ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೆಟ್ಟರ್‌ಗೆ ಗುಂಡಿನ ಬ್ರಾಂಡ್ ಕ್ಲಾಸ್ ತೆಗೆದುಕೊಂಡ ಸಿದ್ದು

|
Google Oneindia Kannada News

ಬೆಂಗಳೂರು, ಜೂನ್ 21: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಾಕರಣದ ಮೇಷ್ಟ್ರ ಥರ ಗುಣ ಸಂಧಿ, ಆದೇಶ ಸಂಧಿ ಎಂದು ಹೂಬೇಹೂಬು ಕನ್ನಡದ ಮೇಷ್ಟ್ರು ರೀತಿ ಕ್ಲಾಸ್ ತೆಗೆದುಕೊಳ್ಳುವುದು ನಿಮ್ಮ ಗಮನಕ್ಕೆ ಬಂದಿರುತ್ತದೆ. ಮಂಗಳವಾರ ವಿಧಾನಸಭೆಯಲ್ಲಿ ಸಿಎಂಗೆ ಗೊತ್ತಿರುವ ಮದ್ಯದ ಬ್ರ್ಯಾಂಡ್ ಗಳ ಪರಿಚಯ ಆಯಿತು.

ಇಂದಿರಾ ಕ್ಯಾಂಟೀನ್ ನ ಮೆನು, ದರ ಮತ್ತಿತರ ಮಾಹಿತಿಇಂದಿರಾ ಕ್ಯಾಂಟೀನ್ ನ ಮೆನು, ದರ ಮತ್ತಿತರ ಮಾಹಿತಿ

ಆಗಿದ್ದೇನೆಂದರೆ, ಪ್ರತಿ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿಯಲ್ಲಿನ ಅಬಕಾರಿ ಇಲಾಖೆ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾವ ಮಾಡಿದರು. ಹುಬ್ಬಳ್ಳಿ-ಧಾರವಾಡದಲ್ಲಿ ವೈನ್ ಶಾಪ್ ಪರವಾನಗಿಗಾಗಿ ವ್ಯಕ್ತಿಯೊಬ್ಬರು ಡಿಸಿಗೆ ಅರ್ಜಿ ಕೊಟ್ಟಿದ್ದರು. ನಾನು ಎರಡು ಸಲ ಫೋನ್ ಮಾಡಿದ್ದೆ.

Karnataka CM Siddaramaiah explains liquor brands in assembly

ಆಗ ಆ ಡಿಸಿ, ಇಂಥದ್ದಕ್ಕೆಲ್ಲ ಹಣ ಆಗುತ್ತದೆ. ಅವರಿಂದ ಫೋನ್ ಮಾಡಿಸಿದ್ದೀರಿ ಅಂತ ರಿಯಾಯ್ತಿ ಕೊಡೋಣ. ಆದರೆ ವಿದೇಶಿ ಮದ್ಯ ಕೊಡಬೇಕು ಅಂದಿದ್ದಾರೆ. ಅದೇನೋ ಲೇಬಲ್ಲೊ ಟೇಬಲ್ಲೋ? ನನಗೆ ಗೊತ್ತಾಗಲ್ಲ ಅಂದಿದ್ದಾರೆ ಶೆಟ್ಟರ್.

Jagadish Shettar

ಆಗ ಎದ್ದು ನಿಂತ ಸಿದ್ರಾಮಣ್ಣ, ಶೆಟ್ರೇ ಅದು ಬ್ಲೂ ಲೇಬಲ್ ಅಂದಿದ್ದಾರೆ. ಅದೆಲ್ಲ ನನಗೆ ಗೊತ್ತಾಗಲ್ಲ. ನಿಮಗೆ ಗೊತ್ತಿರಬೇಕಲ್ಲಾ ಎಂದೂ ಸೇರಿಸಿದ್ದಾರೆ ಶೆಟ್ಟರ್. ಆಗ ಮುಖ್ಯಮಂತ್ರಿಗೆ ಉತ್ಸಾಹ ಬಂದು, ಬ್ಲ್ಯಾಕ್ ಲೇಬಲ್, ಗ್ರೀನ್ ಲೇಬಲ್, ರೆಡ್ ಲೇಬಲ್ ಎಲ್ಲವೂ ಗೊತ್ತಿದೆ. ನಿಮಗೆ ತಿಳಿದಿದೆಯೋ ಇಲ್ಲವೋ ಅಂತ ಪರೀಕ್ಷೆ ಮಾಡಿದೆ ಎಂದಿದ್ದಾರೆ.

Aravinda Limabavali

ಆಗ ಮಧ್ಯೆ ಪ್ರವೇಶ ಮಾಡಿದ ಬಿಜೆಪಿಯ ಅರವಿಂದ ಲಿಂಬಾವಳಿ, ಮುಖ್ಯಮಂತ್ರಿಗಳೇ ಗ್ಲೆನ್ ಫೆಡಿಚ್ ಸಿಂಗಲ್ ಮಾಲ್ಟ್ ವಿಸ್ಕಿ ಮರೆತಿರಲ್ಲಾ ಎಂದಿದ್ದಾರೆ. ನಾನೇನೋ ಹೇಳಲಿಲ್ಲ. ನಿನಗೆ ನೆನಪಿಲ್ಲವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಅದಕ್ಕೆ ಲಿಂಬಾವಳಿ, ಹೌದು ಸಾರ್. ನೀವೇ ನನಗೆ ಕೊಡಿಸಿದ್ದು, ಮರೆಯೋದಿಕ್ಕೆ ಸಾಧ್ಯವಾ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದ್ರೆ ಕಾವೇರಿ ಸಮಸ್ಯೆ ಖಲ್ಲಾಸ್: ಬಿಎಸ್ವೈಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದ್ರೆ ಕಾವೇರಿ ಸಮಸ್ಯೆ ಖಲ್ಲಾಸ್: ಬಿಎಸ್ವೈ

ಇವರಿಬ್ಬರ ಮಾತಿನ ಮಧ್ಯೆ ಬಿಜೆಪಿಯ ಜೀವರಾಜ್, ನಮಗೆ ಕೊಡಿಸಿ ಎಂದು ಕೇಳಿದ್ದಕ್ಕೆ, ಮಲೆನಾಡಿನವರಿಗೆ ಇದೆಲ್ಲಾ ಯಾಕೆ ಎಂದು ಸಿಎಂ ಚರ್ಚೆಗೆ ಕೊನೆ ಹಾಡಿದರು.

English summary
Karnataka CM Siddaramaiah explains liquor brand in assembly to opposition leader Jagadish Shettar, when he complains about corruption in excise department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X