ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏ. 30ರವರೆಗೂ ಆರಾಧನಾ ಸೇವೆ ನಡೆಸದಂತೆ ಚರ್ಚ್‌ಗಳಿಗೆ ಸೂಚನೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 9: ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ಕೊರೊನಾ ನಿಯಂತ್ರಣಕ್ಕೆ ಕೆಲವು ನಿರ್ಬಂಧಗಳನ್ನು ಹೇರಲಾಗುತ್ತಿದೆ. ಏಪ್ರಿಲ್ 11ರಿಂದ ಏಪ್ರಿಲ್ 30ರವರಗೂ ಯಾವುದೇ ಆರಾಧನಾ ಸೇವೆಗಳನ್ನು ಆಯೋಜಿಸದಂತೆ ಹಾಗೂ ಭಾನುವಾರದ ಹೊತ್ತು ಪ್ರಾರ್ಥನೆಗೆ ಚರ್ಚ್‌ಗಳನ್ನು ತೆರಯುವಂತೆ ಕರ್ನಾಟಕ ಕೇಂದ್ರ ಡಯಾಸಿಸ್ ಸೂಚಿಸಿದೆ.

ಈ ಕುರಿತು ಪತ್ರ ಬರೆದಿರುವ ಕೇಂದ್ರ ಡಯಾಸಿಸ್, "ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಈ ಸೋಂಕು ಅತಿ ವೇಗವಾಗಿ ತಗುಲುತ್ತಿದ್ದು, ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೋಂಕಿಗೆ ತುತ್ತಾಗಿದ್ದಾರೆ. ಕೊರೊನಾ ಹರಡುವಿಕೆ ತಡೆಯಲು ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಬೇಕಿದೆ" ಎಂದು ಉಲ್ಲೇಖಿಸಿದೆ.

Explained: ಕೊರೊನಾ ನಿಯಂತ್ರಿಸಲು ಸರ್ಕಾರದಿಂದ ಹೊಸ ನಿರ್ಬಂಧExplained: ಕೊರೊನಾ ನಿಯಂತ್ರಿಸಲು ಸರ್ಕಾರದಿಂದ ಹೊಸ ನಿರ್ಬಂಧ

ಏಪ್ರಿಲ್ 11ರಿಂದ 30ರವರೆಗೂ ಆರಾಧನಾ ಸೇವೆಯನ್ನು ಆಯೋಜಿಸಬಾರದು. ಭಕ್ತರಿಗೆಂದು ಆನ್‌ಲೈನ್ ಆರಾಧನಾ ಸೇವೆ ಆರಂಭಿಸಿ. ಭಾನುವಾರ ಸಾಮೂಹಿಕ ಪ್ರಾರ್ಥನೆಗಲ್ಲದೇ ವೈಯಕ್ತಿಕ ಪ್ರಾರ್ಥನೆಗೆ ಅವಕಾಶ ನೀಡಬೇಕು. ಚರ್ಚ್‌ಗಳ ಸ್ಯಾನಿಟೈಸೇಷನ್, ಮಾಸ್ಕ್ ಧರಿಸುವಿಕೆಯಂಥ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದೆ.

Karnataka Central Diocese Asks Churches Not To Hold Worship Service Till April 30

ಬ್ಯಾಪ್ಟಿಸಂ, ಮದುವೆ, ಅಂತ್ಯಸಂಸ್ಕಾರದಂಥ ಕಾರ್ಯಗಳಿಗೆ 50ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

Recommended Video

#Covid19Update : ದೇಶದಲ್ಲಿ 24 ಗಂಟೆಗಳಲ್ಲಿ 1,31,968 ಜನರಿಗೆ ಕೊರೊನಾ ಪಾಸಿಟಿವ್ | Oneindia Kannada

ಮಹಾರಾಷ್ಟ್ರ, ಛತ್ತೀಸ್‌ಗಡ, ಕರ್ನಾಟಕ, ಉತ್ತರ ಪ್ರದೇಶ, ದೆಹಲಿ, ಮಧ್ಯಪ್ರದೇಶ, ತಮಿಳುನಾಡು, ಗುಜರಾತ್, ಕೇರಳ, ಪಂಜಾಬ್‌ನಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿವೆ. ಈ ಬೆನ್ನಲ್ಲೇ ಕರ್ನಾಟಕದಲ್ಲಿಯೂ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ.

English summary
Karnataka Central Diocese asks churches not to hold worship service till april 30
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X