ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿರಾಣಿ ಕೊಟ್ಟ ದುಬಾರಿ ಕಾರು ವಾಪಸ್ ಮಾಡಿದ ಬಿಎಸ್ ವೈ

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 17: ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ನೀಡಿದ್ದ ದುಬಾರಿ ಕಾರನ್ನು ವಾಪಸ್ ಮಾಡಿದ್ದಾರೆ. ಕಾರಿನ ಬಗ್ಗೆ ವಿವಾದ ಉಂಟಾಗಿರುವ ಹಿನ್ನಲೆಯಲ್ಲಿ ಅಧಿಕೃತ ಪತ್ರದ ಮೂಲಕ ಯಡಿಯೂರಪ್ಪ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

'ನಾನು ರಾಜ್ಯದಾದ್ಯಂತ ಬರ ಪ್ರವಾಸಕ್ಕೆ ರೈಲಿನಲ್ಲಿ ಪ್ರಯಾಣ ಮಾಡುತ್ತೇನೆ. ಮುರುಗೇಶ್ ನಿರಾಣಿ ಕೊಟ್ಟ ಕಾರನ್ನು ಬಳಸುವುದಿಲ್ಲ. ಹತ್ತಿರದ ಜಿಲ್ಲೆಗಳಿಗೆ ಪ್ರವಾಸ ಮಾಡುವಾಗ ಮಾತ್ರ ಕಾರು ಬಳಸುತ್ತೇನೆ. ನನಗೆ ಮೊದಲಿನಿಂದಲೂ ರೈಲಿನಲ್ಲೇ ಪ್ರಯಾಣ ಮಾಡಿ ಅಭ್ಯಾಸ. ರೈಲಿನಲ್ಲಿ ಪ್ರಯಾಣ ಮಾಡೋದು ಆರೋಗ್ಯಕ್ಕೂ ಒಳ್ಳೆಯದು' ಎಂದು ಹೇಳಿದರು.[ಯಡಿಯೂರಪ್ಪ ಮುಂದಿರುವ 6 ಪ್ರಮುಖ ಸವಾಲುಗಳು]

Karnataka BJP chief Yeddyurappa returns Gifted SUV after backlash

ಬಿ.ಎಸ್.ಯಡಿಯೂರಪ್ಪ ಅವರು ಏಪ್ರಿಲ್ 14ರಂದು ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮುಂದೆ ಅವರು ರಾಜ್ಯ ಪ್ರವಾಸ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಅವರ ಪ್ರಯಾಣಕ್ಕೆ ಅನುಕೂಲವಾಗಲಿ ಎಂದು ನಿರಾಣಿ ಅವರು ಈ ಕಾರನ್ನು ನೀಡಿದ್ದಾರೆ. [ಯಡಿಯೂರಪ್ಪನವರನ್ನು ವಿವಾದದ ಸುಳಿಗೆ ಸಿಲುಕಿಸಿರುವ ಕಾರು!]
Karnataka BJP chief Yeddyurappa returns Gifted SUV after backlash

ಕೆಎ 03, ಎಂವೈ 4545 ನೋಂದಣಿ ಸಂಖ್ಯೆಯ ಕಾರು ಈಗ ನಡೆಯುತ್ತಿರುವ ಚರ್ಚೆಯ ಕೇಂದ್ರಬಿಂದು. 73 ವರ್ಷದ ಯಡಿಯೂರಪ್ಪ ಅವರು ರಾಜ್ಯ ಪ್ರವಾಸಕ್ಕಾಗಿ ಸುಮಾರು 1 ಕೋಟಿ ಬೆಲೆಯ ಈ ಕಾರು ಖರೀದಿ ಮಾಡಿದ್ದಾರೆ ಎಂದು ಶುಕ್ರವಾರ ಸುದ್ದಿ ಹಬ್ಬಿತ್ತು. ಆ ನಂತರ ಅದರ ಬಗ್ಗೆ ಚರ್ಚೆ ಆರಂಭವಾಗಿತ್ತು. [ಯಡಿಯೂರಪ್ಪ : ಶಿಕಾರಿಪುರ ಜನಸಂಘದಿಂದ ಬಿಜೆಪಿ ಗದ್ದುಗೆ ತನಕ]

ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಬ್ಲೋ ವಾಚ್ ವಿವಾದಕ್ಕೆ ಕಾರಣವಾಗಿತ್ತು. ವಿಪಕ್ಷಗಳ ಒತ್ತಾಯಕ್ಕೆ ಮಣಿಸಿದ್ದ ಸಿದ್ದರಾಮಯ್ಯ ಅವರು ವಾಚ್ ಅನ್ನು ಸರ್ಕಾರದ ಆಸ್ತಿ ಎಂದು ಘೋಷಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.['ಸಿಎಂ ಆಗುವುದಕ್ಕಿಂತ 150 ಸ್ಥಾನ ಗೆಲ್ಲುವುದು ನನ್ನ ಗುರಿ': ಬಿಎಸ್ವೈ]

Karnataka BJP chief Yeddyurappa returns Gifted SUV after backlash

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಏ.27ರಿಂದ 5 ದಿನಗಳ ಕಾಲ ರಾಜ್ಯದ ಬರ ಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಏ.27ರಂದು ಬೀದರ್ ಜಿಲ್ಲೆಯಿಂದ ಪ್ರವಾಸ ಆರಂಭಿಸಲಿದ್ದಾರೆ ಎಂದು ಬಿಜೆಪಿ ಹೇಳಿದೆ.

English summary
Karnataka BJP chief B S Yeddyurappa has returned the Rs.1crore SUV (Toyota Land Cruiser) to its rightful owner former industries minister Murugesh Nirani after the row.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X