ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೋಟ್ ಮಾಡಿದ ಸ್ಟಾರ್ ಪಟ್ಟಿ : ಮತದಾನ ಮಾಡಿ ಜವಾಬ್ದಾರಿ ಮೆರೆದವರು

By Harshitha
|
Google Oneindia Kannada News

ಇವತ್ತು ಕರ್ನಾಟಕ ಚುನಾವಣೆ... ಎಲ್ಲರೂ ಬೆಳ್ಳಗೆ ಎದ್ದು ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ. ಐದು ವರ್ಷಕ್ಕೆ ಒಮ್ಮೆ ಬರುವ ಈ ದಿನದಂದು ತಮ್ಮ ಹಕ್ಕನ್ನು ಚಲಾಹಿಸುತಿದ್ದಾರೆ. ಇನ್ನು ಅದೇ ರೀತಿ ಕನ್ನಡ ಚಿತ್ರರಂಗದ ನಟ ನಟಿಯರು ಕೂಡ ಇಂದು ಮತದಾನ ಮಾಡುತ್ತಿದ್ದಾರೆ.

ಇಂದು ತಮ್ಮ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿರುವ ಸ್ಟಾರ್ ಗಳು ಕ್ಯೂ ನಲ್ಲಿ ನಿಂತು ತಮಗೆ ಬೇಕಾದ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ತಮ್ಮನ್ನು ನೋಡಿ ಅನುಕರಣೆ ಮಾಡುವ ಅಭಿಮಾನಿಗಳಿಗೆ ಮತದಾನ ಮಾಡುವಂತೆ ಸಂದೇಶ ನೀಡುತ್ತಿದ್ದರೆ.

LIVE: ಇದುವರೆಗೆ ಶೇ. 10.51 ರಷ್ಟು ಮತದಾನ ದಾಖಲು LIVE: ಇದುವರೆಗೆ ಶೇ. 10.51 ರಷ್ಟು ಮತದಾನ ದಾಖಲು

ಅಂದಹಾಗೆ, ಚುನಾವಣೆ ದಿನವಾದ ಇಂದು ಮತದಾನ ಮಾಡಿ ಜವಾಬ್ದಾರಿ ಮೆರೆದ ಕನ್ನಡ ನಟ ನಟಿಯರ ಪಟ್ಟಿ ಮುಂದಿದೆ ಓದಿ.

ರಮೇಶ್ ಅರವಿಂದ್

ರಮೇಶ್ ಅರವಿಂದ್

ನಟ ರಮೇಶ್ ಅರವಿಂದ್ ಇಂದು ಬೆಳ್ಳಗೆಯೇ ಪದ್ಮನಾಭನಗರದಲ್ಲಿ ಮತ ಚಲಾವಣೆ ಮಾಡಿದರು. ತಮ್ಮ ಪತ್ನಿ ಅರ್ಚನಾ ಮತ್ತು ಮಗಳ ನಿಹಾರಿಕ ಜೊತೆಗೆ ರಮೇಶ್ ವೋಟ್ ಹಾಕಿದ್ದರು. ವಿಶೇಷ ಅಂದರೆ ರಮೇಶ್ ಪುತ್ರಿ ನಿಹಾರಿಕ ಅವರು ಮೊದಲ ಬಾರಿಗೆ ಮತದಾನ ಮಾಡಿದ್ದಾರೆ.

ಜಗ್ಗೇಶ್

ಜಗ್ಗೇಶ್

ಇಂದು ಬೆಳ್ಳಗೆ ಜಗ್ಗೇಶ್ ತಮ್ಮ ಪತ್ನಿ ಪರಿಮಳ ಹಾಗೂ ಇಬ್ಬರು ಮಕ್ಕಳ ಜೊತೆಗೆ ವೋಟ್ ಹಾಕಿದ್ದಾರೆ. ಮಲ್ಲೇಶ್ವರಂ ನಲ್ಲಿ ಜಗ್ಗೇಶ್ ಮತದಾನ ಮಾಡಿದ್ದು, ನಂತರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಜಗ್ಗೇಶ್ ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೂಡ ಆಗಿದ್ದಾರೆ.

ರವಿಚಂದ್ರನ್

ರವಿಚಂದ್ರನ್

ಕ್ರೇಜಿ ಸ್ಟಾರ್ ತಮ್ಮ ಪತ್ನಿಯ ಜೊತೆಗೆ ರಾಜಾಜಿನಗರದಲ್ಲಿ ಮತದಾನ ಮಾಡಿದರು. ಬಳಿಕ ಮಾತನಾಡಿದ ಅವರು ''ಎಲ್ಲರೂ ಮತದಾನ ಮಾಡಬೇಕು. ನಮ್ಮ ಹಣೆಬರಹ ಚೆನ್ನಾಗಿರಬೇಕು ಅಂದರೆ ಯಾವ ಹಣೆ ಮೇಲೆ ಮತ ಒತ್ತುತ್ತೇವೆ ಎನ್ನುವುದು ಬಹಳ ಮುಖ್ಯ. ಮತದಾನ ಕಡ್ಡಾಯ ಆಗಬೇಕು'' ಎಂದು ಹೇಳಿದರು.

ಲೀಲಾವತಿ ಹಾಗೂ ವಿನೋದ್ ರಾಜ್

ಲೀಲಾವತಿ ಹಾಗೂ ವಿನೋದ್ ರಾಜ್

ಹಿರಿಯ ನಟಿ ಡಾ.ಲೀಲಾವತಿ ನೆಲಮಂಗಲ ತಾಲೂಕಿನ ಮೈಲನಹಳ್ಳಿಯಲ್ಲಿ ಮತ ಹಾಕಲು ಬೆಳ್ಳಗೆಯೇ ಬಂದರು. ಆದರೆ ಅಲ್ಲಿ ಮತಗಟ್ಟೆ ಸಂಖೈ 107ರ ಮತಯಂತ್ರ ದೋಷದಿಂದ ಮತಹಾಕಲು ಬಂದ ಅವರ ಕೆಲ ಕಾಲ ಕಾಯಬೇಕಾಯಿತು. ಈ ವೇಳೆ ತಾಯಿ ಜೊತೆಗೆ ನಟ ವಿನೋದ್ ರಾಜ್ ಕೂಡ ಇದ್ದರು.

ಜಯಮಾಲ

ಜಯಮಾಲ

ಮತ್ತೊಬ್ಬ ಹಿರಿಯ ನಟಿ ಜಯಮಾಲ ರಾಧಾಕೃಷ್ಣ ವಾರ್ಡ್ ನಲ್ಲಿ ಮತದಾನ ಮಾಡಿದರು. ನಂತರ ಮಾತನಾಡಿದ ಅವರ ''ನಾಗರೀಕರು ಮೊದಲು ಮನೆಯಿಂದ ಹೊರಬಂದು ಮತದಾನ ಮಾಡಬೇಕು. ನಾನು ಮಹಿಳೆಯರ ಪ್ರತ್ಯೇಕ ಪಿಂಕ್ ಮತಗಟ್ಟೆಯನ್ನು ವಿರೋಧಿಸುವುದಿಲ್ಲ. ವೈಯಕ್ತಿಕವಾಗಿ ಸಮಾನತೆ ಬಯಸುವುದರಿಂದ ಮಹಿಳೆಯರಿಗೆ ಪ್ರತ್ಯೇಕ ಮತಗಟ್ಟೆ ಬೇಕಿಲ್ಲ..ಎಲೆಕ್ಟ್ರಾನಿಕ್ ಮತಯಂತ್ರಗಳ ಬಗ್ಗೆ ಈಗಲೂ ನನಗೆ ವಿಶ್ವಾಸವಿಲ್ಲ.'' ಎಂದರು.

ಬಿ.ಸರೋಜಾದೇವಿ

ಬಿ.ಸರೋಜಾದೇವಿ

ಬಹು ಭಾಷಾ ನಟಿ ಬಿ.ಸರೋಜಾದೇವಿ ಮಲ್ಲೇಶ್ವರಂನ ಬಿ.ಪಿ.ಇಂಡಿಯನ್ ಸ್ಕೂಲ್ ನಲ್ಲಿ ಮತದಾನ ಮಾಡಿದರು.

ಇಂದ್ರಜೀತ್ ಲಂಕೇಶ್

ಇಂದ್ರಜೀತ್ ಲಂಕೇಶ್

ಸ್ಟೈಲಿಶ್ ಡೈರೆಕ್ಟರ್ ಎಂದು ಜನಪ್ರಿಯರಾಗಿರುವ ಇಂದ್ರಜೀತ್ ಲಂಕೇಶ್ ಬಿಟಿಎಂ ಲೇ ಔಟ್ ನಲ್ಲಿ ಮತ ಹಾಕಿದರು.

ತರುಣ್ ಸುಧೀರ್

ತರುಣ್ ಸುಧೀರ್

ಹಿರಿಯ ನಟ ಸುಧೀರ್ ಪುತ್ರ, ನಿರ್ದೇಶಕ ತರುಣ್ ಸುಧೀರ್ ರಾಜಾಜಿ ನಗರದ ವಾರ್ಡ್ ನಂ 17 ರಲ್ಲಿ ವೋಟ್ ಹಾಕಿದರು.

ಪ್ರಥಮ್

ಪ್ರಥಮ್

ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ಮತದಾನ ಮಾಡಲು ಬೆಂಗಳೂನಿಂದ 200 ಕಿಲೋ ಮೀಟರ್ ಇರುವ ಹಲಗಾಪುರಕ್ಕೆ ಹೋಗಿದ್ದಾರೆ. ಅವರ ನನ್ನ ಊರಿನಲ್ಲಿ ಅವರೇ ಮೊದಲು ಮತದಾನ ಮಾಡಿದ್ದಾರೆ.

ನಟಿ ರೂಪ ಶ್ರೀ

ನಟಿ ರೂಪ ಶ್ರೀ

ಸಿವಿ ರಾಮನ್ ನಗರದ ಹೋಲಿ ಚರ್ಚ್ ಸ್ಕೂಲ್ ನಲ್ಲಿ ಮತದಾನ ನಟಿ ರೂಪ ಶ್ರೀ ವೋಟ್ ಹಾಕಿದರು.

English summary
Karnataka Election 2018 : List of kannada film stars who voted Today(May 12th).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X