ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದ ನೃತ್ಯ ಕಲಾವಿದರಿಗೆ 'ಶಕುಂತಲಾ ಪ್ರಶಸ್ತಿ'

By Vanitha
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 10 : ಕರ್ನಾಟಕದ ಇಬ್ಬರು ಮಹಾನ್ ನೃತ್ಯ ಕಲಾವಿದರು ಈ ಬಾರಿಯ ಶಕುಂತಲಾ ಪ್ರಶಸ್ತಿ ಭಾಜನರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಅವರಿಗೆ ನೀಡಲು ಹೂವು ಪ್ರತಿಷ್ಠಾನ ಸಂಸ್ಥೆ ನೀಡುವ ಈ ಪ್ರಶಸ್ತಿಗೆ ಮಂಗಳೂರಿನ ನೃತ್ಯಗುರು ಕೆ. ಮುರಳೀಧರ ರಾವ್ ಹಾಗೂ ಕಥಕ್ ನೃತ್ಯಗಾರ್ತಿ ನಂದಿನಿ ಕೆ ಮೆಹ್ತಾ ಆಯ್ಕೆಯಾಗಿದ್ದಾರೆ. ಸಮಾರಂಭವು ನಗರದ ಎಡಿಎ ರಂಗಮಂದಿರದಲ್ಲಿ ಸೆಪ್ಟೆಂಬರ್ 16ರ ಬುಧವಾರದಂದು ನಡೆಯಲಿದೆ.[ಸ್ವೀಡಿಷ್ ಕಲಾವಿದೆ ಅನಿಟ್ಟೆ ಪೂಜಾಗೆ ಒಲಿದ ಓಡಿಸ್ಸಿ]

Karnataka dancers get Shakuntala Award

ನಟಿ ಭಾವನಾ ಅವರ ತಾಯಿ ಶಕುಂತಲಾ ನೆನೆಪಿನಾರ್ಥ ಬಾಲಭವನದ ಅಧ್ಯಕ್ಷೆಯಾದ ಭಾವನಾ ಸ್ಥಾಪಿಸಿರುವ ಟ್ರಸ್ಟ್, ಇದೇ ಮೊದಲ ಬಾರಿಗೆ ಶಕುಂತಲಾ ಪ್ರಶಸ್ತಿ ನೀಡಲು ಮುಂದಾಗಿದೆ. ಈ ಪ್ರಶಸ್ತಿಯ ಗೌರವಧನವಾಗಿ ಮುರಳೀಧರ್ 5 ಲಕ್ಷ ರೂ, ಬೆಂಗಳೂರಿನ ನಂದಿನಿ ಅವರು 1.5 ಲಕ್ಷ ರೂವನ್ನು ಪಡೆಯಲಿದ್ದಾರೆ.

ಈ ಬಾರಿ ಕರ್ನಾಟಕದ ಇಬ್ಬರು ಕಲಾವಿದರಿಗೆ ಶಕುಂತಲಾ ಪ್ರಶಸ್ತಿ ನೀಡಲಾಗಿದೆ. ಮುಂದಿನ ವರ್ಷದಿಂದ ಕರ್ನಾಟಕ ಸೇರಿದಂತೆ ವಿವಿಧ ರಾಷ್ಟ್ರಗಳ ಕಲಾವಿದರನ್ನು ಗುರುತಿಸುವ ಕಾರ್ಯ ಬಾಲಭವನ ಟ್ರಸ್ಟ್ ವತಿಯಿಂದ ನಡೆಯುತ್ತದೆ ಎಂದು ಬಾಲಭವನದ ಅಧ್ಯಕ್ಷೆ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಾತೃನಮನ ಕಾರ್ಯಕ್ರಮ

ಪ್ರಶಸ್ತಿ ಪ್ರದಾನ ಸಮಾರಂಭವನ್ನು ವಿಭಿನ್ನವಾಗಿ ನಡೆಸಲು ಚಿಂತನೆ ನಡೆಸಲಾಗಿದ್ದು, ಸೆಪ್ಟೆಂಬರ್ 16ರಂದು ಮಾತೃನಮನ ಎಂಬ ಹೆಸರಿನಲ್ಲಿ ಖ್ಯಾತ ಕಥಕ್ ನೃತ್ಯ ಕಲಾವಿದ ವಿಶಾಲ್ ಕೃಷ್ಣ ಅವರ ನೃತ್ಯ ಏರ್ಪಡಿಸಲಾಗಿದೆ.

ಖ್ಯಾತ ತಬಲ ವಾದಕ ಅರವಿಂದ ಕುಮಾರ್ ಆಜಾದ್. ಸಾರಂಗಿಯಲ್ಲಿ ಸಂದೀಪ್ ಮಿಶ್ರಾ, ಗಾಯನ, ಹಾರ್ಮೋನಿಯಂನಲ್ಲಿ ಬ್ರಜೇಶ್ ಮಿಶ್ರಾ, ಕೊಳಲಿನಲ್ಲಿ ರೋಹಿತ್ ವಾಂಕರ್ ಸಾಥ್ ನೀಡಲಿದ್ದಾರೆ.

English summary
Karnataka dancers get Shakuntala Award. This award presented by Bala Bavana Trust on Wednesday September 16th in ADA auditorium. Award winners is Dance Master Muralidhara Rao and Kathak dancer Nandini K mehta
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X