ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಬಜೆಟ್ 2021: ಬಿಬಿಎಂಪಿಯ ನಿರೀಕ್ಷೆಗಳು ಏನೇನಿವೆ?

|
Google Oneindia Kannada News

ಬೆಂಗಳೂರು, ಮಾರ್ಚ್ 08: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು 2021ರ ಕರ್ನಾಟಕ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಬಾರಿ ಉತ್ತಮ ಬಜೆಟ್ ನೀಡುತ್ತೇನೆ ಎಂದು ಯಡಿಯೂರಪ್ಪ ಹೇಳಿರುವುದರಿಂದ ರಾಜ್ಯದ ಜನತೆ ಬಜೆಟ್‌ಗಾಗಿ ಎದುರು ನೋಡುತ್ತಿದೆ. ಹಾಗೆಯೇ ಬಿಬಿಎಂಪಿಯೂ ಕೂಡ ಕೆಲವು ನಿರೀಕ್ಷೆಗಳನ್ನು ಹೊಂದಿದೆ.

ನಮ್ಮ ಮೆಟ್ರೋ ರೈಲು ಕಾಮಗಾರಿಗೆ ಮತ್ತಷ್ಟು ಅನುದಾನ ಸಿಗುವುದೇ, ಬೆಂಗಳೂರಿನ ಕಸದ ಸಮಸ್ಯೆ ನಿವಾರಣೆಯಾಗಲಿದೆಯೇ?, ಟ್ರಾಫಿಕ್‌ ಜಾಮ್‌ಗೆ ಪರಿಹಾರ ಸಿಗಲಿದೆಯೇ ಹೀಗೆ ಹತ್ತು ಹಲವಾರು ಪ್ರಶ್ನೆಗಳು ಸುತ್ತುವರೆದಿವೆ.

ಕರ್ನಾಟಕ ಬಜೆಟ್ 2021; ಬೆಳಗಾವಿ ಜಿಲ್ಲೆ ನಿರೀಕ್ಷೆಗಳುಕರ್ನಾಟಕ ಬಜೆಟ್ 2021; ಬೆಳಗಾವಿ ಜಿಲ್ಲೆ ನಿರೀಕ್ಷೆಗಳು

ಮಧ್ಯಾಹ್ನ 12 ಗಂಟೆಗೆ ಯಡಿಯೂರಪ್ಪ ಬಜೆಟ್ ಮಂಡನೆ ಮಾಡಲಿದ್ದಾರೆ. ಇಂದಿರಾ ಕ್ಯಾಂಟೀನ್‌ಗೆ ಸರ್ಕಾರದ ಅನುದಾನ, ಅಕ್ರಮ ಸಕ್ರಮ ಯೋಜನೆಗಳಿಗೆ ಚಾಲನೆ, ನಗರೋತ್ಥಾನ ಯೋಜನೆಗೆ ಸಕಾರದಿಂದ ಅನುದಾನ, ಟೆಂಡರ್ ಶ್ಯೂರ್, ಸೈಕಲ್ ಪಾತ್, ರಸ್ತೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬಹುದು ಎನ್ನುವ ನಿರೀಕ್ಷೆಯನ್ನು ಬಿಬಿಎಂಪಿ ಹೊಂದಿದೆ.

Karnataka Budget 2021 Expectations For Bengaluru And BBMP

ಏರ್‌ಪೋರ್ಟ್ ಮೆಟ್ರೋ ನಿಲ್ದಾಣಕ್ಕೆ ಅನುದಾನ, ಹೊಸದಾಗಿ ಬೆಂಗಳೂರಿಗೆ ಸೇರ್ಪಡೆಯಾಗಿರುವ ಹಳ್ಳಿಗಳಿಗೆ ಕುಡಿಯುವ ನೀರು ಯೋಜನೆಗೆ ಸರ್ಕಾರ ಅನುದಾನ ನೀಡುವುದೇ ಎಂದು ಜಲ ಮಂಡಳಿಯು ಕಾಯುತ್ತಿದೆ.

ಇನ್ನು ಕೊರೊನಾ ಕಾಲದಲ್ಲಿ ಸಂಕಷ್ಟ ಎದುರಿಸಿದ ಕಾರ್ಮಿಕರು, ಗಾರ್ಮೆಂಟ್ಸ್ ನೌಕರರು ಕೂಡ ಬಜೆಟ್‌ ನಿರೀಕ್ಷೆಯಲ್ಲಿದ್ದಾರೆ. ಇನ್ನು ಕೆರೆಗಳ ಮುನಶ್ಚೇತನ, ವಾಯು ಮಾಲಿನ್ಯ ತಡೆಗಟ್ಟಲು ಏನೇನು ಕ್ರಮ ಕೈಗೊಳ್ಳಬಹುದು ಎನ್ನುವ ಕುತೂಹಲ ಎಲ್ಲರಲ್ಲಿದೆ.

ಈ ಬಾರಿಯ ಬಜೆಟ್‌ನಲ್ಲಿ ಬೆಂಗಳೂರಿಗೆ ಹೆಚ್ಚು ಹಣ ಮೀಸಲಿಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೆಯೇ ಬಿಬಿಎಂಪಿಗೆ ಚುನಾವಣೆ ಹತ್ತಿರವಾಗುತ್ತಿದ್ದು, ಬೆಂಗಳೂರಿಗೆ ಬಜೆಟ್‌ನ ಸಿಂಹಪಾಲು ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಬಿಬಿಎಂಪಿ ಹಾಗೂ ಜನರಿದ್ದಾರೆ.

Recommended Video

ರಾಜಾಹುಲಿಯ ಬಜೆಟ್ ಗೆ ಕೌಂಟ್ ಡೌನ್ ಶುರು | Oneindia Kannada

English summary
Amid the Covid pandemic and its year-long fallout, Karnataka Chief Minister B.S. Yediyurappa is set to present the state Budget for ensuing fiscal year 2021-22 in the Assembly Today (March 08).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X