ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಬಜೆಟ್‌: ಬಿಎಂಟಿಸಿ ಬಸ್‌ ಪ್ರಯಾಣ ದರ ಇಳಿಸಲು ಒತ್ತಾಯ

|
Google Oneindia Kannada News

ಬೆಂಗಳೂರು, ಮಾರ್ಚ್ 04: ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತನ್ನ ಚೊಚ್ಚಲ ಬಜೆಟ್‌ ಅನ್ನು ಮಾರ್ಚ್ 4ರಂದು ಮಂಡನೆ ಮಾಡಲಿದ್ದಾರೆ. ಈ ನಡುವೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ವಾರ್ಷಿಕ 1000 ಕೋಟಿ ರೂ.ಗಳನ್ನು ಮಂಜೂರು ಮಾಡುವಂತೆ ಸಾರ್ವಜನಿಕ ಸಾರಿಗೆ ವಕೀಲರ ಗುಂಪು ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆ (ಬಿಬಿಪಿವಿ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಾರಿಗೆ ಸಚಿವ ಬಿ ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಿದೆ. ಇದರಿಂದಾಗಿ ಸಾಮಾನ್ಯ ಜನರಿಗೆ ಬಸ್ ದರವನ್ನು ಕಡಿಮೆ ಮಾಡಬಹುದು ಮತ್ತು ಮಹಿಳೆಯರು, ತೃತೀಯಲಿಂಗಿಗಳು, ಹಿರಿಯ ನಾಗರಿಕರಿಗೆ ಉಚಿತವಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಬಹುದು ಎಂದು ಹೇಳಿದೆ.

ಈ ಮನವಿಗೆ 6500ಕ್ಕೂ ಹೆಚ್ಚು ಸಹಿಗಳು ಲಭ್ಯವಾಗಿದೆ. "ಬಿಎಂಟಿಸಿ ಬಸ್ಸುಗಳು ಬೆಂಗಳೂರಿನ ಸಾರಿಗೆಯ ಜೀವನಾಡಿ. ಸಾಂಕ್ರಾಮಿಕ ರೋಗದ ಮೊದಲು, ಬಿಎಂಟಿಸಿಯಲ್ಲಿ 35 ಲಕ್ಷ ಜನರು ಪ್ರಯಾಣಿಸುತ್ತಿದ್ದರು. ಬಿಎಂಟಿಸಿ ದರಗಳು ಸಹ ಎಲ್ಲಾ ಭಾರತೀಯ ನಗರಗಳಲ್ಲಿ ಅತ್ಯಧಿಕವಾಗಿದೆ. ಬಿಎಂಟಿಸಿ ಬಸ್‌ಗಳ ಪ್ರಯಾಣದ ದುಬಾರಿ ವೆಚ್ಚವು ಈಗಾಗಲೇ ನಗರ ಬಡವರ ಅಲ್ಪ ಸಂಪಾದನೆಯನ್ನು ಹಿಂಡುತ್ತಿದೆ," ಎಂದು ಮನವಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಕರ್ನಾಟಕ ಬಜೆಟ್; ಬೆಂಗಳೂರು ಜನರ ನಿರೀಕ್ಷೆಗಳೇನು?ಕರ್ನಾಟಕ ಬಜೆಟ್; ಬೆಂಗಳೂರು ಜನರ ನಿರೀಕ್ಷೆಗಳೇನು?

"ಸಾರಿಗೆ ವೆಚ್ಚವನ್ನು ಉಳಿಸಲು ಹಲವರು ದೂರದವರೆಗೆ ನಡೆಯುವ ಅದೇಷ್ಟೋ ಜನರು ಇದ್ದಾರೆ. ಸಾರಿಗೆ ವೆಚ್ಚಕ್ಕೆ ಬೇಕಾಗಿ ನಿಯಮಿತವಾಗಿ ಆರೋಗ್ಯ ಅಥವಾ ಶಿಕ್ಷಣ ಮತ್ತು ತಮ್ಮ ಮಕ್ಕಳಿಗೆ ಪೌಷ್ಟಿಕಾಂಶದಂತಹ ಇತರ ವೆಚ್ಚಗಳನ್ನು ಕಡಿತ ಮಾಡಬೇಕಾದ ಸ್ಥಿತಿ ಉಂಟಾಗಿದೆ. ಇಡೀ ಕುಟುಂಬದ ಪ್ರಯಾಣ ವೆಚ್ಚ ಅಧಿಕವಾಗುವ ಕಾರಣ ಈ ನಿರ್ಧಾರಕ್ಕೆ ಬರಬೇಕಾಗಿದೆ. ಉತ್ತಮ ಕೆಲಸ, ಶಿಕ್ಷಣ ಅಥವಾ ಆರೋಗ್ಯವನ್ನು ಪಡೆಯುವ ವಿಚಾರದಲ್ಲಿ ಬಸ್‌ ಪ್ರಯಾಣ ದರ ಪರಿಣಾಮವನ್ನು ಬೀರುತ್ತಿದೆ," ಎಂದು ಹೇಳಿದ್ದಾರೆ.

Karnataka Budget 2022: Petition demands reduced fare on BMTC buses

ಸಾರ್ವಜನಿಕ ವಿಚಾರಣೆ ಆಯೋಜನೆ, ಹಲವು ಸಂಘಟನೆಗಳು ಐಕ್ಯ

ಈ ನಿಟ್ಟಿನಲ್ಲಿ ಬಿಬಿಪಿವಿ ಫೆಬ್ರವರಿ 15 ರಂದು ಕರ್ನಾಟಕದಲ್ಲಿ ಬಸ್ ಸೇವೆಯ ಸಮಸ್ಯೆಯ ಬಗ್ಗೆ ಚರ್ಚಿಸಲು ಸಾರ್ವಜನಿಕ ವಿಚಾರಣೆಯನ್ನು ಆಯೋಜಿಸಿದೆ. ಇದು ಭೌತಿಕವಾಗಿ ಮತ್ತು ಆನ್‌ಲೈನ್‌ನಲ್ಲಿ ಸಹಿ ಅಭಿಯಾನವನ್ನು ನಡೆಸಿದೆ. ಸ್ಲಂ ಜನಾಂದೋಲನ ಕರ್ನಾಟಕ, ಕರ್ನಾಟಕ ಸ್ಲಂ ಜನರ ಸಂಘಟನೆ, ಪೌರಕಾರ್ಮಿಕ ಒಕ್ಕೂಟ, ಬೀದಿ ಬದಿ ವ್ಯಾಪಾರಿಗಳ ಸಂಘ, ಗೃಹ ಕಾರ್ಮಿಕರ ಹಕ್ಕುಗಳ ಸಂಘ, ಕರ್ನಾಟಕ ಗೃಹ ಕಾರ್ಮಿಕರ ಸಂಘ, ಗಮನ ಮಹಿಳಾ ಸಮೂಹ, ಸಾಧನಾ ಮಹಿಳಾ ಸಂಘ ಮತ್ತು ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯಂತಹ ಸಮುದಾಯ ಸಂಘಟನೆಗಳು ಮತ್ತು ಸಂಘಗಳು ಅಭಿಯಾನದ ಭಾಗವಾಗಿದ್ದವು. ಸಲಹೆಗಳನ್ನು ಪರಿಶೀಲಿಸಿದ ಸಮಿತಿಯಲ್ಲಿ ಸಾರಿಗೆ ತಜ್ಞರು, ಶಿಕ್ಷಣ ತಜ್ಞರು, ಸಾಮಾಜಿಕ ಕಾರ್ಯಕರ್ತರು ಮತ್ತು ಜನಪ್ರತಿನಿಧಿಗಳು ಒಳಗೊಂಡಿದ್ದಾರೆ.

ಮನೆ ಬಾಗಿಲಿಗೆ ಸರ್ಕಾರದ ಸೇವೆ: ಬಜೆಟ್‌ನಲ್ಲಿ ಡಿಜಿಟಲ್ ಕರ್ನಾಟಕಕ್ಕೆ ಒತ್ತು!ಮನೆ ಬಾಗಿಲಿಗೆ ಸರ್ಕಾರದ ಸೇವೆ: ಬಜೆಟ್‌ನಲ್ಲಿ ಡಿಜಿಟಲ್ ಕರ್ನಾಟಕಕ್ಕೆ ಒತ್ತು!

"ನಗರದಲ್ಲಿ ಬಸ್ ಸೇವೆಗಳನ್ನು ಒದಗಿಸುವ ರೀತಿಯಲ್ಲಿ ಅವರು ಹಲವಾರು ವ್ಯತ್ಯಾಸಗಳನ್ನು ಸೂಚಿಸಿದ್ದಾರೆ. "ಸರ್ಕಾರದಿಂದ ಹಣಕಾಸಿನ ಬೆಂಬಲವಿಲ್ಲದೆ, ಬಿಎಂಟಿಸಿ ತನ್ನ ಕಾರ್ಯಾಚರಣೆಗಳನ್ನು ಉಳಿಸಿಕೊಳ್ಳಲು ತನ್ನ ಆದಾಯವನ್ನು ಅವಲಂಬಿಸಬೇಕಾಗಿದೆ. ಆದ್ದರಿಂದ, ಟಿಕೆಟ್ ದರಗಳನ್ನು ಹೆಚ್ಚು ಮಾಡಬೇಕಾಗಿದೆ. ಮೆಟ್ರೋಗೆ ಸಾವಿರಾರು ಕೋಟಿಗಳ ಸಾರ್ವಜನಿಕ ವೆಚ್ಚವನ್ನು ಉಲ್ಲೇಖಿಸಿದ ತೀರ್ಪುಗಾರರ ಸದಸ್ಯರು, ಮೆಟ್ರೋಗಿಂತ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರ ಹೊರತಾಗಿಯೂ ಬಿಎಂಟಿಸಿಗೆ ಸಾರ್ವಜನಿಕ ನಿಧಿಯ ಅಗತ್ಯವನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಟೀಕಿಸಿದರು," ಎಂದು ಕೂಡಾ ಮನವಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಮಧ್ಯಾಹ್ನ 12.30ಕ್ಕೆ ಚೊಚ್ಚಲ ಬಜೆಟ್ ಮಂಡನೆ ಮಾಡಲಿದ್ದಾರೆ. 2022-23ನೇ ಸಾಲಿನ ಬಜೆಟ್‌ನಲ್ಲಿ ಬೆಂಗಳೂರು ನಗರಕ್ಕೆ ಹಲವಾರು ಕೊಡುಗೆಗಳನ್ನು ನಿರೀಕ್ಷೆ ಮಾಡಲಾಗಿದೆ. ಚುನಾವಣೆ ಹೊಸ್ತಿಲಲ್ಲಿ ನಿಂತಿರುವ ಬಿಜೆಪಿ ಸರ್ಕಾರ ರಾಜಧಾನಿಗೆ ಬೆಂಗಳೂರಿಗೆ ಬಜೆಟ್‌ನಲ್ಲಿ ಹಲವು ಹೊಸ ಘೋಷಣೆಗಳನ್ನು ಮಾಡುವ ನಿರೀಕ್ಷೆ ಇದೆ. ನಮ್ಮ ಮೆಟ್ರೋ, ಸಬ್ ಅರ್ಬನ್ ರೈಲು ಸೇರಿದಂತೆ ವಿವಿಧ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡುವ ಸಾಧ್ಯತೆ ಇದೆ.

Recommended Video

ಪಾದಯಾತ್ರೆಯಲ್ಲಿ ಸಂಗಮದಿಂದ ನೀರು ತಂದ ಭೂಪ! | Oneindia Kannada

English summary
Karnataka Budget 2022: Ahead of Karnataka budget, petition demands reduced fare on BMTC buses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X