ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾನ ಮರ್ಯಾದೆ ಇದ್ದರೆ ಸಿಎಂ ರಾಜೀನಾಮೆ ನೀಡಲಿ: ಆರ್. ಅಶೋಕ್

|
Google Oneindia Kannada News

ಬೆಂಗಳೂರು, ಜುಲೈ 8: ಅಪಮಾನ ಸಹಿಲಾಗದೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಈಗ ಮಂತ್ರಿಗಳೂ ರಾಜೀನಾಮೆ ನೀಡುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಅಂಧಕಾರ ಕವಿದಿದೆ ಎಂದು ಬಿಜೆಪಿ ನಾಯಕ ಆರ್. ಅಶೋಕ್ ಹೇಳಿದರು.

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಅಮೆರಿಕ ಅಮೆರಿಕ ಎಂದು ಹೋದಾಗಲೇ ಹೇಳಿದ್ದೆವು ಬೇಡ ಬರಗಾಲ ಇದೆ ಎಂದು. ಎಲ್ಲ ಬೆಳವಣಿಗೆ ಆದ ಮೇಲೆ ಶಾಸಕರು ಸರದಿ ಸಾಲಿನಲ್ಲಿ ಸಿಎಂ ವಿರುದ್ಧ ಧ್ವನಿ ಎತ್ತಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಅಮೆರಿಕದ ಬಂದವರು ಏರ್ ಪೋರ್ಟ್‌ನಿಂದ ಇಳಿದು ನೇರ ರಾಜ್ಯಭವನಕ್ಕೆ ತೆರಳಿ ರಾಜೀನಾಮೆ ನೀಡುತ್ತಾರೆ. ಗೌರವಯುತವಾಗಿ ನಡೆಯುಕೊಳ್ಳುತ್ತಾರೆ ಎಂದುಕೊಂಡಿದ್ದೆವು. ಆದರೆ ಅವರಲ್ಲಿ ಗೌರವ ಕಾಣಿಸುತ್ತಿಲ್ಲ. ಅವರಿಗೆ ಮಾನ ಮರ್ಯಾದೆ ಇದ್ದರೆ, ಕರ್ನಾಟಕದ ಸಂಸ್ಕೃತಿ ಪರಂಪರೆ ಗೊತ್ತಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ತೆರಳಿದರೆ ಒಳ್ಳೆಯದು ಎಂದರು.

ಸರ್ಕಾರ ಉಳಿಸಲು ಕೈ ಸಚಿವರ 'ತ್ಯಾಗ': ಸಾಮೂಹಿಕ ರಾಜೀನಾಮೆ ಸರ್ಕಾರ ಉಳಿಸಲು ಕೈ ಸಚಿವರ 'ತ್ಯಾಗ': ಸಾಮೂಹಿಕ ರಾಜೀನಾಮೆ

ಈ ಸರ್ಕಾರ ದುರ್ವರ್ತನೆ ತೋರಿಸುತ್ತಿದೆ. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಗೇಟು ಹಿಡಿದುಕೊಳ್ಳಲು ಹೋಗುವುದು, ತಳ್ಳುವುದು, ಎದ್ದು ಬಿದ್ದು ಓಡುವುದನ್ನು ಮಾಡುತ್ತಿದ್ದಾರೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯೇ? ಸಾಮಾನ್ಯ ಜನರೂ ಹೀಗೆ ಆಡುವುದಿಲ್ಲ ಎಂದು ಟೀಕಿಸಿದರು.

ಸರ್ಕಾರವನ್ನು ವಜಾ ಮಾಡಲಿ

ಸರ್ಕಾರವನ್ನು ವಜಾ ಮಾಡಲಿ

ರಾಜ್ಯದಲ್ಲಿ ಅಂಧಕಾರ ಆವರಿಸಿದೆ. ಶಾಸಕರನ್ನು ಬಲವಂತವಾಗಿ ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡಲೇ ರಾಜೀನಾಮೆ ನೀಡಬೇಕು. ರಾಜ್ಯಪಾಲರು ಸರ್ಕಾರವನ್ನು ವಜಾಗೊಳಿಸಬೇಕು.

ಎಚ್.ನಾಗೇಶ ಬೆಂಬಲ, 106ಕ್ಕೇರಿದ ಬಿಜೆಪಿ ಶಾಸಕರ ಬಲ! ಎಚ್.ನಾಗೇಶ ಬೆಂಬಲ, 106ಕ್ಕೇರಿದ ಬಿಜೆಪಿ ಶಾಸಕರ ಬಲ!

ರಾಜ್ಯದ ಜನರಲ್ಲಿ ಕೆಟ್ಟ ಅಭಿಪ್ರಾಯ

ರಾಜ್ಯದ ಜನರಲ್ಲಿ ಕೆಟ್ಟ ಅಭಿಪ್ರಾಯ

ಕುಮಾರಸ್ವಾಮಿ ಅವರ ಮೇಲೆ ಈ ಮೊದಲಿನಿಂದಲೂ ರಾಜ್ಯದ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿತ್ತು. ಅವರು ನಾಲಾಯಕ್ ಸಿಎಂ ಎಂದು ಪರಿಗಣಿಸಿದ್ದರು. ಈಗ ಅದನ್ನು ನೀವೇ ಹೋಗಿ ಸಾಬೀತುಪಡಿಸುವುದು ಅಗತ್ಯವಿಲ್ಲ. ರಾಜೀನಾಮೆ ನೀಡಿ ಎಂದು ಆಗ್ರಹಿಸಿದರು.

ಶಾಸಕರ ರಾಜೀನಾಮೆಗೆ ರಾಜ್ಯಪಾಲರ ಕುಮ್ಮಕ್ಕು: ಪರಮೇಶ್ವರ್ ಶಾಸಕರ ರಾಜೀನಾಮೆಗೆ ರಾಜ್ಯಪಾಲರ ಕುಮ್ಮಕ್ಕು: ಪರಮೇಶ್ವರ್

'ಇದು ಗೂಂಡಾಗಿರಿ ಸರ್ಕಾರ'

'ಇದು ಗೂಂಡಾಗಿರಿ ಸರ್ಕಾರ'

ಮೊನ್ನೆ ಸ್ಪೀಕರ್ ಕೊಠಡಿಯಲ್ಲಿ ಸಚಿವ ಡಿಕೆ ಶಿವಕುಮಾರ್ ಅವರು ಎಂಎಲ್‌ಎಗಳ ಜತೆ ರಾಜೀನಾಮೆ ಪತ್ರ ಹರಿದುಹಾಕಿ ದೌರ್ಜನ್ಯ ನಡೆಸಿದ್ದಾರೆ. ಅವರ ಕೃತ್ಯ ಸಂವಿಧಾನ ವಿರೋಧಿ. ಬೇರೆ ಪಾರ್ಟಿಯವರು ಇದ್ದಾಗ ಹಾಗೆ ಸ್ಪೀಕರ್ ಕಚೇರಿಗೆ ಹೀಗಬಾರದು. ಆದರೆ, ಇದು ಗೂಂಡಾ ರಾಜ್ಯದಂತೆ ಆಗಿದೆ. ಇಲ್ಲಿ ಗೂಂಡಾಗಿರಿ ನಡೆಯುವುದಿಲ್ಲ. ಮೆರೆದವರು ಮನೆಗೆ ಹೋಗಿದ್ದಾರೆ ಎಂದು ಹೇಳಿದರು.

ನನಗೆ ಯಾವ ಸಚಿವ ಸ್ಥಾನ, ಹುದ್ದೆಯೂ ಬೇಕಿಲ್ಲ: ರಾಮಲಿಂಗಾರೆಡ್ಡಿ ನನಗೆ ಯಾವ ಸಚಿವ ಸ್ಥಾನ, ಹುದ್ದೆಯೂ ಬೇಕಿಲ್ಲ: ರಾಮಲಿಂಗಾರೆಡ್ಡಿ

ಸರ್ಕಾರ ಉಳಿಸಿಕೊಳ್ಳಲು ಆಗೊಲ್ಲ

ಸರ್ಕಾರ ಉಳಿಸಿಕೊಳ್ಳಲು ಆಗೊಲ್ಲ

ಅವರ ಬಳಿ ಮ್ಯಾಜಿಕ್ ನಂಬರ್ ಅಲ್ಲ, ಯಾವ ನಂಬರ್ರೂ ಇಲ್ಲ. ಸರ್ಕಾರವನ್ನು ನಿಮ್ಮ ಕೈಯಿಂದ ಉಳಿಸಿಕೊಳ್ಳಲು ಆಗುವುದಿಲ್ಲ. ನೀರು ಆಚೆಗೆ ಹೋಗಿ ಆಗಿದೆ. ಅದನ್ನು ನಿಮ್ಮಿಂದ ತರಲು ಆಗುವುದಿಲ್ಲ. ನೀವು ಎಚ್ಚೆತ್ತುಕೊಳ್ಳಬೇಕಿತ್ತು. ಒಂದು ವರ್ಷ ಸಮಯ ಇತ್ತು. ನಿಮ್ಮ ಶಾಸಕರಿಗೆ, ಜನರಿಗೆ ಮೋಸ ಮಾಡಿದ್ದೀರಿ ಎಂದು ಟೀಕಿಸಿದರು.

English summary
BJP leader R Ashok demanded the resignation of CM HD Kumaraswamy. 'The state is in the darkness. People blaming HD Kumaraswamy. If he has self respect and dignity he should resign', R Ashok said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X