ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿ ಮುಂದೆ ರೈತರು ಇಟ್ಟಿದ್ದಾರೆ 20 ಬೇಡಿಕೆ

|
Google Oneindia Kannada News

Recommended Video

ಬಿಎಸ್ ವೈ ಮುಂದೆ 20 ಬೇಡಿಕೆಗಳನ್ನಿಟ್ಟ ರೈತರು | Oneindia Kannada

ಬೆಂಗಳೂರು, ನವೆಂಬರ್.12: ಬಾರಿ ಬಾರಿ ಪರಿಹಾರ ಕೋರಿದರೂ ರಾಜ್ಯ ಸರ್ಕಾರ ತೆಲೆ ಕೆಡಿಸಿಕೊಳ್ಳುತ್ತಿಲ್ಲ. ಅದೆಷ್ಟು ಬಾರಿ ಪ್ರತಿಭಟನೆ ನಡೆಸಿದರೂ ಭರವಸೆ ಹೊರತಾಗಿ ಪ್ರತಿಭಟನಾಕಾರರಿಗೆ ಬೇರೇನೂ ಸಿಕ್ಕಿಲ್ಲ. ಆದರೆ, ಈ ಬಾರಿ ರೈತರು ಸುಮ್ಮನೆ ಇರಲಿಲ್ಲ.

ಹೌದು, ರೈತರ ತಾಳ್ಮೆಗೂ ಒಂದು ಮಿತಿಯಿದೆ. ಇಷ್ಟುದಿನ ಎಲ್ಲವನ್ನೂ ಸಹಿಸಿಕೊಂಡಿದ್ದ ಅನ್ನದಾತರು ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದರು. ಬಿ.ಎಸ್.ಯಡಿಯೂರಪ್ಪ ಸಹ ತಾಳ್ಮೆಯಿಂದ ರೈತರ ಜೊತೆ ಚರ್ಚೆ ನಡೆಸಿದರು.

ರೈತರ ಸಾಲಮನ್ನಾ: ಬಿಎಸ್‌ವೈ ಕೊಟ್ರು ಬಿಗ್ ಶಾಕ್ರೈತರ ಸಾಲಮನ್ನಾ: ಬಿಎಸ್‌ವೈ ಕೊಟ್ರು ಬಿಗ್ ಶಾಕ್

ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನೂರಾರು ರೈತರು, ಮುಖ್ಯಮಂತ್ರಿ ಜೊತೆ ನಡೆದ ಚರ್ಚೆಯಲ್ಲಿ ಭಾಗಿಯಾದರು, ರೈತರ ಜೊತೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬಿಎಸ್ ವೈ ಸಭೆ ನಡೆಸಿ ಬೇಡಿಕೆಗಳನ್ನು ಆಲಿಸಿದರು. ರೈತರು ಕೂಡಾ ಮುಖ್ಯಮಂತ್ರಿ ಎದುರು 20 ಬೇಡಿಕೆಗಳನ್ನು ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಆ ಬೇಡಿಕೆಗಳೇನು ಎಂದು ನೋಡುವುದಾದರೆ,

Karnataka CM BS Yadiyurappa Meeting With Farmers.

ಮುಖ್ಯಮಂತ್ರಿಗೆ ರೈತರ ಬೇಡಿಕೆಗಳು:

1. ನೆರೆಯಿಂದ ಮನೆ ಕಳೆದುಕೊಂಡವರಿಗೆ 10 ಲಕ್ಷ ಮೌಲ್ಯದ ಮನೆ ನಿರ್ಮಾಣ

2. ನೆರೆಗೆ ಪ್ರಾಣ ಕಳೆದುಕೊಂಡ ವ್ಯಕ್ತಿಯ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ

3. ಹಾನಿಯಾದ ಬೆಳೆಗೆ ಅನುಗುಣವಾಗಿ ಡಾ.ಸ್ವಾಮಿನಾಥನ್ ವರದಿಯಂತೆ ಪರಿಹಾರ ನೀಡುವುದು

4. ಪ್ರವಾಹದಿಂದ ಪ್ರತಿವರ್ಷ ಮುಳುಗಡೆಯಾಗುವ ಹಳ್ಳಿಗಳನ್ನು ಸ್ಥಳಾಂತರ ಮಾಡುವುದು

5. ನೆರೆಯಿಂದ ಸಂಪೂರ್ಣವಾಗಿ ಹಾಳಾಗಿರುವ ಭೂಮಿಗೆ ಪರ್ಯಾಯ ಭೂಮಿ ನೀಡವುದು

6. ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಆಗುತ್ತಿರುವ ಸಾಲ ವಸೂಲಾತಿಗೆ ಕಡಿವಾಣ ಹಾಕುವುದು

7. ಬರಗಾಲ ಪೀಡಿತ ರೈತರ ಜಮೀನುಗಳಿಗೆ ಎಕರೆಗೆ 25 ಸಾವಿರ ನೀಡುವುದು

8. ಎಲ್ಲಾ ರಾಷ್ಟ್ರೀಯ ಬ್ಯಾಂಕುಗಳ ಸಾಲಮನ್ನಾ ಮಾಡವುದು

9. ನೀರಾವರಿ ಯೋಜನೆಗೆ ಬಜೆಟ್ ನಲ್ಲಿ 1 ಲಕ್ಷ ಕೋಟಿ ನಿಗದಿ ಪಡಿಸುವುದು

10. 60 ವರ್ಷ ತುಂಬಿದ ಪ್ರತಿ ರೈತರಿಗೆ ಪ್ರತಿ ತಿಂಗಳು 10 ಸಾವಿರ ಮಾಸಾಶನ

11. ರೈತರ ಮೇಲೆ ಹಾಕಿರುವ ಎಲ್ಲಾ ಕೇಸ್ ವಾಪಸ್ ಪಡೆಯಬೇಕು

12. ಒಂದು ಲೀಟರ್ ಹಾಲಿಗೆ 50 ರೂಪಾಯಿ ನಿಗದಿ ಮಾಡಬೇಕು

13. ಬೆಳೆ ವಿಮೆಯನ್ನು ವೈಜ್ಞಾನಿಕವಾಗಿ ಮಾಡಬೇಕು

14. ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ನಿಗದಿ ಮಾಡುವುದು

15. ಎತ್ತಿನಹೊಳೆ ನೀರಾವರಿ ಯೋಜನೆ ಕಾಲಮಿತಿಯಲ್ಲಿ ಮುಗಿಸಬೇಕು

16. ಮಹದಾಯಿ ನೀರಾವರಿ ಯೋಜನೆ ಕಾಮಗಾರಿಯನ್ನು ಕಾಲಮಿತಿಯಲ್ಲಿ ಮುಗಿಸಬೇಕು

17. ಒಂದು ಕೆ.ಜಿ ರೇಷ್ಮೆಗೂಡಿಗೆ 500 ರೂಗಳ ಬೆಲೆ ನಿಗದಿ ಮಾಡಬೇಕು

18. ರೈತ ಚಳುವಳಿಯಲ್ಲಿ ಗೋಲಿಬಾರ್​​​ನಲ್ಲಿ ಮೃತಪಟ್ಟ ರೈತನ ಕುಟುಂಬಕ್ಕೆ 10 ಸಾವಿರ ರೂಪಾಯಿ ಮಾಸಾಶನ ನೀಡಬೇಕು

19. ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ಕಲ್ಪಿಸಬೇಕು.

2. ಕುರಿ, ಕೋಳಿ, ಹಂದಿ, ಮೀನು, ಹೈನುಗಾರಿಕೆ, ಹೂವು, ತರಕಾರಿ ಮತ್ತು ಇತರೆ ಗೃಹ ಕೈಗಾರಿಕೆಗಳಿಗೆ ಶೇ. 75 ರಷ್ಟು ಸಹಾಯಧನ ನೀಡಬೇಕು

English summary
Karnataka: Farmers Meet The CM Farmers Put The 20 Demands Infront Of B.S.Yadiyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X