ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈಶು-ಯಡ್ಡಿ ಬಣಕ್ಕೆ ಬಿಸಿ ಮುಟ್ಟಿಸಿದ ಮುರಳೀಧರ್ ರಾವ್!

ಮಾಧ್ಯಮಗಳ ಮುಂದೆ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತ ಈಶ್ವರಪ್ಪ ಹಾಗೂ ಯಡಿಯೂರಪ್ಪ ಅವರ ಮಧ್ಯೆ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದ ಕೆಲ ಬಾಲಂಗೊಚಿಗಳಿಗೆ ರಾಜ್ಯ ಉಸ್ತುವಾರಿ ಮುರುಳೀಧರನ್ ಶಾಕ್ ನೀಡಿದ್ದಾರೆ.

|
Google Oneindia Kannada News

ಬೆಂಗಳೂರು, ಏಪ್ರಿಲ್ 30 : ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಅತೃಪ್ತ ನಾಯಕರ ಪರ ವಿರೋಧ ಹೇಳಿಕೆಗಳಿಗೆ ಹೈಕಮಾಂಡ್ ಮುಲಾಮು ಹಚ್ಚುವ ಕೆಲಸಕ್ಕೆ ಮುಂದಾಗಿದೆ.

ಈಶ್ವರ ಮತ್ತು ಯಡಿಯೂರಪ್ಪ ಅವರ ಪರ ವಿರೋಧಗಳ ಬಗ್ಗೆ ಮಾಧ್ಯಮಗಳ ಮುಂದೆ ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪ ನಡೆಸುತ್ತಿದ್ದ ಕೆಲ ಬಿಜೆಪಿ ನಾಯಕರಿಗೆ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಬಿಸಿ ಮುಟ್ಟಿಸಿದ್ದಾರೆ. [ಯಡಿಯೂರಪ್ಪ ಅವರು ಹೈಕಮಾಂಡ್ ಮಾತು ಕೇಳ್ತಿಲ್ಲ: ಈಶ್ವರಪ್ಪ]

Karnataka BJP in-charge Muralidhar Rao relieves four party leaders

ಈಶ್ವರಪ್ಪ ಟೀಂನಿಂದ ಭಾನುಪ್ರಕಾಶ್ ಮತ್ತು ನಿರ್ಮಲ್ ಕುಮಾರ್ ಸುರಾನಾ ಅವರು ಹೊಂದಿದ್ದ ಉಪಾಧ್ಯಕ್ಷ ಸ್ಥಾನವನ್ನ ಕಿತ್ಕೊಂಡು ಇಬ್ಬರಿಗೂ ಕೊಕ್ ಕೊಟ್ಟಿದ್ದಾರೆ.

ಇತ್ತ ಬಿ.ಎಸ್ ಯಡಿಯೂರಪ್ಪ ಬಣದ ಎಂ ಪಿ ರೇಣುಕಾಚಾರ್ಯಗೆ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನದಿಂದ ಮುಕ್ತಿಗೊಳಸಲಾಗಿದೆ.

ಮತ್ತೊಂದೆಡೆ ಗೋ ಮಧುಸೂಧನ್ ಅವರಿಗೆ ನೀಡಲಾಗಿದ್ದ ರಾಜ್ಯ ವಕ್ತಾರ ಹುದ್ದೆಯನ್ನು ಹೈಕಮಾಂಡ್ ಕಸಿದುಕೊಂಡು ಪಕ್ಷದ ಆಂತರಿಕ ವಿಚಾರಗಳನ್ನು ಮಾಧ್ಯಮದೆದರು ಚರ್ಚಿಸಬಾರದು ಎಂದು ಖಡಕ್ ಸೂಚನೆ ನೀಡಿದ್ದಾರೆ. ಹಾಗೂ ಪಕ್ಷದ ನಿಯಮಗಳನ್ನು ಪಾಲಿಸುವಂತೆ ಹೇಳಿದ್ದಾರೆ.

English summary
Amid ongoing tussle between Bharatiya Janata Party (BJP) state president BS Yeddyurappa and KS Eshwarappa, Karnataka BJP in-charge Muralidhar Rao held a meeting with the party volunteers on Saturday after which four BJP leaders were relieved from their responsibilities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X