ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮಿತ್ ಶಾ ಯಾವ ರೀತಿಯ ರೋಲ್ ಮಾಡೆಲ್ : ಕಾಂಗ್ರೆಸ್ ಪ್ರಶ್ನೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 02 : '50 ಸಾವಿರ ರೂಪಾಯಿ ಆದಾಯವನ್ನು 80.50 ಕೋಟಿ ರೂಪಾಯಿ ಮಾಡಿದ್ದ ನಿಮ್ಮ ಮಗನ ಕಲೆಯನ್ನು ಇಲ್ಲಿನ ಯುವಜನರಿಗೆ ಹೇಳಿಕೊಡಲು ಬರ್ತಿದ್ದೀರಾ ಅಮಿತ್ ಶಾ ಅವರೇ?' ಎಂದು ಕರ್ನಾಟಕ ಕಾಂಗ್ರೆಸ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಪ್ರಶ್ನಿಸಿದೆ.

ಮಂಗಳವಾರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರವಾಗಿ ಪ್ರಚಾರ ಮಾಡಲು ಅಮಿತ್ ಶಾ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಬನಶಂಕರಿ ದೇವಾಲಯದಿಂದ ಜೆ.ಪಿ.ನಗರದ ತನಕ ಅವರು ರೋಡ್ ಶೋ ನಡೆಸಲಿದ್ದಾರೆ.

ಅಮಿತ್ ಶಾ ಆಸ್ತಿ ಏಳು ವರ್ಷಗಳಲ್ಲಿ ಮೂರು ಪಟ್ಟು ಏರಿಕೆ!ಅಮಿತ್ ಶಾ ಆಸ್ತಿ ಏಳು ವರ್ಷಗಳಲ್ಲಿ ಮೂರು ಪಟ್ಟು ಏರಿಕೆ!

ಅಮಿತ್ ಶಾ ಆಗಮನಕ್ಕೆ ಕಲವೇ ಗಂಟೆಗಳ ಮೊದಲು ಕರ್ನಾಟಕ ಕಾಂಗ್ರೆಸ್ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದೆ. 'ನೀವು ಕರ್ನಾಟಕದ ಪ್ರಬುದ್ಧ, ಪ್ರಜ್ಞಾವಂತ ಯುವ ಮತದಾರರಿಗೆ ಯಾವ ರೀತಿಯ ರೋಲ್ ಮಾಡೆಲ್ ಆಗಲು ಸಾಧ್ಯ?' ಎಂದು ಕಾಂಗ್ರೆಸ್‌ ಟ್ವೀಟರ್‌ನಲ್ಲಿ ಪ್ರಶ್ನೆ ಮಾಡಿದೆ.

ಈ ಬಾರಿಯೂ ಮೋದಿ ಅಲೆ, ಕಾಂಗ್ರೆಸ್ ಇನ್ನೈದು ವರ್ಷ ಕಾಯ್ಬೇಕು: ಅಮಿತ್ ಶಾಈ ಬಾರಿಯೂ ಮೋದಿ ಅಲೆ, ಕಾಂಗ್ರೆಸ್ ಇನ್ನೈದು ವರ್ಷ ಕಾಯ್ಬೇಕು: ಅಮಿತ್ ಶಾ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 18ರಂದು ಮತದಾನ ನಡೆಯಲಿದೆ. ಬಿಜೆಪಿಯಿಂದ ತೇಜಸ್ವಿ ಸೂರ್ಯ, ಕಾಂಗ್ರೆಸ್‌-ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಕೆ.ಹರಿಪ್ರಸಾದ್ ಅವರು ಕಣದಲ್ಲಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಪರಿಚಯ

ಯಾವ ರೀತಿಯ ರೋಲ್ ಮಾಡೆಲ್

ಕೊಲೆಯೂ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಹೊತ್ತಿರುವ ನೀವು ಕರ್ನಾಟಕದ ಪ್ರಬುದ್ಧ, ಪ್ರಜ್ಞಾವಂತ ಯುವ ಮತದಾರರಿಗೆ ಯಾವ ರೀತಿಯ ರೋಲ್ ಮಾಡೆಲ್ ಆಗಲು ಸಾಧ್ಯ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ನಿಮ್ಮ ಮಗನ ಕಲೆ ಹೇಳಿ ಕೊಡುವಿರಾ?

50 ಸಾವಿರ ರೂಪಾಯಿ ಆದಾಯವನ್ನು 80.50 ಕೋಟಿ ರೂಪಾಯಿ ಮಾಡಿದ್ದ ನಿಮ್ಮ ಮಗನ ಕಲೆಯನ್ನು ಇಲ್ಲಿನ ಯುವಜನರಿಗೆ ಹೇಳಿಕೊಡಲು ಬರ್ತಿದ್ದೀರಾ ಅಮಿತ್ ಶಾ ಅವರೇ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ನಿಮ್ಮ ಬದ್ಧತೆ ಏನು?

ನಿಮ್ಮ ಬದ್ಧತೆ ಏನು?

* ಸಂವಿಧಾನದ ಬಗ್ಗೆ ನಿಮ್ಮ ಅಭಿಪ್ರಾಯ ಏನು?
* ಪ್ರಜಾಪ್ರಭುತ್ವದ ಬಗ್ಗೆ ನಿಮ್ಮ ಬದ್ಧತೆ ಏನು? ಎಂದು ಕರ್ನಾಟಕ ಕಾಂಗ್ರೆಸ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಪ್ರಶ್ನೆ ಮಾಡಿದೆ.

ಮಹಿಳಾ ಮೀಸಲಾತಿ

ಮಹಿಳಾ ಮೀಸಲಾತಿ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಆಗಮಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಪ್ರಶ್ನೆಗಳು ಎಂದಿರುವ ಕಾಂಗ್ರೆಸ್ 'ಮಹಿಳಾ ಮೀಸಲಾತಿ ಬಗ್ಗೆ ನಿಮ್ಮ ನಿಲುವು ಏನು?' ಎಂದು ಕೇಳಿದೆ.

English summary
Karnataka Congress asked several questions to BJP president Amit Shah. Amit Shah will participate in road show in Bengaluru on April 2, 2019 as a part of election campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X