ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಬಜೆಟ್ 2020; ನಮ್ಮ ಮೆಟ್ರೋ ಯೋಜನೆ ವಿಸ್ತರಣೆ

|
Google Oneindia Kannada News

ಬೆಂಗಳೂರು, ಮಾರ್ಚ್ 05 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ 2020ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಹೊಂದಿರುವ ಯಡಿಯೂರಪ್ಪ ನಮ್ಮ ಮೆಟ್ರೋ ಯೋಜನೆಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ.

ಗುರುವಾರ ಯಡಿಯೂರಪ್ಪ 2020ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಬೆಂಗಳೂರು ನಗರದಲ್ಲಿ ಸದ್ಯ 2 ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. ಈ ವರ್ಷ 12.8 ಕಿ. ಮೀ. ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ ಎಂದು ಯಡಿಯೂರಪ್ಪ ಘೋಷಣೆ ಮಾಡಿದರು.

ಕರ್ನಾಟಕ ಬಜೆಟ್ 2020; ಬೆಂಗಳೂರಿಗೆ ಯಡಿಯೂರಪ್ಪ ಕೊಟ್ಟಿದ್ದೇನು? ಕರ್ನಾಟಕ ಬಜೆಟ್ 2020; ಬೆಂಗಳೂರಿಗೆ ಯಡಿಯೂರಪ್ಪ ಕೊಟ್ಟಿದ್ದೇನು?

ಮೆಟ್ರೋ ಪ್ರಯಾಣಿಕರಲ್ಲದ ಪಾದಾಚಾರಿಗಳಿಗಾಗಿ 24 ಮೆಟ್ರೋ ನಿಲ್ದಾಣಗಳ ಮೂಲಕ ರಸ್ತೆ ದಾಟುವ ಮೇಲ್ಸೇತುವೆ ಸೌಲಭ್ಯವನ್ನು ಒದಗಿಸಲಾಗುತ್ತದೆ ಎಂದು ಬಜೆಟ್ ಭಾಷಣದಲ್ಲಿ ಯಡಿಯೂರಪ್ಪ ಹೇಳಿದರು.

ಕರ್ನಾಟಕ ಬಜೆಟ್ 2020; ತವರು ಜಿಲ್ಲೆ ಶಿವಮೊಗ್ಗಕ್ಕೆ ಬಿಎಸ್‌ವೈ ಕೊಡುಗೆ ಕರ್ನಾಟಕ ಬಜೆಟ್ 2020; ತವರು ಜಿಲ್ಲೆ ಶಿವಮೊಗ್ಗಕ್ಕೆ ಬಿಎಸ್‌ವೈ ಕೊಡುಗೆ

Karnataka Budget 2020 : What For Namma Metro Project

* ಮೈಸೂರು ರಸ್ತೆ-ಕೆಂಗೇರಿ, ಕನಕಪುರ ರಸ್ತೆ- ಅಂಜನಾಪುರ ಟೌನ್ ಶಿಪ್ ತನಕ 12.8 ಕಿ. ಮೀ. ಉದ್ದದ ಎರಡು ಮಾರ್ಗಗಳ ಕಾಮಗಾರಿ ಪೂರ್ಣಗೊಳಿಸಿ 2020ರಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ.

ಕರ್ನಾಟಕ ಬಜೆಟ್ 2020: ಯಾವುದು ಏರಿಕೆ? ಯಾವುದು ಇಳಿಕೆ ಕರ್ನಾಟಕ ಬಜೆಟ್ 2020: ಯಾವುದು ಏರಿಕೆ? ಯಾವುದು ಇಳಿಕೆ

* ಹೆಬ್ಬಾಳ-ಜೆ. ಪಿ. ನಗರ 'ಹೊರ ವರ್ತುಲ ರಸ್ತೆ-ಪಶ್ಚಿಮ ಮೆಟ್ರೋ' ಒಟ್ಟು 44 ಕಿ. ಮೀ. ಉದ್ದದ ಮೆಟ್ರೋ ರೈಲು ಮಾರ್ಗಗಳಿಗೆ ವಿಸ್ತ್ರೃತ ಯೋಜನಾ ವರದಿಯನ್ನು ಸಿದ್ಧಪಡಿಸಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.

* ಸಮೂಹ ಸಾರಿಗೆಯನ್ನು ಉತ್ತೇಜಿಸಲು ಹಾಗೂ ಮೆಟ್ರೋ ಪ್ರಯಾಣಿಕರಿಗೆ ಸಮರ್ಪಕ ಮೆಟ್ರೋ ಫೀಡರ್ ಸಾರಿಗೆ ಸೌಲಭ್ಯವನ್ನು ಒದಗಿಸಲು ಸ್ಮಾರ್ಟ್ ಸಿಟಿ ಯೋಜನೆಯಡಿ 90 ಎಲೆಕ್ಟ್ರಿಕ್ ಬಸ್ ಖರೀದಿಸಲು ಕ್ರಮ.

English summary
Karnataka chief minister and Finance minister B. S. Yediyurappa presented budget 2020 on March 5, 2020. What for Namma metro project in Budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X