಸಹಾಯಕ ಚುನಾವಣಾಧಿಕಾರಿ ಕಚೇರಿಯಿಂದ ದೂರವಾಣಿ ಮೂಲಕ ತಿಳಿಸಿದರೂ ಕೂಡ ಅದನ್ನು ನೇಮಕಾತಿ ಆದೇಶವೆಂದು ಗಣನೆಗೆ ತೆಗೆದುಕೊಂಡು ನಿಗದಿಪಡಿಸಿರುವ ದಿನಾಂಕದಂದು ತರಬೇತಿ ಕಾರ್ಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕಿದೆ.

ತಪ್ಪಿದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ 1951ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರದನ್ವಯ ಗೈರು ಹಾಜರಾಗುವ ಮತಗಟ್ಟೆ ಅಧಿಕಾರಿಗಳನ್ನು ತಕ್ಷಣವೇ ನಿಲಂಬನೆಯಲ್ಲಿಟ್ಟು ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಸ್. ಪಾಲಯ್ಯ ತಿಳಿಸಿದ್ದಾರೆ.

English summary
Election commission has issued order to presiding officers and assistant presiding officers for state assembly elections. The election commission will hold a training for all presiding and assistant presiding officers on this sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X