ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

SSLC ಪರೀಕ್ಷೆ ಸುದ್ದಿಗೋಷ್ಠಿ: ವಿದ್ಯಾರ್ಥಿಗಳು ತಿಳಿಯಬೇಕಾದ ವಿಷಯಗಳು

|
Google Oneindia Kannada News

ಬೆಂಗಳೂರು, ಜೂನ್ 24: ಕೊರೊನಾ ವೈರಸ್ ಭೀತಿಯ ನಡುವೆಯೂ ಗುರವಾರದಿಂದ ರಾಜ್ಯದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ಆರಂಭವಾಗಲಿದೆ. ಒಟ್ಟು 8,48,203 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಶಿಕ್ಷಣ ಇಲಾಖೆ ಮತ್ತು ರಾಜ್ಯ ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದಿನ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Recommended Video

ಚೀನಾ ವಿಚಾರದಲ್ಲಿ ಭಾರತಕ್ಕೆ ರಷ್ಯಾ ಸಪೋರ್ಟ್ ಮಾಡಲ್ಲ ಎಂದ ರಷ್ಯಾ ಸಚಿವ | Russia | China | Oneindia Kannada

'ಬೇರೆ ರಾಜ್ಯಗಳಲ್ಲಿ 12ನೇ ತರಗತಿ ಮುಖ್ಯವಾದ ಘಟ್ಟ. ಆದರೆ ನಮ್ಮಲ್ಲಿ ಎಸ್ಸೆಲ್ಸಿ ಪ್ರಮುಖ ಘಟ್ಟ' ಎಂದು ಹೇಳಿದ ಶಿಕ್ಷಣ ಸಚಿವರು, 'ಹೈಕೋರ್ಟ್ ನಲ್ಲೂ ಪರೀಕ್ಷೆಗೆ ತಡೆ ಕೋರಿ ಕೆಲವರು ಹೋಗಿದ್ದರು, ಹೈಕೋರ್ಟ್ ನಲ್ಲಿ ಪರೀಕ್ಷೆಗೆ ಹಸಿರು ನಿಶಾನೆ ಸಿಕ್ಕಿದೆ. ಸುಪ್ರೀಂ ಕೋರ್ಟ್ ನಲ್ಲೂ ಹಸಿರು ನಿಶಾನೆ ಸಿಕ್ಕಿದೆ. ಪರೀಕ್ಷೆಯನ್ನು ನಮ್ಮ ಕರ್ತವ್ಯದಂತೆ ನಡೆಸ್ತೇವೆ' ಎಂದು ಪರೀಕ್ಷೆಯ ಯಶಸ್ವಿಯಾಗಿ ನಡೆಯಲಿದೆ ಎಂದಿದ್ದಾರೆ.

ಶುಕ್ರವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ; ವಿದ್ಯಾರ್ಥಿಗಳಿಗೆ ಸೂಚನೆಗಳುಶುಕ್ರವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ; ವಿದ್ಯಾರ್ಥಿಗಳಿಗೆ ಸೂಚನೆಗಳು

ಒಟ್ಟು 2879 ಪರೀಕ್ಷೆ ಕೇಂದ್ರಗಳಿವೆ. ಒಂದು ಹಾಲ್‌ನಲ್ಲಿ ಕೇವಲ 18 ವಿದ್ಯಾರ್ಥಿಗಳು ಮಾತ್ರ ಬರೆಯಲಿದ್ದು, ಪ್ರತಿಯೊಬ್ವರೂ ಮಾಸ್ಕ್ ಧರಿಸಿ ಪರೀಕ್ಷೆ ಬರೆಯಬೇಕಿದೆ. ಎಲ್ಲರ ತಾಪಮಾನ ಪರೀಕ್ಷೆ ಮಾಡಲಾಗುತ್ತೆ, ಹೆಚ್ಚು ತಾಪಮಾನ ಇದ್ರೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲು ತೀರ್ಮಾನಿಸಲಾಗಿದೆ. ಎಸ್ಎಸ್ಎಲ್‌ಸಿ ಪರೀಕ್ಷೆ ಕುರಿತು ಸುರೇಶ್ ಕುಮಾರ್ ತಿಳಿಸಿದ ಪ್ರಮುಖ ಅಂಶಗಳು ಮುಂದಿವೆ.

90 ಸಾವಿರ ಜನ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ

90 ಸಾವಿರ ಜನ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ

ಕೊರೊನಾ ವೈರಸ್ ಭೀತಿಯಿರುವ ಕಾರಣ ಬಹಳ ಎಚ್ಚರಿಕೆಯಿಂದ ಸರ್ಕಾರ ಪರೀಕ್ಷೆ ನಡೆಸುತ್ತಿದೆ. ಹಾಗಾಗಿ, ಎಸ್ಸೆಲ್ಸಿ ಪರೀಕ್ಷೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ 81265 ಜನ ನಿಯೋಜನೆಯಾಗಿದ್ದಾರೆ. ಪೊಲೀಸ್, ಆರೋಗ್ಯ ಸಿಬ್ಬಂದಿ ಸೇರಿ ಒಟ್ಟು 90 ಸಾವಿರ ಜನ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಎಲ್ಲ ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ 1,13,800 ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. ಪ್ರತೀ ಪರೀಕ್ಷೆ ಕೇಂದ್ರಕ್ಕೆ ಎಕ್ಸಾಮಿನೇಷನ್ ಚೀಫ್ ಸೇರಿ ಮೂವರು ಅಧಿಕಾರಿಗಳು ನಿಯೋಜನೆ. ಸಿಸಿಟಿವಿಗಳಿರುತ್ತವೆ, ಜಾಗೃತಿ ದಳದಿಂದ ನಿಗಾ ವಹಿಸಲಾಗುತ್ತದೆ.

ವಿದ್ಯಾರ್ಥಿಗಳು ಈ ವಿಚಾರ ಗಮನಿಸಬೇಕಿದೆ

ವಿದ್ಯಾರ್ಥಿಗಳು ಈ ವಿಚಾರ ಗಮನಿಸಬೇಕಿದೆ

ಪರೀಕ್ಷಾ ಸಿಬ್ಬಂದಿ ಬೆಳಗ್ಗೆ 7 ಗಂಟೆಗೆ ಪರೀಕ್ಷೆ ಕೇಂದ್ರಕ್ಕೆ ಬಂದಿರ್ತಾರೆ. ಪರೀಕ್ಷೆಗೂ ಮುನ್ನ ತಿಂಡಿ ತಿನ್ಕೋಬಹುದು. ಕುಡಿಯುವ ನೀರನ್ನು ವಿದ್ಯಾರ್ಥಿಗಳೇ ಮನೆಯಿಂದ ತರಬೇಕು. ಬಿಸಿ ನೀರು ತರಲು ಸೂಚನೆ. ಪರೀಕ್ಷೆ ಕೇಂದ್ರಗಳಲ್ಲೂ 250 ಮಿಲಿ ನೀರಿನ ಬಾಟಲಿಗಳ ವ್ಯವಸ್ಥೆ ಇರುತ್ತೆ. ಪೋಷಕರು ಮಕ್ಕಳನ್ನು ಬಿಟ್ಟು ಮನೆಗೆ ಹೋಗಿಬಿಡಿ. ಪೋಷಕರು ಸಾಮಾಜಿಕ ಅಂತರ ಕಾಪಾಡಲಿ. ಪೋಷಕರು ಆತಂಕ ಪಡೋದು ಬೇಡ. ನಿಮ್ಮ ಮಕ್ಕಳ ಕಾಳಜಿ ನಮ್ಮದು. ಪರೀಕ್ಷೆ ಮುಗಿದ ಮೇಲೆ ಪೋಷಕರು. ಬಂದು ಮಕ್ಕಳನ್ನು ಕರೆದೊಯ್ಯಲಿ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಎಸ್ಎಸ್ಎಲ್‌ಸಿ ಪರೀಕ್ಷೆ ಕುರಿತು ಕುಮಾರಸ್ವಾಮಿ ಕೊನೆಯ ಎಚ್ಚರಿಕೆಎಸ್ಎಸ್ಎಲ್‌ಸಿ ಪರೀಕ್ಷೆ ಕುರಿತು ಕುಮಾರಸ್ವಾಮಿ ಕೊನೆಯ ಎಚ್ಚರಿಕೆ

ಕ್ವಾರಂಟೈನ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ

ಕ್ವಾರಂಟೈನ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ

ಹೋಂ ಕ್ವಾರಂಟೈನ್ ಸೆಂಟರ್ ನಿಂದ ಒಟ್ಟು 9 ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇವರಿಗೆ ಪ್ರತ್ಯೇಕ ಕೊಠಡಿಯಲ್ಲಿ ‌ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಎಲ್ಲ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಪ್ರತೀ ದಿನ ಪರೀಕ್ಷೆ ಮುಗಿದ ಬಳಿಕ ಕೊಠಡಿಗಳಿಗೆ ಸೋಂಕು ನಿವಾರಕ ಔಷಧಿ ಸಿಂಪಡಣೆ. ಜೆರಾಕ್ಸ್, ಸೈಬರ್ ಸೆಂಟರ್ ಗಳನ್ನು ಪರೀಕ್ಷೆ ಕೇಂದ್ರದ ಸನಿಹ ಇದ್ರೆ ಬಂದ್ ಮಾಡಿಸ್ತೇವೆ.

ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ

ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ

ಪರೀಕ್ಷಾ ಅಕ್ರಮಗಳನ್ನು ತಡೆಯಲು ಬಿಗಿ ಕ್ರಮಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳ ಪ್ರವೇಶ ದ್ವಾರಗಳಲ್ಲಿ ದಟ್ಡಣೆ ತಡೆಯಲು, ದಟ್ಟಣೆ ಆಗದಂತೆ ತಡೆಯಲು ಮುಂಜಾಗ್ರತಾ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಮಕ್ಕಳ‌ ನಡುವೆ ನೂಕು ನುಗ್ಗಲು ಆಗದಂತೆ ನೋಡಿಕೊಳ್ಳಬೇಕಿದೆ. ಎಲ್ಲರೂ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಲು ನಿಗಾ ಇಡ್ತೇವೆ'' ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಪರೀಕ್ಷೆ ಬರೆಯುವ ಮುನ್ನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಿಎಂ ಸೂಚನೆಪರೀಕ್ಷೆ ಬರೆಯುವ ಮುನ್ನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಿಎಂ ಸೂಚನೆ

ಉಚಿತ ಸಾರಿಗೆ ವ್ಯವಸ್ಥೆ

ಉಚಿತ ಸಾರಿಗೆ ವ್ಯವಸ್ಥೆ

ಮಕ್ಕಳಿಗೆ ಪರೀಕ್ಷೆ ಕೇಂದ್ರಕ್ಕೆ ಬರಲು ಬಸ್ ವ್ಯವಸ್ಥೆ ಮಾಡಲಾಗಿದೆ. ಗುತ್ತಿಗೆ ಆಧಾರದಲ್ಲಿ ಬಸ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಹಾಲ್ ಟಿಕೆಟ್ ತೋರಿಸಿದರೆ ಉಚಿತ ಪ್ರಯಾಣ ಮಾಡಬಹುದು. ಗಡಿ ಭಾಗದಿಂದ ಮಕ್ಕಳನ್ನು ಕರೆತರಲು ಬಸ್ ನಿಯೋಜಿಸಲಾಗಿದೆ. ಪರೀಕ್ಷೆ ಕೇಂದ್ರಗಳಲ್ಲಿ ವ್ಯದ್ಯರ ನಿಯೋಜನೆಯೂ ಆಗಿದೆ. ಜ್ವರ, ಕೆಮ್ಮು ಇದ್ರೆ ಎನ್95 ಮಾಸ್ಕ್ ಕೊಡ್ತೇವೆ'' ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸೋಂಕು ಕಾಣಿಸಿಕೊಂಡರೆ

ಸೋಂಕು ಕಾಣಿಸಿಕೊಂಡರೆ

ಪರೀಕ್ಷೆ ಮಧ್ಯೆ ಯಾವುದಾದ್ರೂ ವಿದ್ಯಾರ್ಥಿಗೆ ಸೋಂಕು ಬಂದ್ರೆ ಕಟ್ಟೆಚ್ಚರ. ಅಂಥ ಮಗುವಿಗೆ ನಂತರದ ಪರೀಕ್ಷೆಗೆ ಅವಕಾಶ ಕೊಡಲ್ಲ. ಬಿಇಒ ಇದರ ಬಗ್ಗೆ ನಿಗಾ ಇಟ್ಟಿರ್ತಾರೆ. ಸೋಂಕು ಬಂದ್ರೆ ಮುಂದಿನ ಪರೀಕ್ಷೆ ಪೂರಕ ಪರೀಕ್ಷೆ ಯಲ್ಲಿ ಅವಕಾಶ. ಉಳಿದ ಪರೀಕ್ಷೆಗಳನ್ನು ಪೂರಕ ಪರೀಕ್ಷೆಯಲ್ಲಿ ಬರೆಯಬಹುದು. ವಿದ್ಯಾರ್ಥಿಗಳು ಧೈರ್ಯವಾಗಿ ಪರೀಕ್ಷಾ ಕೇಂದ್ರಕ್ಕೆ ಬರಬಹುದು. ಇದು ಪರೀಕ್ಷಾ ಕೇಂದ್ರ ಅಷ್ಟೇ ಅಲ್ಲ. ಮಕ್ಕಳ ಸುರಕ್ಷಾ ಕೇಂದ್ರದ ರೀತಿ ಸಜ್ಜುಗೊಳಿಸಿದ್ದೇವೆ. ಇಂಗ್ಲೀಷ್ ಪತ್ರಿಕೆ ಸೊರಿಕೆಯಾಗಿದೆ ಅನ್ನೋದು ಸುಳ್ಳು ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

English summary
Karnataka Education Minister Suresh kumar requests SSLC students to follow Guidelines strictly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X