ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿಕಾರಿಪುರದ ಹೆಣ್ಣುಬಾಕನ ಸಿಡಿ ಹಾಲಪ್ಪಗೆ ಸಿಕ್ಕಿರಬೇಕು ಎಂದ ಬೇಳೂರು

By Manjunatha
|
Google Oneindia Kannada News

Recommended Video

Karnataka Elections 2018 : ಯಡಿಯೂರಪ್ಪರನ್ನ ಹೆಣ್ಣು ಬಾಕ ಎಂದು ಕರೆದ ಬೇಳೂರು ಗೋಪಾಲಕೃಷ್ಣ | Oneindia Kannada

ಬೆಂಗಳೂರು, ಏಪ್ರಿಲ್ 19: ಶಿಕಾರಿಪುರದಲ್ಲಿ ಒಬ್ಬ ಹೆಣ್ಣುಬಾಕ ಇದ್ದಾನೆ ಅವನ ಸಿಡಿ ಹಾಲಪ್ಪಗೆ ಸಿಕ್ಕಿರಬೇಕು, ಅದನ್ನೇ ತೋರಿಸಿ ಹೆದರಿಸಿ ಬಿಎಸ್‌ವೈ ನಿಂದ ಟಿಕೆಟ್ ಗಿಟ್ಟಿಸಿದ್ದಾನೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಹೇಳಿದರು.

ಸಾಗರದಲ್ಲಿ ಬೇಳೂರು ಬೆಂಬಲ ಗಿಟ್ಟಿಸುವ ಯತ್ನದಲ್ಲಿ ಹಾಲಪ್ಪ ಸಾಗರದಲ್ಲಿ ಬೇಳೂರು ಬೆಂಬಲ ಗಿಟ್ಟಿಸುವ ಯತ್ನದಲ್ಲಿ ಹಾಲಪ್ಪ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಜೆಪಿಯಿಂದ ಬಂದವರಿಗೆಲ್ಲಾ ಟಿಕೆಟ್ ನೀಡಲಾಗಿದೆ, ನಾನು ಬಿಜೆಪಿಗೆ ನಿಷ್ಠನಾಗಿದ್ದು ಕೆಜೆಪಿಗೆ ಹಾರದೇ ಇದ್ದದ್ದಕ್ಕೆ ಈಗ ಶಿಕ್ಷೆ ನೀಡಲಾಗುತ್ತಿದೆ, ನಮ್ಮ ಕಾರ್ಯಕರ್ತರ ಶಾಪ ಯಡಿಯೂರಪ್ಪಗೆ ತಟ್ಟದೆ ಇರದು ಎಂದರು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಯಡಿಯೂರಪ್ಪ ಅವರು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಅವರು, ಶಿಕಾರಿಪುರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕಿಳಿಸದಂತೆ ನೋಡಿಕೊಂಡಿದ್ದಾರೆ ಎಂದರು.

ಸಾಗರ: ಬಂಡಾಯ ಅಭ್ಯರ್ಥಿಯಾಗಿ ಗೋಪಾಲಕೃಷ್ಣ ಕಣಕ್ಕೆ ಸಾಗರ: ಬಂಡಾಯ ಅಭ್ಯರ್ಥಿಯಾಗಿ ಗೋಪಾಲಕೃಷ್ಣ ಕಣಕ್ಕೆ

Karnataka elections: Belur Gopalakrishna lambasted on Yeddyurappa

'ನನಗೆ ಜೆಡಿಎಸ್‌ನಿಂದ ಬುಲಾವ್ ಬಂದಿದೆ ಆದರೆ ನಾನು ಹೋಗುವುದಿಲ್ಲ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ನನ್ನ ಬಲವನ್ನು ಯಡಿಯೂರಪ್ಪಗೆ ಸಾಬೀತು ಮಾಡುತ್ತೇನೆ, ಹಾಲಪ್ಪನನ್ನು ಸೋಲಿಸುವುದೇ ನನ್ನ ಗುರಿ' ಎಂದರು. ಜೆಡಿಎಸ್‌ ಪಕ್ಷವು ಬಾಹ್ಯವಾಗಿ ಅಥವಾ ಆಂತರಿಕವಾಗಿ ನನಗೆ ಬೆಂಬಲ ನೀಡಿದರೆ ನಾನು ಬೇಡವೆನ್ನುವುದಿಲ್ಲ ಎಂದರು.

ಸಾಗರದಿಂದ ಗೋಪಾಲಕೃಷ್ಣ, ಕುತೂಹಲಕಾರಿ ಬಿಜೆಪಿ 2ನೇ ಪಟ್ಟಿ ಸಾಗರದಿಂದ ಗೋಪಾಲಕೃಷ್ಣ, ಕುತೂಹಲಕಾರಿ ಬಿಜೆಪಿ 2ನೇ ಪಟ್ಟಿ

ಬೇಳೂರು ಗೋಪಾಲಕೃಷ್ಣ ಅವರು ಸಾಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಬದಲಾಗಿ ಹಾಲಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಹಾಲಪ್ಪ ಅವರು ಯಡಿಯೂರಪ್ಪ ಅವರು ಕೆಜೆಪಿ ಮಾಡಿದಾಗ ಅವರೊಂದಿಗೆ ಸೇರಿಕೊಂಡಿದ್ದರು, ಬೇಳೂರು ಗೋಪಾಲಕೃಷ್ಣ ಬಿಜೆಪಿಯಲ್ಲಿಯೇ ಉಳಿದಿದ್ದರು.

English summary
Sagara constituency BJP ticket aspirant Belur Gopalakrishna lambasted on Yeddyurappa after his ticket was rejected. Harthal Halappa gets the Sagara ticket. Now Goapalakrishna announce to conduct as Independent candidate in the elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X