ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟೆಕ್ಕಿಗಳ ವೀಕೆಂಡ್ ರಜಾ ಹಾಳು ಮಾಡಿದ ಕರ್ನಾಟಕ ಬಂದ್!

By Mahesh
|
Google Oneindia Kannada News

ಬೆಂಗಳೂರು, ಸೆ. 08: ಶುಕ್ರವಾರ ಕಂಪ್ಲೀಟ್ ಕರ್ನಾಟಕ ಬಂದ್ ಅಂತೆ! ಸಾಲು ಸಾಲು ರಜೆ ಇದೆ ಊರಿಗೆ ಹೋಗೋಣ, ಎಲ್ಲಾದ್ರೂ ಸುತ್ತಿ ಬರೋಣ ಎಂದು ಪ್ಲ್ಯಾನ್ ಮಾಡಿದ್ದ ಟೆಕ್ಕಿಗಳಿಗೆ ನಿರಾಶೆಯಾಗಿದೆ.

ಬೆಂಗಳೂರಿನ ಪ್ರಮುಖ ಐಟಿ ಬಿಟಿ ಕಂಪನಿಗಳು ಶುಕ್ರವಾರ(ಸೆಪ್ಟೆಂಬರ್ 09) ರಜೆ ಘೋಷಿಸಿದ್ದರೂ ಶನಿವಾರ ಕಡ್ಡಾಯ ಹಾಜರಾತಿ ಬಯಸಿವೆ. ಐಟಿ ಬಿಟಿ ಕಂಪನಿಗಳಲ್ಲಿರುವ ಕನ್ನಡಿಗರು ಬಂದ್ ದಿನ ಕನ್ನಡ ಪರ ಘೋಷಣೆ, ಟ್ರಾಲ್, ಮೀಮ್ಸ್, ಟ್ವೀಟ್ಸ್, ಸಂದೇಶಗಳನ್ನು ಹರಡಲು ಸಿದ್ಧರಾಗಿದ್ದಾರೆ.

Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ

ಈ ನಡುವೆ ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳು, ಖಾಸಗಿ ಕಂಪನಿಗಳಿಗೆ ರಜೆ ಕೊಡುವುದೇ ಸೂಕ್ತ ಅಂತಾ ಪೊಲೀಸ್ ಇಲಾಖೆ ಮಾಹಿತಿ ರವಾನಿಸಿದೆ. ಹೀಗಾಗಿ ಸಾಫ್ಟ್ ವೇರ್ ಉದ್ಯೋಗಿಗಳ ಸಣ್ಣಪುಟ್ಟ ಮಕ್ಕಳಿಗೂ ರಜೆ ಸಿಗಲಿದೆ. ಸಾಫ್ಟ್ ವೇರ್ ಕಂಪನಿ ಸೇರಿದಂತೆ ಖಾಸಗಿ ಕಂಪನಿಗಳಿಗೆ ರಜೆ ಘೋಷಿಸದೆ ಬೇರೆ ಮಾರ್ಗವಿಲ್ಲ. [ಬಂದ್, ಬಕ್ರೀದ್, ಗಣೇಶ ಚತುರ್ಥಿ...ಪೊಲೀಸರಿಗೆ ಬಿಡುವಿಲ್ಲ]

ಟೆಕ್ ಪಾರ್ಕ್ ಬಂದ್

ಟೆಕ್ ಪಾರ್ಕ್ ಬಂದ್

ಮಾನ್ಯತಾ ಟೆಕ್ ಪಾರ್ಕ್ ನ ಬಹುತೇಕ ಕಂಪನಿಗಳು ಈಗಾಗಲೇ ಶುಕ್ರವಾರ ಘೋಷಿತ ರಜೆ ನೀಡಿದೆ. ಕೆಲವರು work from home ಆಯ್ಕೆ ಮಾಡಿಕೊಂಡರೆ, ಮತ್ತೆ ಕೆಲವರು ಶನಿವಾರದಂದು ಕೆಲಸಕ್ಕೆ ಬರಲು ಇಚ್ಛಿಸಿದ್ದಾರೆ. [ಕರ್ನಾಟಕ ಬಂದ್‌ಗೆ 1,200 ಸಂಘಟನೆಗಳ ಬೆಂಬಲ]

ಯುಎಸ್ ಶಿಫ್ಟ್ ನಲ್ಲಿ ಕೆಲಸ ಮಾಡುವವರ ಗಮನಕ್ಕೆ

ಯುಎಸ್ ಶಿಫ್ಟ್ ನಲ್ಲಿ ಕೆಲಸ ಮಾಡುವವರ ಗಮನಕ್ಕೆ

ಅದರಲ್ಲೂ ಯುಎಸ್ ಶಿಫ್ಟ್ ನಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಇದು ಅನಿವಾರ್ಯವಾಗಿದೆ. ಯುಎಸ್ ನಲ್ಲಿ ಸೋಮವಾರ ರಜೆ ಇದೆ. ಹೀಗಾಗಿ ಶನಿವಾರ ಹಾಗೂ ಮಂಗಳವಾರ ಕೆಲಸ ನಿರ್ವಹಿಸಬೇಕಿದೆ. ಕರ್ನಾಟಕದಲ್ಲಿ ಮಂಗಳವಾರದಂದು ಬಕ್ರೀದ್ ರಜೆ ಬೇರೆ ಇದೆ. [ಕಾವೇರಿ ಕೇಸ್ : ನಾರಿಮನ್ ಆಯ್ಕೆ ಮಾಡಿದ್ದು ಯಾರು?]

 1991ರಲ್ಲಿ ಬೆಂಗಳೂರಿನಲ್ಲಿ ಉಂಟಾಗಿದ್ದ ಪರಿಸ್ಥಿತಿ

1991ರಲ್ಲಿ ಬೆಂಗಳೂರಿನಲ್ಲಿ ಉಂಟಾಗಿದ್ದ ಪರಿಸ್ಥಿತಿ

ಕಾವೇರಿ ವಿಚಾರದಿಂದ 1991ರಲ್ಲಿ ಬೆಂಗಳೂರಿನಲ್ಲಿ ಉಂಟಾಗಿದ್ದ ಪರಿಸ್ಥಿತಿ ಮರುಕಳಿಸದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಮುಖ ಖಾಸಗಿ ಕಂಪನಿಗಳಿಗೆ ರಜೆ ನೀಡುವುದು ಉತ್ತಮ ಎಂದು ಸೂಚಿಸಿದ್ದಾರೆ. ಹೀಗಾಗಿ ಹೆಚ್ಚಿನ ಕಂಪನಿಗಳು ಸುರಕ್ಷತಾ ದೃಷ್ಟಿಯಿಂದ ರಜೆ ಘೋಷಿಸಿ, ಬಂದ್ ಗೆ ಬೆಂಬಲ ನೀಡಿವೆ.

ನೋ ಟ್ರಾಫಿಕ್ ಶುಕ್ರವಾರ

ನೋ ಟ್ರಾಫಿಕ್ ಶುಕ್ರವಾರ

ಶುಕ್ರವಾರದಂದು ಎಲೆಕ್ಟ್ರಾನಿಕ್ ಸಿಟಿ, ವೈಟ್ ಫೀಲ್ಡ್, ಮಾನ್ಯತಾ ಟೆಕ್ ಪಾರ್ಕ್, ಬೃಂದಾವನ ಟೆಕ್ ಪಾರ್ಕ್, ಬಾಗ್ ಮನೆ ಟೆಕ್ ಪಾರ್ಕ್ ಗಳಲ್ಲಿರುವ ಕಂಪನಿಗಳು ರಜೆ ನೀಡಲು ಮುಂದಾಗಿರುವುದರಿಂದ ಈ ಭಾಗಗಳಿಗೆ ಖಾಸಗಿ ವಾಹನಗಳಲ್ಲಿ ಆರಾಮವಾಗಿ ತೆರಳಬಹುದು. ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಬಹುದು.

ಸಾರಿಗೆ ಸಂಪರ್ಕ ವ್ಯವಸ್ಥೆ ಬಂದ್

ಸಾರಿಗೆ ಸಂಪರ್ಕ ವ್ಯವಸ್ಥೆ ಬಂದ್

ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡ ಒಕ್ಕೂಟ ಸೆಪ್ಟೆಂಬರ್ 9ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಬೆಂಗಳೂರು ಮತ್ತು ಮೈಸೂರು ಭಾಗಕ್ಕೆ ಬಂದ್ ಬಿಸಿ ಜೋರಾಗಿ ತಟ್ಟಲಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ. ಈ ಭಾಗದಲ್ಲಿ ಸಾರಿಗೆ ಸಂಪರ್ಕ ವ್ಯವಸ್ಥೆ ಸಂಪೂರ್ಣ ಬಂದ್ ಆಗಲಿದೆ

English summary
Cauvey Dispute: Pro-Kannada groups have called for a Karnataka bandh on September 9. Bengaluru likely to come to stand-still this Friday. This time many IT BT companies have declared leave and asked to work on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X