ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೂರ್ಯನಗರ 4ನೇ ಹಂತದ ಟೌನ್ ಶಿಪ್‌ಗೆ ಗ್ರೀನ್ ಸಿಗ್ನಲ್

|
Google Oneindia Kannada News

ಬೆಂಗಳೂರು, ಸೆ .4: ಏಷ್ಯಾದ ಅತಿದೊಡ್ಡ ಟೌನ್ ಶಿಪ್ ಯೋಜನೆ, ಪ್ರಧಾನಮಂತ್ರಿಗಳ ವಸತಿ ಬಡಾವಣೆ ಯೋಜನೆಯಡಿ ನಿರ್ಮಾಣವಾಗುತ್ತಿರುವ ಸೂರ್ಯ ನಗರ ನಾಲ್ಕನೇ ಹಂತದ ನಿರ್ಮಾಣ ಕಾರ್ಯಕ್ಕೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಸಿರು ನಿಶಾನೆ ಸಿಕ್ಕಿದೆ ಎಂದು ವಸತಿ ಸಚಿವ ವಿ ಸೋಮಣ್ಣ ಹೇಳಿದ್ದಾರೆ.

Recommended Video

ಇದ್ದಕ್ಕಿದ್ದಂತೆ ಮತ್ತೆ ಆಸ್ಪತ್ರೆಗೆ ದಾಖಲಾದ DK ಶಿವಕುಮಾರ್ | Oneindia Kannada

ರಾಜಧಾನಿಯಲ್ಲಿ ವಾಸಿಸುತ್ತಿರುವ ಮಧ್ಯಮ ಹಾಗೂ ಕೆಳಮಧ್ಯಮ ವರ್ಗದ ಲಕ್ಷಾಂತರ ಮಂದಿ ಸ್ವಂತ ಸೂರು, ನಿವೇಶನ ಹೊಂದುವ ಹೆಬ್ಬಯಕೆಯನ್ನು ಹೊಂದಿರುತ್ತಾರೆ. ಎಲ್ಲರ ಆಶೋತ್ತರಗಳನ್ನು ಈಡೇರಿಸಲು ವಸತಿ ಇಲಾಖೆ ಸಜ್ಜಾಗಿದೆ ಎಂದು ಸಚಿವರು ಹೇಳಿದರು.

ಸೈಟ್ ಹರಾಜು; ಬಿಡಿಎಗೆ 171.99 ಕೋಟಿ ಆದಾಯಸೈಟ್ ಹರಾಜು; ಬಿಡಿಎಗೆ 171.99 ಕೋಟಿ ಆದಾಯ

ಈ ಬಡಾವಣೆಯಲ್ಲಿ ಸುಮಾರು 1938 ಎಕರೆ ವಿಸ್ತೀರ್ಣದಲ್ಲಿ 30,000 ನಿವೇಶನಗಳನ್ನು ವಿತರಿಸಲು ಉದ್ದೇಶಿಸಲಾಗಿದೆ ಬಡಾವಣೆಯ ನಿರ್ಮಾಣಕಾರ್ಯ ಸಮರೋಪಾದಿಯಲ್ಲಿ ಪ್ರಾರಂಭವಾಗಲಿದೆ. ಭೂಮಾಲೀಕರ ಜೊತೆ ಸತತ ಸಭೆಗಳನ್ನು ನಡೆಸಿ ಕೊನೆಗೆ ಶೇ 50: 50ರ ಅನುಪಾತದಲ್ಲಿ ಭೂಮಿ ಪಡೆಯಲು ಪರಿಹಾರ ಸೂತ್ರ ಕಲ್ಪಿಸಲಾಗಿದೆ ಎಂದರು.

ಸೂರ್ಯ ನಗರ ಟೌನ್ ಶಿಪ್ ನಿರ್ಮಾಣದ ಪ್ರಾಥಮಿಕ ಹಂತದ ಅಧಿ ಸೂಚನೆ 2013ರಲ್ಲೇ ಪ್ರಕಟಿಸಲಾಗಿತ್ತು. ಕಳೆದ ವರ್ಷ ನಿವೇಶನಕ್ಕಾಗಿ ಅರ್ಜಿಯನ್ನು ಕರೆಯಲಾಗಿತ್ತು.

ಭೂ ಮಾಲೀಕರ ಜೊತೆ 7 ವರ್ಷಗಳ ಸುದೀರ್ಘ ಸಭೆ

ಭೂ ಮಾಲೀಕರ ಜೊತೆ 7 ವರ್ಷಗಳ ಸುದೀರ್ಘ ಸಭೆ

ಕಳೆದ 7 ವರ್ಷಗಳಿಂದ ಭೂ ಮಾಲೀಕರ ಜೊತೆ ಪರಿಹಾರ ಸೂತ್ರ ಕಂಡುಕೊಳ್ಳಲು ಸರ್ಕಾರ ಕೂಡಾ ನಿರಂತರವಾಗಿ ಯತ್ನಿಸುತ್ತಲೇ ಇತ್ತು. ಕೊನೆಗೂ ಸೋಮಣ್ಣ ಅವರು ಭೂ ಮಾಲೀಕರ ಮನ ಒಲಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿ ಎಕರೆಗೆ 20 ಲಕ್ಷ ರುಪಾಯಿ ಮುಂಗಡ ನೀಡಲು ಸಚಿವ ಸಂಪುಟದಲ್ಲಿ ಅನುಮತಿ ಸಿಕ್ಕಿದೆ.

ಆನೇಕಲ್ ತಾಲೂಕಿನಲ್ಲಿ ಬೃಹತ್ ಟೌನ್ ಶಿಪ್

ಆನೇಕಲ್ ತಾಲೂಕಿನಲ್ಲಿ ಬೃಹತ್ ಟೌನ್ ಶಿಪ್

ಗೃಹ ಮಂಡಳಿಯು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕೋನಸಂದ್ರ, ಬೊಮ್ಮಂಡಹಳ್ಳಿ, ಕಾಡುಜಕ್ಕನಹಳ್ಳಿ, ಇಂಡ್ಲವಾಡಿ ಮತ್ತು ಬಗ್ಗನದೊಡ್ಡಿ ಗ್ರಾಮಗಳಲ್ಲಿ 1938 ಎಕರೆ ಜಮೀನಿನಲ್ಲಿ ಉತ್ತಮ ಗುಣಮಟ್ಟದ ನಿವೇಶನ/ಮನೆಗಳನ್ನು ಅಭಿವೃದ್ಧಿ ಪಡಿಸಲಿದೆ. ಯೋಜನಾ ವೆಚ್ಚ ಸುಮಾರು 1910 ಕೋಟಿ ರು ಎಂದು ಅಂದಾಜಿಸಲಾಗಿದೆ.

2019ರ ಡಿಸೆಂಬರ್ ತಿಂಗಳಿನಲ್ಲಿ ನಿವೇಶನ ಹಂಚಿಕೆ ಅರ್ಜಿ

2019ರ ಡಿಸೆಂಬರ್ ತಿಂಗಳಿನಲ್ಲಿ ನಿವೇಶನ ಹಂಚಿಕೆ ಅರ್ಜಿ

ಈ ಯೋಜನೆಯಡಿ ನಿಯಮಾವಳಿಗೆ ಅನುಗುಣವಾಗಿ ನಿವೇಶನಗಳನ್ನು ಹೊಂದಲು ಬಯಸುವ ಸಾರ್ವಜನಿಕರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ನಿವೇಶನಗಳಿಗೆ ಮಂಡಳಿ ವತಿಯಿಂದ ನಿಗದಿಪಡಿಸಿದ ಅಂದಾಜು ದರ ಪ್ರತಿ ಚದರ ಅಡಿಗೆ ರೂ. 1500 ರೂ., ಪ್ರತಿ ಚದರ ಮೀಟರ್‌ಗೆ 16,146 ರೂ.ಗಳು ಎಂದು ಕಳೆದ ಡಿಸೆಂಬರ್ ನಲ್ಲಿ ಅರ್ಜಿ ಕರೆಯಲಾಗಿತ್ತು.

ಸೂರ್ಯನಗರ ಟೌನ್ ಶಿಪ್‌ ಬಗ್ಗೆ ಮಾಹಿತಿ

ಸೂರ್ಯನಗರ ಟೌನ್ ಶಿಪ್‌ ಬಗ್ಗೆ ಮಾಹಿತಿ

ಹೆಚ್ಚಿನ ಮಾಹಿತಿಗಾಗಿ ಜನರು ಸಹಾಯಕ ಕಾರ್ಯಪಾಲಕ ಅಭಿಯಂತರರು, ಕರ್ನಾಟಕ ಗೃಹ ಮಂಡಳಿ, ಸೂರ್ಯ ನಗರ ಯೋಜನಾ ಕಚೇರಿ, ಸೂರ್ಯ ನಗರ ಬೆಂಗಳೂರು ಇವರನ್ನು ಖುದ್ದಾಗಿ ಅಥವ ದೂರವಾಣಿ ಮೂಲಕ ಸಂಪರ್ಕಿಸಬಹುದು. 9448373762/9886647084

English summary
Karnataka Cabinet approves Surya Nagar Phase 4 work by Karnataka Housing Board (KHB). Surya Nagar constructed under PM Township which is biggest in Asia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X