ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಬಜೆಟ್ 2020; ಬೆಂಗಳೂರಿಗೆ ಯಡಿಯೂರಪ್ಪ ಕೊಟ್ಟಿದ್ದೇನು?

|
Google Oneindia Kannada News

ಬೆಂಗಳೂರು, ಮಾರ್ಚ್ 05 : ಬೆಂಗಳೂರು ನಗರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಘೋಷಣೆ ಮಾಡಿದರು. ಬೆಂಗಳೂರು ನಗರದಲ್ಲಿ ಹೈಸ್ಪೀಡ್ ಇಂಟರ್‌ನೆಟ್ ಸೌಲಭ್ಯ ನೀಡಲಾಗುತ್ತದೆ ಎಂದರು.

Recommended Video

Karnataka Assembly Session | Budget Session | 05-03-2020

ಕರ್ನಾಟಕ ಬಜೆಟ್; ಉತ್ತರ ಕರ್ನಾಟಕಕ್ಕೆ ಯಡಿಯೂರಪ್ಪ ಕೊಡುಗೆ ಕರ್ನಾಟಕ ಬಜೆಟ್; ಉತ್ತರ ಕರ್ನಾಟಕಕ್ಕೆ ಯಡಿಯೂರಪ್ಪ ಕೊಡುಗೆ

ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಗುರುವಾರ 2020ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಬೆಂಗಳೂರು ನಗರಾಭಿವೃದ್ಧಿ ಖಾತೆಯೂ ಯಡಿಯೂರಪ್ಪ ಅವರ ಕೈಯಲ್ಲಿಯೇ ಇದೆ.

Karnataka Budget 2020 : What For Bengaluru City

ಬಜೆಟ್‌ನಲ್ಲಿ ಯಡಿಯೂರಪ್ಪ ಅವರು ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗಾಗಿ 8772 ಕೋಟಿ ರೂ.ಗಳನ್ನು ಮೀಸಲಾಗಿಡಲಾಗಿದೆ ಎಂದು ಹೇಳಿದರು. ಬೆಂಗಳೂರು ನಗರದ ಸಬ್ ಅರ್ಬನ್ ರೈಲಿಗೆ 500 ಕೋಟಿ ರೂ.ಗಳನ್ನು ಘೋಷಣೆ ಮಾಡಿದರು.

ಬಜೆಟ್‌ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು?

* ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ 600 ಕೋಟಿ ಅನುದಾನ ಘೋಷಣೆ ಮಾಡಲಾಗಿದ್ದು, 1500 ಹೊಸ ಬಸ್ ಖರೀದಿ ಮಾಡಲಾಗುತ್ತದೆ.

* ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಿಂದ ಏರ್‌ ಪೋರ್ಟ್‌ಗೆ ಔಟರ್ ರಿಂಗ್ ರೋಡ್ ನಿರ್ಮಾಣಕ್ಕೆ 14,500 ಕೋಟಿ ಅನುದಾನ ಘೋಷಣೆ ಮಾಡಲಾಗಿದೆ. ಈ ರಸ್ತೆ 56 ಕಿ. ಮೀ. ಉದ್ದದ ರಸ್ತೆಯಾಗಿದೆ.

* ಬೆಂಗಳೂರು ನಗರದ 4 ಕಡೆ ವಿದ್ಯುತ್ ಚಿತಾಗಾರ ನಿರ್ಮಾಣ ಮಾಡಲಾಗುತ್ತದೆ

* ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ 100 ಕೋಟಿ, ಶುಭ್ರ ಬೆಂಗಳೂರು ಯೋಜನೆಗೆ 900 ಕೋಟಿ ಮೀಸಲಾಗಿಡಲಾಗಿದೆ.

* ಆನಂದರಾವ್ ವೃತ್ತದ ಬಳಿ ಬಹುಮಹಡಿ ಕಟ್ಟಡದ ಮಾದರಿಯಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳು ಒಂದೇ ಕಡೆ ಇರುವಂತೆ ಬಹುಹಂತದ ಕಟ್ಟಡ ನಿರ್ಮಾಣ. 400 ಕೋಟಿ ರೂ. ಮೀಸಲು

* ಬೆಂಗಳೂರಿನಲ್ಲಿ ಚಿತ್ರನಗರಿ ಸ್ಥಾಪನೆಗೆ 500 ಕೋಟಿ. ಬೆಂಗಳೂರು ವಿಮಾನ ನಿಲ್ದಾಣದ ಬಳಿ 100 ಅಡಿ ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕಾಗಿ 66 ಕೋಟಿ ಅನುದಾನ. ಬೆಂಗಳೂರಲ್ಲಿ ಬ್ರೈಲ್ ಕಂ ಟಾಕಿಂಗ್ ಲೈಬ್ರರಿ ಸ್ಥಾಪನೆಗೆ 30 ಲಕ್ಷ ಅನುದಾನ

* ಬೆಂಗಳೂರಿನಿಂದ ಕೊಳೆತು ಹೋಗಬುದಾದ ಹೂವು, ಹಣ್ಣು, ತರಕಾರಿಗಳನ್ನು ಬೆಂಗಳೂರು ದೆಹಲಿ, ಮುಂಬೈ ಹಾಗೂ ತಿರುವನಂತಪುರಕ್ಕೆ ಸಾಗಿಸಲು ಕೇಂದ್ರ ಸರ್ಕಾರದ ಕೃಷಿ ರೈಲ್ ಯೋಜನೆಯ ಸೌಲಭ್ಯದ ಬಳಕೆ

* ಬೆಂಗಳೂರು ನಗರಕ್ಕೆ ಸೀಮಿತವಾಗಿ ಪ್ರತ್ಯೇಕ ಪೌರ ನಿಗಮ ಕಾಯ್ದೆ ರಚನೆ. ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯಡಿ 8344 ಕೋಟಿ ಅನುದಾನ.

* ಶುಭ್ರ ಬೆಂಗಳೂರು ಯೋಜನೆಯಡಿ ಘನತ್ಯಾಜ್ಯ ನಿರ್ವಹಣೆಗೆ 999 ಕೋಟಿ. ಬಿಎಂಟಿಸಿಗೆ ರಾಜ್ಯ ಸರ್ಕಾರದಿಂದ ಪ್ರತಿ ವರ್ಷಕ್ಕೆ 100 ಕೋಟಿ ಸಾಲದರೂಪದ ಸಹಾಯಧನ.

* ಬಿಎಂಟಿಸಿ ಬಸ್‌ಗಳಲ್ಲಿ ಸಂಚಾರ ನಡೆಸುವ ಗಾರ್ಮೆಂಟ್ಸ್‌ ಮಹಿಳಾ ನೌಕರರಿಗೆ ಉಚಿತ ಬಸ್ ಪಾಸು ನೀಡಲು 25 ಕೋಟಿ ಅನುದಾನ. 'ವನಿತಾ ಸಂಗಾತಿ' ಹೆಸರಿನಲ್ಲಿ ಬಸ್ ಪಾಸ್ ವಿತರಣೆ

English summary
Karnataka chief minister and Finance minister B. S. Yediyurappa presented budget 2020 on March 5, 2020. Yediyurapp also hold Bengaluru development ministry. What for Bengaluru in Budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X