ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತೃಪ್ತ ಶಾಸಕರು ಮುಂಬೈಗೆ ಹಾರಿದ್ದು ರಾಜೀವ್ ಚಂದ್ರಶೇಖರ್ ವಿಮಾನದಲ್ಲಿ

|
Google Oneindia Kannada News

ಬೆಂಗಳೂರು, ಜುಲೈ 7: ಕಾಂಗ್ರೆಸ್ ಹಾಗೂ ಜೆಡಿಎಸ್ ನ ಹತ್ತು ಶಾಸಕರು ಶನಿವಾರ ರಾಜೀನಾಮೆ ಸಲ್ಲಿಸಿದ ನಂತರ ಖಾಸಗಿ ವಿಮಾನದಲ್ಲಿ ತೆರಳಿದರಲ್ಲ, ಆ ಖಾಸಗಿ ವಿಮಾನದ ಕಂಪೆನಿಗೂ ಬಿಜೆಪಿಯ ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಗೂ ನಂಟಿದೆ ಎಂದು ಕಂಪೆನಿ ಮೂಲಗಳು ಹೇಳಿವೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆ ಖಾಸಗಿ ವಿಮಾನವು ಜುಪಿಟರ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಗೆ ಸೇರಿದ್ದಾಗಿದೆ. ರಾಜೀವ್ ಚಂದ್ರಶೇಖರ್ ಅವರು ಆ ಕಂಪೆನಿಯ ಸ್ಥಾಪಕ ಹಾಗೂ ಅಧ್ಯಕ್ಷರು. ಈ ಬಗ್ಗೆ ಕಂಪೆನಿಯ ಅಧಿಕಾರಿಗಳು ಮಾತನಾಡಿದ್ದು, ನಾವು ಉದ್ಯಮ ನಡೆಸುತ್ತಿದ್ದೇವೆ. ಯಾರು ವಿಮಾನ ಬಳಸಲು ಬಯಸುತ್ತಾರೋ ಅವರಿಗೆ ಒದಗಿಸುತ್ತೇವೆ, ಅಷ್ಟೇ ಎಂದು ಹೇಳಿದ್ದಾರೆ.

'ಕಾಂಗ್ರೆಸ್ ಶಾಸಕಾಂಗ ಸಭೆಗೆ ಹಾಜರಾಗಲ್ಲ, ರಾಜೀನಾಮೆ ನಿರ್ಧಾರ ಅಚಲ''ಕಾಂಗ್ರೆಸ್ ಶಾಸಕಾಂಗ ಸಭೆಗೆ ಹಾಜರಾಗಲ್ಲ, ರಾಜೀನಾಮೆ ನಿರ್ಧಾರ ಅಚಲ'

ಇದೊಂದು ಖಾಸಗಿ ವಿಮಾನ ಕಾರ್ಯಚಟುವಟಿಕೆ ಕಂಪೆನಿ. ವಿಮಾನವನ್ನು ಹಲವಾರು ಮಂದಿ ಬಳಸುತ್ತಾರೆ ಎಂದು ಕಂಪೆನಿಯ ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ವಿಮಾನವನ್ನು ಯಾರು ಹಾಗೂ ಯಾರ ಪರವಾಗಿ ಬುಕ್ ಮಾಡಿದರು ಎಂಬ ಸಂಗತಿ ತಿಳಿಸಲು ನಿರಾಕರಿಸಲಾಗಿದೆ.

Rajeev Chandrasekhar

ಜೆಡಿಎಸ್ ಜತೆಗಿನ ಮೈತ್ರಿ ಸರಕಾರವನ್ನು ಬಿಜೆಪಿಯು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಕರ್ನಾಟಕದಲ್ಲಿನ ಸದ್ಯದ ರಾಜಕೀಯ ಬಿಕ್ಕಟ್ಟಿಗೆ ಬಿಜೆಪಿಯೇ ಕಾರಣ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

English summary
Karnataka dissent MLA's flew to Mumbai by BJP MP Rajeev Chndrasekhar charter company flight. He is the founder of Jupiter capital private limited. MLA's flew to Mumbai by this company charter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X