ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಅಹೋರಾತ್ರಿ ಧರಣಿ: ರಸ್ತೆ ಬದಿ ನಿದ್ದೆಗೆ ಜಾರಿದ ಮುಖಂಡರು

|
Google Oneindia Kannada News

ಬೆಂಗಳೂರು, ಜೂನ್ 14: ಜಿಂದಾಲ್ ಸಂಸ್ಥೆಗೆ ಭೂಮಿ ಶುದ್ಧಕ್ರಯ ಮಾಡಿ ಕೊಡುತ್ತಿರುವ ಮೈತ್ರಿ ಸರ್ಕಾರದ ನಿರ್ಧಾರ ಖಂಡಿಸಿ ಬಿಜೆಪಿ ಇಂದು ಅಹೋರಾತ್ರಿ ಧರಣಿ ಆರಂಭಿಸಿದೆ.

ಆನಂದ್ ರಾವ್ ವೃತ್ತದ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಬಹುತೇಕ ಶಾಸಕರು, ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ರಸ್ತೆ ಬದಿಯೇ ನಿದ್ದೆ ಹೋಗಿದ್ದಾರೆ.

ಯಡಿಯೂರಪ್ಪ, ಆರ್.ಅಶೋಕ್, ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ, ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕಾರ್ಕಳ ಸುನಿಲ್ ಇನ್ನೂ ಹಲವು ಮುಖಂಡರು ಆನಂದ್ ರಾವ್‌ ನಲ್ಲಿನ ಮಹಾತ್ಮಾ ಗಾಂಧಿ ಪ್ರತಿಮೆಯ ಬಳಿಯೇ ನಿದ್ದೆ ಮಾಡಿದರು.

 Karnataka BJP doing day and night protest against government

ಸಚಿವ ಡಿ.ಕೆ.ಶಿವಕುಮಾರ್ ಅವರು ಜಿಂದಾಲ್‌ ಸಂಸ್ಥೆಗೆ ಭೂಮಿ ನೀಡುತ್ತಿರುವ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ರೈತರು ಯಾರೂ ತೆರಿಗೆ ಕಟ್ಟೊಲ್ಲ: ಜಿಂದಾಲ್ ಪರ ಡಿಕೆಶಿ ಬ್ಯಾಟಿಂಗ್ರೈತರು ಯಾರೂ ತೆರಿಗೆ ಕಟ್ಟೊಲ್ಲ: ಜಿಂದಾಲ್ ಪರ ಡಿಕೆಶಿ ಬ್ಯಾಟಿಂಗ್

ಜಿಂದಾಲ್‌ಗೆ ಭೂಮಿ ನೀಡುತ್ತಿರುವ ವಿಷಯದ ಬಗ್ಗೆ ಪುನರ್‌ ಪರಿಶೀಲನೆ ನಡೆಸಲು ಸರ್ಕಾರವು ಉಪಸಮಿತಿಯನ್ನು ರಚಿಸಿದೆ. ಉಪಸಮಿತಿಯ ವರದಿಯ ಆಧಾರದ ಮೇಲೆ ಸರ್ಕಾರವು ನಿರ್ಧಾರ ಕೈಗೊಳ್ಳಲಿದೆ.

 Karnataka BJP doing day and night protest against government
English summary
Karnataka BJP doing day and night protest against government from today opposing government decision of giving land to Jindal company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X