ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕದ್ದು ಮುಚ್ಚಿ ಕೆಲ್ಸ, ಟೆಕ್ಕಿಗಳಿಗೆ ಬಿಸಿ ಮುಟ್ಟಿಸಿದ ಕನ್ನಡಿಗರು

By Mahesh
|
Google Oneindia Kannada News

ಬೆಂಗಳೂರು, ಸೆ. 09: ಬೆಂಗಳೂರಿನ ಪ್ರಮುಖ ಐಟಿ ಬಿಟಿ ಕಂಪನಿಗಳು ಶುಕ್ರವಾರ(ಸೆಪ್ಟೆಂಬರ್ 09) ರಜೆ ಘೋಷಿಸಿವೆ. ಆದರೆ, ಕೆಲವು ಐಟಿ ಕಂಪನಿಯ ಉದ್ಯೋಗಿಗಳು ಕಚೇರಿಗೆ ಹಾಜರಾಗಿ ಕದ್ದು ಮುಚ್ಚಿ ಕೆಲ್ಸ ಮಾಡುತ್ತಿರುವುದು ಕಂಡು ಬಂದಿದೆ. ವಿಷಯ ತಿಳಿದ ಕನ್ನಡ ಪರ ಹೋರಾಟಗಾರರು, ಪ್ರತಿಭಟನೆ ನಡೆಸಿ ಕನ್ನಡ ವಿರೋಧಿ ಟೆಕ್ಕಿಗಳನ್ನು ಮನೆಗೆ ಕಳಿಸಿದ್ದಾರೆ.

ಶನಿವಾರ ಕಡ್ಡಾಯ ಹಾಜರಾತಿ ತಪ್ಪಿಸಿಕೊಳ್ಳಲು ಯತ್ನಿಸಿದ ಕೆಲವು ಸಾಫ್ಟ್ ವೇರ್ ಉದ್ಯೋಗಿಗಳು ಶುಕ್ರವಾರದಂದು ಬಂದ್ ಆಚರಣೆಗೆ ಬೆಂಬಲ ನೀಡದೆ ಕೆಲಸಕ್ಕೆ ಹಾಜರಾಗಿದ್ದರು. ಅದರಲೂ ರಜೆ ಘೋಷಿಸಿ ನಂತರ ಕೆಲ್ಸ ಮಾಡಲು ಅವಕಾಶ ನೀಡಿದ ಮಾನ್ಯತಾ ಟೆಕ್ ಪಾರ್ಕ್ ವಿರುದ್ಧ ಕರವೇ ಕಾರ್ಯಕರ್ತರು(ಪ್ರವೀಣ್ ಶೆಟ್ಟಿ ಬಳಗ) ತೀವ್ರವಾಗಿ ಪ್ರತಿಭಟನೆ ನಡೆಸಿದರು. [ನೀರಿಗಾಗಿ ಬಂದ್ ಟೆಕ್ಕಿಗಳಿಗೆ ರಜೆಯ ಚಿಂತೆ]

Karnataka Bandh : Kannada activists Gherao Tech Park Employees

ಮಾನ್ಯತಾ ಟೆಕ್ ಪಾರ್ಕ್ ಮುಂಭಾಗ ಧಿಕ್ಕಾರ ಕೂಗಿ, ಒಳಗಿರುವ ಟೆಕ್ಕಿಗಳು ಹೊರಕ್ಕೆ ಬರುವಂತೆ ಮಾಡಿದರು. ಬಂದ್ ಗೆ ಬೆಂಬಲ ನೀಡದೆ, ಇಲ್ಲಿನ ನೆಲ, ಜಲ, ಭಾಷೆಗೆ ಗೌರವ ತೋರದಿದ್ದರೆ ನಾಳೆಯಿಂದ ಮಾನ್ಯತಾ ಟೆಕ್ ಪಾರ್ಕ್ ಗೆ ನೀರು ಬಿಡಬೇಡಿ ಅಂತಾ ಕರವೇ ಪ್ರವೀಣ್ ಶೆಟ್ಟಿ ಬಣ ಅಭಿಯಾನ ಆರಂಭಿಸುವುದಾಗಿ ಎಚ್ಚರಿಸಲಾಯಿತು.[LIVE: ಕೆಆರ್ ಎಸ್ ಗೆ ನುಗ್ಗಲು ಯತ್ನಿಸಿದವರ ಮೇಲೆ ಲಾಠಿಚಾರ್ಜ್]

ಎಲೆಕ್ಟ್ರಾನಿಕ್ ಸಿಟಿ, ವೈಟ್ ಫೀಲ್ಡ್, ಮಾನ್ಯತಾ ಟೆಕ್ ಪಾರ್ಕ್, ಬೃಂದಾವನ ಟೆಕ್ ಪಾರ್ಕ್, ಬಾಗ್ ಮನೆ ಟೆಕ್ ಪಾರ್ಕ್ ಗಳಲ್ಲಿರುವ ಕಂಪನಿಗಳು ರಜೆ ನೀಡಲು ಮುಂದಾಗಿರುವುದಾಗಿ ಅಲ್ಲಿನ ಮುಖ್ಯಸ್ಥರು ಘೋಷಿಸಿದ್ದರು. ಆದರೆ, ಮಾನ್ಯತಾ ಟೆಕ್ ಪಾರ್ಕ್, ಎಲೆಕ್ಟ್ರಾನಿಕ್ ಸಿಟಿಯ ಕೆಲ ಕಂಪನಿಗಳು ಎಂದಿನಂತೆ ಉದ್ಯೋಗ ನಿರತರಾಗಿದ್ದು ಕರವೇ ಆಕ್ರೋಶಕ್ಕೆ ಕಾರಣವಾಗಿದೆ.

ಕೋರಮಂಗಲದಲ್ಲಿ ಕೆಲಸ ನಿರತ ಉದ್ಯೋಗಿಗಳನ್ನು ಹೊರ ಕಳಿಸುವಂತೆ ಮಾಡಿದ ಕಿರಿಕ್ ಕೀರ್ತಿ ಹಾಗೂ ಸಂಗಡಿಗರು

ಇನ್ನೊಂದೆಡೆ ಐಟಿ ಬಿಟಿ ಕಂಪನಿಗಳಲ್ಲಿರುವ ಕನ್ನಡಿಗರು ಬಂದ್ ದಿನ ಕನ್ನಡ ಪರ ಘೋಷಣೆ, ಟ್ರಾಲ್, ಮೀಮ್ಸ್, ಟ್ವೀಟ್ಸ್, ಸಂದೇಶಗಳನ್ನು ಹರಡಿದ್ದಾರೆ. ಅಷ್ಟೇ ಅಲ್ಲದೆ, ಟೌನ್ ಹಾಲ್ ಹಾಗೂ ಫ್ರೀಡಂ ಪಾರ್ಕ್ ಬಳಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲಿಂದಲೇ ನೇರ ವಿಡಿಯೋ ವರದಿ ನೀಡಿದ್ದಾರೆ.

English summary
Karnataka Bandh: Members of Karnataka Rakshanana Vedike Gherao Manyata Tech Park near Hebbal. Employees of the company were working during the bandh day. Pro Kannada activist Kirik Kirthi along with others evacuated the employees from the Kormangala area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X