ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸಕರಿಗೆ ಸ್ಪೀಕರ್‌ ಕಾಗೇರಿ ಎಚ್ಚರಿಕೆ: ವಿಪಕ್ಷಗಳಿಂದ ತೀವ್ರ ಆಕ್ರೋಶ

|
Google Oneindia Kannada News

ಬೆಂಗಳೂರು, ಜನವರಿ 30: ಶಾಸಕರಿಗೆ ಸ್ಪೀಕರ್ ಕಾಗೇರಿ ಎಚ್ಚರಿಕೆ ನೀಡುವ ರೀತಿಯ ಆದೇಶವನ್ನು ಹೊರಡಿಸಿದ್ದು, ಇದು ಭಾರಿ ವಿವಾದ ಸೃಷ್ಟಿಸಿದೆ.

ಜಂಟಿ ಅಧಿವೇಶನದ ವೇಳೆ ರಾಜ್ಯಪಾಲರ ಭಾಷಣದ ವೇಳೆ ಯಾವ ಶಾಸಕರೂ ಗದ್ದಲ ಎಬ್ಬಿಸುವಂತಿಲ್ಲ, ಕ್ರಿಯಾಲೋಪ ಎತ್ತಿ ಭಾಷಣಕ್ಕೆ ಅಡ್ಡಿಪಡಿಸುವಂತಿಲ್ಲ, ಹಾಗೊಂದು ವೇಳೆ ಮಾಡಿದರೆ ಆ ಶಾಸಕರನ್ನು ಅಮಾನತ್ತು ಮಾಡಲಾಗುತ್ತದೆ ಎಂದು ಸ್ಪೀಕರ್ ಕಾಗೇರಿ ಆದೇಶ ಹೊರಡಿಸಿದ್ದಾರೆ.

ಹೊಸ ಸ್ಪೀಕರ್‌ಗೆ ಸದನದಲ್ಲಿ ಪಾಠ ಮಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್‌ಹೊಸ ಸ್ಪೀಕರ್‌ಗೆ ಸದನದಲ್ಲಿ ಪಾಠ ಮಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್‌

ಕೇರಳದಲ್ಲಿ ಈಗಾಗಲೇ ಅಧಿವೇಶನ ಸಂದರ್ಭದಲ್ಲಿ ರಾಜ್ಯಪಾಲರ ಭಾಷಣದ ವೇಳೆ ವಿಪಕ್ಷಗಳು ಫಲಕಗಳನ್ನು ಪ್ರದರ್ಶಿಸಿ ಅಡ್ಡಿಪಡಿಸಿವೆ. ಇದೇ ಘಟನೆ ರಾಜ್ಯದಲ್ಲಿ ಮರುಕಳಿಸಬಾರದೆಂಬ ಮುಂಜಾಗೃತೆಯಿಂದ ಕಾಗೇರಿ ಅವರು ಈ ಆದೇಶ ಹೊರಡಿಸಿದ್ದಾರೆ.

Karnataka Assembly Speaker Vishweshwar Hegde Kageri Order

ವಿಪಕ್ಷಗಳು ಸಿಎಎ-ಎನ್‌ಆರ್‌ಸಿ ಸಂಬಂಧಿಸಿದಂತೆ ಹಾಗೂ ಇನ್ನಿತರೆ ವಿಷಯಗಳ ಬಗ್ಗೆ ಭಾರಿ ಪ್ರತಿಭಟನೆಗೆ ಸಜ್ಜಾಗಿವೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ವಿಧಾನಸಭೆಯಲ್ಲಿ ನಿಲುವಳಿ ಮಂಡಿಸುವುದಾಗಿ ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ. ಹೀಗಾಗಿ ಸ್ಪೀಕರ್ ಕಾಗೇರಿ ಈ ಆದೇಶ ಹೊರಡಿಸಿದ್ದಾರೆ.

ಅಂದು ಶಿಕ್ಷಣ ಸಚಿವ, ಈಗ ಸದನದ 'ಹೆಡ್ ಮಾಸ್ಟರ್'; ಕಾಗೇರಿ ಪರಿಚಯಅಂದು ಶಿಕ್ಷಣ ಸಚಿವ, ಈಗ ಸದನದ 'ಹೆಡ್ ಮಾಸ್ಟರ್'; ಕಾಗೇರಿ ಪರಿಚಯ

ವಿಧಾನಸಭೆ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿ ಹೊರಡಿಸಿರುವ ಪ್ರಕಟಣೆಯಲ್ಲಿ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ವೇಳೆ ಕರ್ನಾಟಕ ವಿಧಾನಪರಿಷತ್‍ನ ನಿಯಮ 26ರ ಪ್ರಕಾರ ರಾಜ್ಯಪಾಲರು ಬರುವಾಗ ಇಲ್ಲವೇ ಹೊರಡುವಾಗ ಅಥವಾ ಭಾಷಣದ ಸಂದರ್ಭದಲ್ಲಿ ಯಾವುದೇ ಸದಸ್ಯರು ಕ್ರಿಯಾಲೋಪ ಎತ್ತುವಂತಿಲ್ಲ. ಫೆಬ್ರವರಿ 17 ರಂದು ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವರಿದ್ದಾರೆ.

ಓ ದೇವರೇ! ಸಿದ್ದರಾಮಯ್ಯ ಕಾಲೆಳೆದ ಸುರೇಶ್‌ ಕುಮಾರ್‌ಗೆ ಟ್ವಿಟ್ಟಿಗರ ತರಾಟೆಓ ದೇವರೇ! ಸಿದ್ದರಾಮಯ್ಯ ಕಾಲೆಳೆದ ಸುರೇಶ್‌ ಕುಮಾರ್‌ಗೆ ಟ್ವಿಟ್ಟಿಗರ ತರಾಟೆ

ರಾಜ್ಯಪಾಲರ ಭಾಷಣದ ಮುನ್ನಾ ಭಾಷಣ ನಡೆಯುವಾಗ ಹಾಗೂ ನಿರ್ಗಮಿಸುವಾಗ ಶಾಸಕರು ಯಾವುದೇ ಪ್ರತಿಭಟನೆ ಮಾಡುವಂತಿಲ್ಲ ಎಂದು ಸೂಚನೆ ಹೊರಡಿಸಲಾಗಿದೆ. ಆದರೆ ರಾಜ್ಯಪಾಲರ ಭಾಷಣದ ವೇಳೆಯೇ ಪ್ರತಿಭಟನೆ ನಡೆಸಿ ಅಸಮಾಧಾನ ಪ್ರಕಟಮಾಡುವ ಉದ್ದೇಶವನ್ನು ವಿಪಕ್ಷ ಶಾಸಕರು ಹೊಂದಿದ್ದಾರೆ.

English summary
Karnataka Assembly Speaker Vishweshwar Hegde Kageri order MLAs not to disturb Governor's speech on joint assembly day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X