ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾರಿಗೂ ಗೊತ್ತಿರದ ಸಿದ್ದು ಬದುಕಿನ 5 ಸಂಗತಿ, ರೇಡಿಯೋದಲ್ಲಿ ಅನಾವರಣ

|
Google Oneindia Kannada News

ಬೆಂಗಳೂರು, ಜುಲೈ 22: ಸಿದ್ದರಾಮಯ್ಯ ಅವರ ಬಾಲ್ಯಕ್ಕೂ, ಮತ್ತು ಕರ್ನಾಟಕದ ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಅವರು ಕಂಡ ಹಸಿವು ಮುಕ್ತ ಕರ್ನಾಟದ ಕನಸಿಗೂ ನಿಕಟ ಸಂಬಂಧವಿದೆ. 'ಎಲ್ಲರಿಗೂ ಆಹಾರ' ಎಂಬ ಪರಿಕಲ್ಪನೆಯೂ ಸಿದ್ದರಾಮುಯ್ಯನವರ ಬಾಲ್ಯದ ನೆನಪಿನೊಂದಿಗೆ ಬೆಸೆದಿದೆ! ಹಾಗೆಂದು ಹೇಳಿದ್ದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು.

'ನನ್ನ ಹೆಸರು ಸಿದ್ದರಾಮ, ನಾನು ಕೂಡ ಹಿಂದೂ''ನನ್ನ ಹೆಸರು ಸಿದ್ದರಾಮ, ನಾನು ಕೂಡ ಹಿಂದೂ'

92.7 ಬಿಗ್.ಎಫ್.ಎಂ ನ ಬಿಗ್ ಕಾಫಿ ಕಾರ್ಯಕ್ರಮಕ್ಕಾಗಿ ಆರ್ ಜೆ ಶೃತಿ ಅವರಿಗೆ ಸಂದರ್ಶನ ನೀಡಿರುವ ಸಿದ್ದರಾಮಯ್ಯ ತಮ್ಮ ಬದುಕಿನ ಹಲವು ಇಂಟರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಜುಲೈ 25, 26, 27 ರಂದು ಬೆಳಗ್ಗೆ 7 ಗಂಟೆಯಿಂದ 11 ಗಂಟೆ ವರೆಗೆ ಈ ಸಂದರ್ಶನ ಪ್ರಸಾರವಾಗಲಿದೆ.

Karnataka chief minister Siddaramaiah will be there in 92.7 big FM from July 25th to 27th

ಸಿದ್ದರಾಮಯ್ಯ ಅವರನ್ನು ಅವರ ಶಿಕ್ಷಕರು ಎಸ್ 3 (ಎಸ್ ಕ್ಯೂಬ್) ಎಂದು ಕರೆಯುತ್ತಿದ್ದರಂತೆ, ಅವರ ತಂದೆಗೆ ಅವರು ಡಾಕ್ಟರ್ ಆಗಬೇಕು ಎಂಬ ಆಸೆ ಇತ್ತಂತೆ, ಆದರೆ ಸಿದ್ದರಾಮಯ್ಯನವರು ತಮ್ಮ ತಂದೆಯ ಕನಸನ್ನು ಪೂರೈಸದೇ ದೂರ ಇರುವುದಕ್ಕೆ ಒಂದು ಕಾರಣವೂ ಇತ್ತಂತೆ... ಏನು ಆ ಕಾರಣ? ಸಿದ್ದರಾಮಯ್ಯ ಅವರಿಗೆ ಎಸ್ ಕ್ಯೂಬ್ ಎಂದು ಕರೆಯುತ್ತಿದ್ದಿದ್ದು ಏಕೆ? ಎಂಬುದಕ್ಕೆ ಉತ್ತರ, 92.7 ಬಿಗ್ ಎಫ್ ಎಂ ನಲ್ಲಿ ಸಿಗಲಿದೆ.

'ನಾನು ದಿನಾ 6.30ಕ್ಕೆ ಎದ್ದೇಳುತ್ತೇನೆ. ಇದಕ್ಕೆ ಕಾರಣ ನನ್ನ ಹೆಂಡತಿಯ ಮೊಬೈಲ್ ಆಗಲಿ ಅಥವಾ ಅಲಾರಾಂ ಆಗಲಿ ಅಲ್ಲ. ನನ್ನೊಳಗಿನ ಗಡಿಯಾರ ನನ್ನನ್ನು ಎಬ್ಬಿಸುತ್ತದೆ. ನನಗೆ ಅನ್ನ ಮಾಡುವುದಕ್ಕೆ ಹಾಗೂ ಉಪ್ಪಿಟ್ಟು ಮಾಡುವುದಕ್ಕೆ ಗೊತ್ತು' ಎಂದು ತಮ್ಮ ಅಡುಗೆ ಕಲೆಯ ಕುರಿತೂ ಸಿದ್ದರಾಮಯ್ಯನವರು ಮಾತನಾಡಿದ್ದಾರೆ.

ಸಿದ್ದರಾಮಯ್ಯ ಅವರ ಕುರಿತು ಯಾರಿಗೂ ಗೊತ್ತಿರದ ಐದು ವಿಷಯಗಳು ಬಿಗ್‍ಎಫ್‍ಎಮ್ ನ ಬಿಗ್ ಕಾಫಿ ಶೋನಲ್ಲಿ ಅನಾವರಣಗೊಳ್ಳಲಿವೆ.

English summary
Karnataka Chief Minister Siddaramaiah will speak about his childhood days in 92.7 big FM on July 25, 26, 27. people can know 5 interesting inknown facts of Siddaramaiah's life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X