• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರ್ನಾಟಕ ಬಂದ್; ಕತ್ತೆ ಏರಿ ಬಂದ ವಾಟಾಳ್ ಪೊಲೀಸರ ವಶಕ್ಕೆ!

|

ಬೆಂಗಳೂರು, ಸೆಪ್ಟೆಂಬರ್ 28 : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ, ದಲಿತ, ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಕರ್ನಾಟಕ ಬಂದ್‌ ನಡೆಯುತ್ತಿದೆ. ಬಂದ್ ಎಂದಾಕ್ಷಣ ನೆನಪಾಗುವುದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್.

ಸೋಮವಾರ ಕರ್ನಾಟಕ ಬಂದ್ ಕರೆ ನೀಡಿದ್ದು ವಾಟಾಳ್ ನಾಗರಾಜ್ ಅಲ್ಲ. ಆದರೆ, ಬಂದ್‌ಗೆ ಅವರು ಬೆಂಬಲ ನೀಡಿದ್ದರು. ಎಂದಿನಂತೆ ತಮ್ಮ ವಿಭಿನ್ನ ಶೈಲಿಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮೆಜೆಸ್ಟಿಕ್‌ಗೆ ಆಗಮಿಸಿದ್ದರು.

ಕರ್ನಾಟಕ ಬಂದ್; ಯಡಿಯೂರಪ್ಪ ಭಾಷಣದ 5 ಪ್ರಮುಖ ಅಂಶಗಳು

ಮೆಜೆಸ್ಟಿಕ್‌ನ ಬಿಎಂಟಿಸಿ, ಕೆಎಸ್ಆರ್‌ಟಿಸಿ ನಿಲ್ದಾಣದ ನಡುವಿನ ರಸ್ತೆ ವಾಟಾಳ್ ನಾಗರಾಜ್ ಪ್ರತಿಭಟನೆಯ ಪ್ರಮುಖ ಸ್ಥಳ. ಇಂದು ಸಹ ವಾಟಾಳ್ ನಾಗರಾಜ್ ಕತ್ತೆಯ ಮೇಲೆ ಪ್ರತಿಭಟನೆ ನಡೆಸಲು ಆಗಮಿಸಿದರು. ಕನ್ನಡ ಒಕ್ಕೂಟದ ಹಲವು ನಾಯಕರು ಅವರ ಜೊತೆ ಇದ್ದರು.

Karnataka Bandh Live Updates: ಕರ್ನಾಟಕ ಬಂದ್: ಕೃಷಿ ವಿರೋಧಿ ನೀತಿಗೆ ರೈತರ ಆಕ್ರೋಶ

ವಾಟಾಳ್ ನಾಗರಾಜ್ ಪ್ರತಿಭಟನೆಯಿಂದಾಗಿ ಸ್ಥಳದಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಆಗ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಬಿಎಂಟಿಸಿ ಬಸ್‌ ಮೂಲಕ ಸ್ಥಳದಿಂದ ಕರೆದುಕೊಂಡು ಹೋಗಲಾಯಿತು.

ರೈತರ ಪ್ರತಿಭಟನೆ; ಸಿಎಂ ಯಡಿಯೂರಪ್ಪ ಟ್ವೀಟ್

ಕತ್ತೆಯ ಮೇಲೆ ವಾಟಾಳ್ ಸವಾರಿ

ಕತ್ತೆಯ ಮೇಲೆ ವಾಟಾಳ್ ಸವಾರಿ

ಸೋಮವಾರ ವಾಟಾಳ್ ನಾಗರಾಜ್ ಅವರು ಬೆಂಗಳೂರಿನ ಮೆಜೆಸ್ಟಿಕ್‌ಗೆ ಕತ್ತೆಯ ಮೇಲೆ ಆಗಮಿಸಿದರು. ಸರ್ಕಾರದ ನೀತಿಗಳನ್ನು ಖಂಡಿಸಿದ ಅವರು, ಸರ್ಕಾರದ ವಿರುದ್ದ ಘೋಷಣೆ ಕೂಗಿದರು.

ಹಲವು ಮುಖಂಡರ ಉಪಸ್ಥಿತಿ

ಹಲವು ಮುಖಂಡರ ಉಪಸ್ಥಿತಿ

ವಾಟಾಳ್ ನಾಗರಾಜ್ ಜೊತೆ ಪ್ರತಿಭಟನೆಯಲ್ಲಿ ಕನ್ನಡ ಒಕ್ಕೂಟದ ಮುಖಂಡರುಗಳಾದ ಸಾ. ರಾ. ಗೋವಿಂದು ಕೆ. ಆರ್. ಕುಮಾರ್, ಗಿರೀಶ್ ಗೌಡ ಸೇರಿದಂತೆ ಹಲವರು ಜೊತೆಗಿದ್ದರು. ಪ್ರತಿಭಟನಾ ನಿರತ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು.

ರೈತ ವಿರೋಧಿಯಾಗಿದೆ

ರೈತ ವಿರೋಧಿಯಾಗಿದೆ

ಭೂಸುಧಾರಣೆ, ಎಪಿಎಂಸಿ ಕಾಯ್ದೆ ರೈತ ವಿರೋಧಿಯಾಗಿದೆ ಎಂದು ಆರೋಪಿಸಿದ ವಾಟಾಳ್ ನಾಗರಾಜ್ ಸರ್ಕಾರದ ವಿರುದ್ಧ ಕತ್ತೆಯ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ಪೊಲೀಸರು ಅವರನ್ನು ಬಂಧಿಸಿ ಬಿಎಂಟಿಸಿ ಬಸ್‌ನಲ್ಲಿ ಕರೆದುಕೊಂಡು ಹೋದರು.

ವಾಟಾಳ್ ನಾಗರಾಜ್ ವಶಕ್ಕೆ

ವಾಟಾಳ್ ನಾಗರಾಜ್ ವಶಕ್ಕೆ

ವಾಟಾಳ್ ನಾಗರಾಜ್ ಮತ್ತು ಅವರ ಬೆಂಬಲಿಗರ ಪ್ರತಿಭಟನೆಯಿಂದಾಗಿ ಸ್ಥಳದಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಆಗ ಪೊಲೀಸರು ಅವರನ್ನು ವಶಕ್ಕೆ ಪಡೆದರು.

English summary
Karnataka bandh by farmer and other organizations protesting against farmer and labor against move by the government. Kannada Chaluvali Vatal Paksha leader Vatal Nagaraj detained by police at Majestic bus stand Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X