ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ಸಭೆ: ಏಕಾಂಗಿಯಾಗಿ ಉಪಚುನಾವಣೆ ಎದುರಿಸಲು ನಿರ್ಧಾರ?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 14: ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ರಾಜ್ಯ ಕಾಂಗ್ರೆಸ್ ಸಭೆ ನಡೆಸಿದ್ದು ಉಪಚುನಾವಣೆ ಕುರಿತು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿ ಇನ್ನೂ ಹಲವರು ಹಾಜರಿದ್ದ ಸಭೆಯ ನೇತೃತ್ವವನ್ನು ಸಿದ್ದರಾಮಯ್ಯ ವಹಿಸಿದ್ದರು. ಉಪಚುನಾವಣೆ ತಯಾರಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.

ಎಂಟಿಬಿ ನಾಗರಾಜ್ ಎದೆಯಲ್ಲೀಗ ಸಿದ್ದರಾಮಯ್ಯ ಇಲ್ಲ, ಮತ್ತಿನ್ಯಾರಿದ್ದಾರೆ?ಎಂಟಿಬಿ ನಾಗರಾಜ್ ಎದೆಯಲ್ಲೀಗ ಸಿದ್ದರಾಮಯ್ಯ ಇಲ್ಲ, ಮತ್ತಿನ್ಯಾರಿದ್ದಾರೆ?

ಉಪಚುನಾವಣೆಗೆ ಮೈತ್ರಿ ಬೇಡ ಎಂದು ಹಲವರು ಕಾಂಗ್ರೆಸ್ ಮುಖಂಡರು ಒತ್ತಾಯ ಮಾಡಿದ್ದಾಗಿ ತಿಳಿದುಬಂದಿದ್ದು, ಮುಖಂಡರೂ ಸಹ ಮೈತ್ರಿ ಬೇಡವೆಂಬ ನಿರ್ಣಯಕ್ಕೆ ಬಂದಿದ್ದಾರೆ ಎನ್ನಲಾಗಿದೆ.

Karnataka Congress Had Meeting: Demand To Break Coalition

ಕಳೆದ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಅದು ನಿರೀಕ್ಷಿತ ಫಲ ನೀಡಿಲ್ಲ ಮತ್ತು ಸರ್ಕಾರ ಉರುಳಿದ ಬಳಿಕ ದೇವೇಗೌಡ ಅವರು ಕಾಂಗ್ರೆಸ್ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿರುವುದು ಕಾಂಗ್ರೆಸ್ ಮುಖಂಡರಿಗೆ ತೀವ್ರ ಅಸಮಾಧಾನ ಉಂಟುಮಾಡಿದೆ.

ಮೈತ್ರಿ ಬೇಡ ಎಂಬ ನಿರ್ಣಯವನ್ನು ಹೈಕಮಾಂಡ್‌ಗೆ ತಲುಪಿಸಲಾಗುವುದು ಮತ್ತು ಉಪಚುನಾವಣೆಗೆ ಏಕಾಂಗಿಯಾಗಿಯೇ ಹೋಗಲು ಅನುಮತಿಯನ್ನು ಕೋರುವಂತೆಯೂ ಇಂದಿನ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

ದೆಹಲಿ ಆಸ್ಪತ್ರೆಯಲ್ಲಿ ಇಡಿ ಅಧಿಕಾರಿಗಳ ಮೇಲೆ ಸಿದ್ದರಾಮಯ್ಯ ಗರಂ!ದೆಹಲಿ ಆಸ್ಪತ್ರೆಯಲ್ಲಿ ಇಡಿ ಅಧಿಕಾರಿಗಳ ಮೇಲೆ ಸಿದ್ದರಾಮಯ್ಯ ಗರಂ!

ಉಪಚುನಾವಣೆ ಗೆಲುವಿಗಾಗಿ ಕಾಂಗ್ರೆಸ್ ಈಗಾಗಲೇ ರಣತಂತ್ರ ಹೆಣೆಯುತ್ತಿದ್ದು, ಸೆಪ್ಟೆಂಬರ್ 21 ರಂದು ಎಂಟಿಬಿ ನಾಗರಾಜು ಕ್ಷೇತ್ರದಲ್ಲಿ ಬೃಹತ್ ಸಮಾವೇಶವನ್ನು ಕಾಂಗ್ರೆಸ್ ಆಯೋಜಿಸಲಿದ್ದು, ಈ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

English summary
Karnataka Congress had meeting today, Congress leaders demand to break coalition with JDS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X