• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಜಿ ಸಿಎಂ ಸಿದ್ದರಾಮಯ್ಯ ಅವಾಜ್‌ಗೆ ಅವಾಕ್ಕಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್!

|
Google Oneindia Kannada News

ಬೆಂಗಳೂರು, ಮೇ 20: ಲಾಕ್‌ಡೌನ್‌ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೈಗೊಂಡಿದ್ದ ಹಲವು ತೀರ್ಮಾನಗಳನ್ನು ವಿರೋಧಿಸಿ ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಭಟನೆ ಮಾಡಿದ್ದಾರೆ. ಆದರೆ ಪ್ರತಿಭಟನೆ ಮುಂದಾದ ಕಾಂಗ್ರೆಸ್‌ ನಾಯಕರಿಗೆ ಶಾಕ್ ಕಾದಿತ್ತು. ಆದರೂ ವಿಧಾನಸೌಧ ಹಾಗೂ ವಿಕಾಸಸೌಧಗಳ ಮಧ್ಯದ ಆವರಣದಲ್ಲಿರುವ ಮಹಾತ್ಮಾ ಗಾಂಧೀಜಿ ಪ್ರತಿಮೆ ಬಳಿ ಕಾಂಗ್ರೆಸ್‌ ನಾಯಕರು ಸಾಂಕೇತಿಕ ಧರಣಿ ಸತ್ಯಾಗ್ರಹ ಮಾಡಿದ್ದಾರೆ.

   Amphan, most deadliest cyclone in last 20 years | Oneindia Kannada

   ಲಾಕ್‌ಡೌನ್‌ ಸಂದರ್ಭದಲ್ಲಿ ಎಪಿಎಂಸಿ ಕಾಯಿದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ, ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಸಮಿತಿ ರಚನೆ, ಕಾರ್ಮಿಕರಿಗೆ ಫುಡ್ ಕಿಟ್‌ಗಳ ಹಂಚಿಕೆಯಲ್ಲಿ ಅವ್ಯವಹಾರ ಖಂಡಿಸಿ ಧರಣಿ ಸತ್ಯಾಗ್ರಹ ನಡೆಸಿದ್ದಾರೆ. ಧರಣಿ ಸಂದರ್ಭ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಅವಾಜ್‌ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೆ ಅವಾಕ್ಕಾದ ಘಟನೆ ನಡೆಯಿತು.

   ಪ್ರತಿಭಟನೆಗೆ ಅನುಮತಿ ನಿರಾಕರಣೆ!

   ಪ್ರತಿಭಟನೆಗೆ ಅನುಮತಿ ನಿರಾಕರಣೆ!

   ಲಾಕ್‌ಡೌನ್‌ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸರ್ಕಾರ ರೈತರು, ಕೂಲಿ ಕಾರ್ಮಿಕರು ಹಾಗೂ ಕಾರ್ಮಿಕ ವಿರೋಧಿ ಆಡಳಿತ ನಡೆಸಿದೆ ಎಂದು ಆರೋಪಿಸಿ ಗಾಂಧೀಜಿ ಪ್ರತಿಮೆ ಬಳಿ ಧರಣಿ ಮಾಡಲು ಸಜ್ಜಾಗಿತ್ತು. ಆದರೆ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಕಾಂಗ್ರೆಸ್ ಶಾಸಕರು ತೆರಳಿದಾಗ ಆಶ್ಚರ್ಯ ಕಾದಿತ್ತು. ಭದ್ರತಾ ದೃಷ್ಟಿಯಿಂದ ಯಾವುದೇ ಪ್ರತಿಭಟನೆಯನ್ನು ಮಾಡಲು ಅನುಮತಿಯನ್ನು ನೀಡಿಲ್ಲ ಎಂದು ವಿಧಾನಸೌಧ ಪೊಲೀಸರು ಸೂಚನಾ ಪತ್ರ ಅಂಟಿಸಿದ್ದರು. ಇದರಿಂದ ಕೆರಳಿದ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.

   ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರುದ್ಧ ಸಿದ್ದರಾಮಯ್ಯ ಗರಂಕಾರ್ಮಿಕ ಕಾಯ್ದೆ ತಿದ್ದುಪಡಿ ವಿರುದ್ಧ ಸಿದ್ದರಾಮಯ್ಯ ಗರಂ

   ನಿನ್ನೆ ವಿಕಾಸಸೌಧದಲ್ಲಿ ಶಾಸಕಾಂಗ ಪಕ್ಷದ ಮಾಡಲೂ ನಮಗೆ ಅವಕಾಶ ಕೊಟ್ಟಿಲ್ಲ. ಈಗ ಪ್ರತಿಭಟನೆ ಮಾಡಲೂ ನಮಗೆ ಅವಕಾಶವಿಲ್ಲವಾ? ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ನಂತರ ಸಿದ್ದರಾಮಯ್ಯ ಹಾಗೂ ಡಿಕೆಶಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ 40ಕ್ಕು ಹೆಚ್ಚು ಶಾಸಕರು ಹಾಗೂ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.

   ಬೋಗಸ್‌ ಯೋಜನೆ, ರಾಜ್ಯ ಸರ್ಕಾರ ವಿಫಲ

   ಬೋಗಸ್‌ ಯೋಜನೆ, ರಾಜ್ಯ ಸರ್ಕಾರ ವಿಫಲ

   ಕೇಂದ್ರ ಸರ್ಕಾರ ಬೋಗಸ್‌ ಯೋಜನೆಗಳನ್ನು ಘೋಷಣೆ ಮಾಡುತ್ತಿದೆ. ರಾಜ್ಯ ಸರ್ಕಾರ ಲಾಕ್‌ಡೌನ್ ಸಂದರ್ಭದಲ್ಲಿ ಜನ ಹಿತ ಕಾಯುವ ಬದಲು ಜನ ವಿರೋಧಿಯಾಗಿ ನಡೆದುಕೊಂಡಿದೆ. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ಪ್ಯಾಕೇಜ್ ಬೋಗಸ್ ಪ್ಯಾಕೇಜ್. ಪ್ಯಾಕೇಜ್‌ನ ಒಂದು ರೂಪಾಯಿ ಕೂಡ ಯಾರಿಗೂ ತಲುಪಿಲ್ಲ. ಒಬ್ಬ ಫಲಾನುಭವಿಗೂ ಒಂದು ಸಾವಿರ ರೂ. ಕೊಟ್ಟಿಲ್ಲ. ಬಜೆಟ್‌ನಲ್ಲಿರುವ ಯೋಜನೆಗಳನ್ನು ತಿರುಚಿ ಶಹಬ್ಬಾಶ್‌ಗಿರಿ ತೆಗೆದುಕೊಳ್ಳುವ ಪ್ರಯತ್ನವನ್ನು ಮೋದಿ ಮಾಡುತ್ತಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಜನಹಿತ ಕಾಪಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.

   ಇದೇ ಸಂದರ್ಭ ಸಿದ್ದರಾಮಯ್ಯ ಹಾಕಿದ ಆವಾಜ್‌ಗೆ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ದಂಗಾಗಿ ಹೋದರು.

   ಮಾಜಿ ಸಿಎಂ ಸಿದ್ದರಾಮಯ್ಯ ಅವಾಜ್

   ಮಾಜಿ ಸಿಎಂ ಸಿದ್ದರಾಮಯ್ಯ ಅವಾಜ್

   ಭಾಷಣದ ಬಳಿಕ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ರೂ. ಘೋಷಣೆ ವಿರುದ್ಧ ಘೋಷಣೆ ಕೂಗಿದರು. ಇದೇ ಸಂದರ್ಭದಲ್ಲಿ ಅವರನ್ನು ಅನುಸರಿಸಿ ತಪ್ಪು ಘೋಷಣೆ ಹಾಕಿದ ಮುಖಂಡರನ್ನು ಸಿದ್ದರಾಮಯ್ಯ ಜೋರಾಗಿಯೆ ಗದರಿಸಿದರು. ಪ್ಯಾಕೇಜ್ ಘೋಷಣೆ ಮಾತ್ರ ಮಾಡಲಾಗಿದೆ, ಬಿಡುಗಡೆ ಆಗಿಲ್ಲ.

   ಲಾಕ್‌ಡೌನ್ ಸಂಪೂರ್ಣ ಮುಗಿಯುವುದಕ್ಕಾಗಿ ಕಾಯುತ್ತಿದ್ದಾರೆ ಡಿಕೆಶಿಲಾಕ್‌ಡೌನ್ ಸಂಪೂರ್ಣ ಮುಗಿಯುವುದಕ್ಕಾಗಿ ಕಾಯುತ್ತಿದ್ದಾರೆ ಡಿಕೆಶಿ

   ಸರಿಯಾಗಿ ಘೋಷಣೆ ಹಾಕಿ ಎಂದು ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಶಾಸಕರನ್ನು ಗದರಿದರು. ಸಿದ್ದರಾಮಯ್ಯ ಅವರ ಆಕ್ರೋಶ ಎಷ್ಟರ ಮಟ್ಟಿಗೆ ಇತ್ತು ಅಂದರೆ ಪಕ್ಕದಲ್ಲಿದ್ದ ಗಟ್ಟಿ ವ್ಯಕ್ತಿತ್ವದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ಒಂದು ಕ್ಷಣ ದಂಗಾಗಿ, ಸುಧಾರಿಸಿಕೊಂಡರು.

   ಆಹಾರ ಕಿಟ್ ಹಂಚಿಕೆಯಲ್ಲೂ ಅಕ್ರಮ

   ಆಹಾರ ಕಿಟ್ ಹಂಚಿಕೆಯಲ್ಲೂ ಅಕ್ರಮ

   ರಾಜ್ಯದಲ್ಲಿ 50 ಲಕ್ಷ ಕಾರ್ಮಿಕರಿದ್ದಾರೆ, ಆದರೆ ಕಾರ್ಮಿಕ ಇಲಾಖೆಯಿಂದ ಕೇವಲ 3 ಲಕ್ಷ ಫುಡ್ ಕಿಟ್ ಮಾತ್ರ ಹಂಚಿದ್ದಾರೆ. ಕಾರ್ಮಿಕರಿಗೆ ಆಹಾರ ಸಾಮಗ್ರಿಯನ್ನೇ ಕೊಟ್ಟಿಲ್ಲ. ಆರಂಭದಲ್ಲೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಿಲ್ಲ. ಹೀಗಾಗಿ ಕೊರೊನಾ ವೈರಸ್ ಹರಡುವುದನ್ನು ತಡೆಯಲಾಗಲಿಲ್ಲ. ನಿಮಗೆ ಸರ್ಕಾರ ನಡೆಸುವ ಯೋಗ್ಯತೆ ಇಲ್ಲ ಎಂದು ಡಿಕೆಶಿ ಆರೋಪ ಮಾಡಿದರು.

   ಪಂಚಾಯತಿ ಚುನಾವಣೆಯನ್ನು ಮಾಡುತ್ತಿಲ್ಲ, ಬಿಜೆಪಿ ಕಾರ್ಯಕರ್ತರನ್ನು ನಾಮ ನಿರ್ದೇಶನ ಮಾಡಲು ಹುನ್ನಾರ ನಡೆಸಿದ್ದಾರೆ. ಚುನಾವಣೆ ನಡೆಸದೇ ಇದ್ದರೆ ಹಾಲಿ ಸದಸ್ಯರನ್ನೇ ಮುಂದುವರಿಸಿ. ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಸಮಿತಿ ರಚನೆಯ ನಿರ್ಧಾರ ಜನ ವಿರೋಧಿ ನೀತಿ. ಕೂಡಲೇ ಎಪಿಎಂಸಿ ಕಾಯ್ದೆ ವಾಪಸ್ ಪಡೆಯಬೇಕು ಎಂದು ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.

   ಮೋದಿ ಬೋಗಸ್‌ ಪ್ಯಾಕೇಜ್

   ಮೋದಿ ಬೋಗಸ್‌ ಪ್ಯಾಕೇಜ್

   ಮೋದಿ ಬೋಗಸ್ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಅವರು ಸುಳ್ಳು ಮಾಹಿತಿ ಕೊಟ್ಟರು. ಜಿಡಿಪಿಯ ಒಂದು ಪರ್ಸೆಂಟ್ ಹಂಚಿಕೆ ಮಾಡಿದ್ದಾರೆ. ನರೇಂದ್ರ ಮೋದಿ ಅಂತ ಮಹಾನ್ ಸುಳ್ಳುಗಾರ ಬೇರೊಬ್ಬರಿಲ್ಲ. ಭಾವನಾತ್ಮಕ ವಿಚಾರಗಳ ಹೇಳಿ ಚಪ್ಪಾಳೆ ತಟ್ಟಿ ಅಂತ ಹೇಳ್ತಾರೆ. ನರೇಂದ್ರ ಮೋದಿ ಅಲ್ಲಿ ಸೆಲ್ಯೂಟ್ ಮಾಡಿದ್ರೆ ಇವರು ಇಲ್ಲಿ ಕೈ ಜೋಡಿಸುತ್ತಾರೆ. ಎಪಿಎಂಸಿ ಕಾಯಿದೆ ತರಾತುರಿ ನಿರ್ಧಾರ ಯಾಕೆ? ಕಚ್ಚಾತೈಲ ಬೆಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಡಿಮೆ ಆಗಿದೆ. ನಮ್ಮಲ್ಲಿ ಪೆಟ್ರೋಲಿಯಂ ಬೆಲೆ ಕಡಿಮೆ ಮಾಡಿ.

   ಏನಿದು ಎಪಿಎಂಸಿ ಕಾಯಿದೆ ತಿದ್ದುಪಡಿ ಸುಗ್ರೀವಾಜ್ಞೆ? ಅದಕ್ಕೆ ಅಷ್ಟೊಂದು ವಿರೋಧ ಯಾಕೆ?ಏನಿದು ಎಪಿಎಂಸಿ ಕಾಯಿದೆ ತಿದ್ದುಪಡಿ ಸುಗ್ರೀವಾಜ್ಞೆ? ಅದಕ್ಕೆ ಅಷ್ಟೊಂದು ವಿರೋಧ ಯಾಕೆ?

   ಯಡಿಯೂರಪ್ಪ ಅವರ ಆರೋಗ್ಯ ಇನ್ನಷ್ಟು ಚೆನ್ನಾಗಿ ಆಗಲಿ. ಆದರೆ ಅವರು ಕಾರ್ಮಿಕರ, ಜನ ಸಾಮಾನ್ಯರ ಹಿತ ಕಾಪಾಡಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

   ನಾಯಕರಿಗೆ ಟೋಪಿ ಹಾಕಿದ ಕೆಪಿಸಿಸಿ ಸಿಬ್ಬಂದಿ

   ನಾಯಕರಿಗೆ ಟೋಪಿ ಹಾಕಿದ ಕೆಪಿಸಿಸಿ ಸಿಬ್ಬಂದಿ

   ಇನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಸುಡು ಬಿಸಿಲಿನಲ್ಲಿ ಧರಣಿ ಸತ್ಯಾಗ್ರಹ ಮಾಡಿದ ಕಾಂಗ್ರೆಸ್‌ ಶಾಸಕರು, ನಾಯಕರಿಗೆ ಕೆಪಿಸಿಸಿ ಕಚೇರಿ ಸಿಬ್ಬಂದಿ ಟೋಪಿ ಧರಿಸಲು ಕೊಟ್ಟರು. ಟೋಪಿ ಧರಿಸಿದ್ದರಿಂದ ತಕ್ಕಮಟ್ಟಿಗೆ ಬಿಸಿಲಿನ ಝಳದಿಂದ ಕಾಂಗ್ರೆಸ್‌ ನಾಯಕರು ಪಾರಾದರು.

   ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಕೆ ಜೆ ಜಾರ್ಜ್, ಆಂಜನೇಯ, ಬಿ ಕೆ ಹರಿಪ್ರಸಾದ್, ಪ್ರಿಯಾಂಕ್ ಖರ್ಗೆ, ಎಸ್ ಆರ್ ಪಾಟೀಲ್, ಐವಾನ್ ಡಿಸೋಜ, ಸತೀಶ್ ಜಾರಕಿಹೊಳಿ ಸೇರಿದಂತೆ 40ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದರು.

   English summary
   Karnataka Congress protest at Vidhana Soudha condemning anti-people policies of governments during lockdown in Bengaluru
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X