ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಬಜೆಟ್ 2021: ಬಿಎಂಟಿಸಿ ಬಸ್‌ಪಾಸ್‌ನಲ್ಲಿ ಮಹಿಳೆಯರಿಗೆ ರಿಯಾಯಿತಿ

|
Google Oneindia Kannada News

ಬೆಂಗಳೂರು, ಮಾರ್ಚ್ 08: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ 2021-22ನೇ ಸಾಲಿನ ಕರ್ನಾಟಕ ಬಜೆಟ್ ಇಂದು ಮಂಡನೆ ಮಾಡಿದ್ದು, ಮಹಿಳೆಯರಿಗಾಗಿ ವಿಶೇಷ ಯೋಜನೆಗಳನ್ನು ಘೋಷಿಸಿದ್ದಾರೆ.

ವನಿತಾ ಸಂಗಾತಿ ಹೆಸರಿನಲ್ಲಿ ಮಹಿಳೆಯರಿಗೆ ಬಿಎಂಟಿಸಿ ಬಸ್‌ಪಾಸ್‌ನಲ್ಲಿ ರಿಯಾಯಿತಿಯನ್ನು ನೀಡುವುದಾಗಿ ತಿಳಿಸಲಾಗಿದೆ. ಇತ್ತೀಚೆಗಷ್ಟೇ ಆಮ್‌ ಆದ್ಮಿ ಪಕ್ಷವು ಈ ಬಾರಿಯ ಬಜೆಟ್‌ನಲ್ಲಿ ಮಹಿಳೆಯರು ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಲು ಉಚಿತ ಬಸ್‌ಪಾಸ್ ಯೋಜನೆ ಘೋಷಿಸಿ ಎಂದು ಒತ್ತಾಯಿಸಿತ್ತು.

ಕರ್ನಾಟಕ ಬಜೆಟ್ 2021: ಬಿಬಿಎಂಪಿಯ ನಿರೀಕ್ಷೆಗಳು ಏನೇನಿವೆ?ಕರ್ನಾಟಕ ಬಜೆಟ್ 2021: ಬಿಬಿಎಂಪಿಯ ನಿರೀಕ್ಷೆಗಳು ಏನೇನಿವೆ?

ಆದರೆ ಉಚಿತವಲ್ಲ ರಿಯಾಯಿತಿ ದರದಲ್ಲಿ ಬಸ್‌ಪಾಸ್ ಯೋಜನೆಯನ್ನು ಸರ್ಕಾರ ಘೋಷಿಸಿದೆ. ಕಳೆದ ವರ್ಷ ಬಜೆಟ್‌ನಲ್ಲಿ ಗಾರ್ಮೆಂಟ್ಸ್ ಮಹಿಳೆಯರಿಗೆ ಮಾತ್ರ ಉಚಿತ ಬಸ್‌ಪಾಸ್ ಯೋಜನೆ ಘೋಷಣೆ ಮಾಡಿದ್ದರು ಆದರೆ ಸರ್ಕಾರ ಹಣವನ್ನು ಬಿಡುಗಡೆ ಮಾಡಿರಲಿಲ್ಲ ಎನ್ನುವ ಅಪವಾದವನ್ನೂ ಕೂಡ ಹೊತ್ತುಕೊಂಡಿತ್ತು.

Karnataka Budget 2021: Govt Announces Discount in BMTC Bus Pass For Women

ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾದ ಎಲ್ಲಾ ಯೋಜನೆಗಳಿಗೂ ಬದ್ಧವಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ನಗರ ಭಾಗದಲ್ಲಿ ಜೀವನ ನಡೆಸಲು ಗಂಡ-ಹೆಂಡತಿ ಇಬ್ಬರು ದುಡಿಯಬೇಕಾದ ಪರಿಸ್ಥಿತಿ ಇದೆ. ಇದನ್ನು ಸರಿದೂಗಿಸಬೇಕಾದರೆ ದುಡಿಮೆಗೆ ಹೋಗುವ ಮಹಿಳೆಯರಿಗೆ ಉಚಿತ ಸಾರಿಗೆ ನೀಡಬೇಕು.

Karnataka Budget 2021 Live Updates; ಕರ್ನಾಟಕ ಬಜೆಟ್ 2021 ಕ್ಷಣ-ಕ್ಷಣದ ಮಾಹಿತಿKarnataka Budget 2021 Live Updates; ಕರ್ನಾಟಕ ಬಜೆಟ್ 2021 ಕ್ಷಣ-ಕ್ಷಣದ ಮಾಹಿತಿ

ನಮ್ಮ ದೇಶದಲ್ಲಿ ದುಡಿಯುತ್ತಿರುವ ಗಂಡ ಹೆಂಡತಿಯರ ಸರಾಸರಿ ಶೇ 21 ರಷ್ಟಿದೆ. ತೃತಿಯ ಜನಗತ್ತಿನ ದೇಶಗಳನ್ನು ಹೊರತು ಪಡಿಸಿ ಬೇರೆ ದೇಶಗಳಲ್ಲಿ ಈ ಪ್ರಮಾಣ ಶೇ 46 ರಷ್ಟಿದೆ. ಇದನ್ನು ಹೆಚ್ಚಳ ಮಾಡಲು ಯೋಜನೆ ರೂಪಿಸಬೇಕು.

Recommended Video

HDK ಮಾತಿಗೆ ಕಲ್ಲಹಳ್ಳಿ ಗಡ ಗಡ!! | Oneindia Kannada

ದೆಹಲಿಯಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರಿ ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡಿದ್ದೇ ಮಹಿಳೆಯರಿಗೆ ಉಚಿತ ಸಾರಿಗೆ ಯೋಜನೆ. ಆದ ಕಾರಣ ಈ ಅಂಶಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಲಾಗಿತ್ತು

English summary
Karnataka Budget 2021: Chief Minister BS Yediyurappa Announces Discount in BMTC Bus Pass For Women In Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X