• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾಳೆ ಮತ್ತೆ ಬಿಜೆಪಿ ಶಾಸಕಾಂಗ ಸಭೆ: ಮಹತ್ವದ ನಿರ್ಧಾರ?

|
   ಮತ್ತೆ ಬಿಜೆಪಿ ಶಾಸಕಾಂಗ ಸಭೆ: ಮಹತ್ವದ ನಿರ್ಧಾರ? | BJP

   ಬೆಂಗಳೂರು, ಜುಲೈ 09: ಇಂದು (ಜುಲೈ 10) ರಂದು ಶಾಸಕಾಂಗ ಸಭೆ ನಡೆಸಿರುವ ಬಿಜೆಪಿ ನಾಳೆ ಮತ್ತೆ ಶಾಸಕಾಂಗ ಸಭೆ ನಡೆಸಲು ನಿರ್ಧರಿಸಿದೆ.

   ಇಂದು ಸಭೆ ನಡೆಸಿದ ಬಿಜೆಪಿ ರಾಜ್ಯದಾದ್ಯಂತ ಕುಮಾರಸ್ವಾಮಿ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆಗೆ ತೀರ್ಮಾನ ಮಾಡಿದೆ. ಅಷ್ಟೆ ಅಲ್ಲದೆ, ಕೆಲ ಶಾಸಕರು ಸ್ಪೀಕರ್ ವಿರುದ್ಧ ಅಸಮಾಧಾನವನ್ನೂ ವ್ಯಕ್ತಪಡಿಸಿದರು ಎನ್ನಲಾಗಿದೆ.

   ಬಿಜೆಪಿ ಶಾಸಕಾಂಗ ಸಭೆಯಲ್ಲಿ ಏನಾಯ್ತು? ವಿವರ ನೀಡಿದ ಲಿಂಬಾವಳಿ

   ಆದರೆ ಯಡಿಯೂರಪ್ಪ ಅವರು ಶಾಸಕರನ್ನು ಸಮಾಧಾನದಿಂದ ಇರುವಂತೆ ತಿಳಿಸಿದ್ದು, ಶಾಸಕರಿಗೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.

   ನಾಳೆ ಸಹ ಬಿಜೆಪಿ ನಿಯೋಗವು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಆಗುವ ಬಗ್ಗೆ ನಿರ್ಣಯ ಮಾಡಿದ್ದಾರೆ, ಇಂದು ಸ್ಪೀಕರ್ ಭೇಟಿಗೆ ಪ್ರಯತ್ನಿಸಿದ್ದ ಬಿಜೆಪಿ ನಿಯೋಗವನ್ನು ರಮೇಶ್ ಕುಮಾರ್ ಭೇಟಿ ಆಗಲಿಲ್ಲ.

   ರಾಜಕೀಯ ಅನಿಶ್ಚಿತತೆ: ಪ್ರತೀದಿನ ಅಮಿತ್ ಶಾಗೆ ರಾಜ್ಯಪಾಲರಿಂದ ವರದಿ

   ನಾಳೆ ಮತ್ತೆ ಶಾಸಕಾಂಗ ಸಭೆ ಸೇರಲಿರುವ ಬಿಜೆಪಿ ಶಾಸಕರು, ಅಲ್ಲಿಂದ ರೆಸಾರ್ಟ್‌ಗೆ ಪ್ರಯಾಣಿಸುವ ಬಗ್ಗೆ ಸಹ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇಂದು ಒಬ್ಬ ಬಿಜೆಪಿ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ಪ್ರಯತ್ನಿಸಿದೆ ಎನ್ನಲಾಗಿದ್ದು, ಹಾಗಾಗಿ ಶಾಸಕರ ಸಂರಕ್ಷಣೆಗೆ ಬಿಜೆಪಿ ಯತ್ನಿಸುವ ಸಾಧ್ಯತೆ ಇದೆ.

   English summary
   Karnataka BJP will have legislative party meeting again tomorrow. They today had legislative meeting. BJP will try to meet speaker tomorrow.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X