ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧಾನಸಭಾ ಚುನಾವಣೆ: ಹೆಬ್ಬಾಳ ಕ್ಷೇತ್ರದಲ್ಲಿ 40,000 ಸ್ಮಾರ್ಟ್ ಟಿವಿ ಉಡುಗೊರೆ ನೀಡಿದ ಕಾಂಗ್ರೆಸ್ ಶಾಸಕ

ಚುನಾವಣೆ ಹತ್ತಿರದಲ್ಲೇ ಕ್ಷೇತ್ರದ ಜನರಿಗೆ ಉಚಿತ ಸ್ಮಾರ್ಟ್ ಟಿವಿಗಳನ್ನು ವಿತರಿಸಿದ್ದಾರೆ ಕಾಂಗ್ರೆಸ್ ಶಾಸಕ ಭೈರತಿ ಸುರೇಶ್. ಮಕ್ಕಳಿಗೆ ಉಪಯೋಗವಾಗಲಿ ಎಂದು ನೀಡಿದ್ದೇನೆ ಎಂದರೆ, ನೆಟ್ಟಿಗರು ಹೇಳುವುದೇ ಬೇರೆ...ಮುಂದೆ ಓದಿ.

|
Google Oneindia Kannada News

ಬೆಂಗಳೂರು, ಜನವರಿ. 31: ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಮತ್ತು ಅವರ ಶಿಕ್ಷಣಕ್ಕೆ ಸಹಾಯವಾಗಲಿದೆ ಎಂದು ಹೇಳಿಕೊಂಡು ಹೆಬ್ಬಾಳ ಶಾಸಕ ಭೈರತಿ ಸುರೇಶ್ ತಮ್ಮ ಕ್ಷೇತ್ರದಲ್ಲಿ ಉಚಿತ ಸ್ಮಾರ್ಟ್ ಟಿವಿಗಳನ್ನು ವಿತರಿಸಲು ಪ್ರಾರಂಭಿಸಿದ್ದಾರೆ.

ಆದರೆ, ಭೈರತಿ ಸುರೇಶ್ ಇಷ್ಟೊಂದು ಬೆಲೆಬಾಳುವ ಟಿವಿಗಳನ್ನು ಹಂಚಲು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡುವುದಲ್ಲ ಬದಲಿಗೆ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವುದು ಎಂದು ಟೀಕಿಸಿದ್ದಾರೆ.

ವಿಧಾನಸಭಾ ಚುನಾವಣೆ: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪ್ರತ್ಯೇಕ ಪ್ರಜಾಧ್ವನಿ ಯಾತ್ರೆಯ ಸಂಪೂರ್ಣ ವಿವರಗಳುವಿಧಾನಸಭಾ ಚುನಾವಣೆ: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪ್ರತ್ಯೇಕ ಪ್ರಜಾಧ್ವನಿ ಯಾತ್ರೆಯ ಸಂಪೂರ್ಣ ವಿವರಗಳು

ಇನ್ನ, ಕ್ಷೇತ್ರದಲ್ಲಿ ಸ್ಮಾರ್ಟ್ ಟಿವಿಗಳ ಅಗತ್ಯವಿರುವವರನ್ನು ತಮ್ಮ ಬೆಂಬಲಿಗರು ಗುರುತಿಸುತ್ತಾರೆ ಎಂದು ಶಾಸಕ ಭೈರತಿ ಸುರೇಶ್ ಹೇಳಿದ್ದು, ಫಲಾನುಭವಿಗಳ ಆಯ್ಕೆಯ ಮಾನದಂಡವನ್ನು ಅವರು ಬಹಿರಂಗಪಡಿಸಿಲ್ಲ. 32 ಇಂಚಿನ ಟಿವಿ ಸೆಟ್‌ಗಳನ್ನು ಖರೀದಿಸಲು ಮತ್ತು ಫಲಾನುಭವಿಗಳ ಮನೆಯಲ್ಲಿ ಟಿವಿಗಳನ್ನು ಇಡುವ ವೆಚ್ಚವನ್ನು ಶಾಸಕರೇ ಭರಿಸುತ್ತಿದ್ದಾರೆ.

Karnataka Assembly Elections 2023: Congress MLA Byrathi Suresh distributes free smart TVs

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಅವರು ತಮ್ಮ ಬೆಂಬಲಿಗರೊಂದಿಗೆ ಮನೆಯೊಂದಕ್ಕೆ ಸ್ಮಾರ್ಟ್ ಟಿವಿ ಅಳವಡಿಕೆಯ ಮೇಲ್ವಿಚಾರಣೆ ಮಾಡುತ್ತಿರುವುದು ಕಂಡು ಬಂದಿದೆ. ಟಿವಿ ಅಳವಡಿಸಿ ಆ ಕುಟುಂಬದೊಂದಿಗೆ ಫೋಟೋಗೆ ಪೋಸ್ ನೀಡಿದ್ದಾರೆ. ಟಿವಿ ಸ್ವಿಚ್ ಆನ್ ಮಾಡಿದ ನಂತರ, ಬೈರತಿ ಸುರೇಶ್‌ ಅವರ ಕೈಮುಗಿದ ಚಿತ್ರವು ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ.

"ಕಳೆದ ಒಂದು ವರ್ಷದಿಂದ ಜನರ ಬೇಡಿಕೆಯ ಮೇರೆಗೆ ಸ್ಮಾರ್ಟ್ ಟಿವಿಗಳನ್ನು ವಿತರಿಸಲು ನಿರ್ಧರಿಸಿದ್ದೆ. ಹೆಬ್ಬಾಳ ಕ್ಷೇತ್ರದಲ್ಲಿ 2.57 ಲಕ್ಷ ಮತದಾರರಿದ್ದಾರೆ. ಆದರೆ, ಅವರೆಲ್ಲರಿಗೂ ಉಚಿತ ಸ್ಮಾರ್ಟ್ ಟಿವಿ ಸಿಗುತ್ತಿಲ್ಲ. ಸ್ಮಾರ್ಟ್ ಟಿವಿ ನೀಡಲು ಕ್ಷೇತ್ರದ ಜನತೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಕುಟುಂಬಗಳಿಗೆ ಮಾತ್ರ ಟಿವಿ ಸಿಗಲಿದೆ" ಎಂದು ಶಾಸಕರು ಹೇಳಿದ್ದಾರೆ.

ಇಡೀ ಕುಟುಂಬಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್, ಲ್ಯಾಪ್ ಟಾಪ್ ಬದಲು ಟಿವಿ ನೀಡಲು ನಿರ್ಧರಿಸಿರುವುದಾಗಿ ಶಾಸಕ ತಿಳಿಸಿದ್ದಾರೆ.

Karnataka Assembly Elections 2023: Congress MLA Byrathi Suresh distributes free smart TVs

ಆದರೆ, ನೆಟ್ಟಿಗರು ಶಾಸಕರ ವಿರುದ್ಧ ಟೀಕೆ ಮಾಡಿದ್ದು, ತಮ್ಮ ಅಧಿಕಾರಾವಧಿಯಲ್ಲಿ ಜನರಿಗಾಗಿ ಯಾವುದೇ ದೊಡ್ಡ ಕೆಲಸ ಮಾಡಿಲ್ಲ. ಈಗ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರನ್ನು ಓಲೈಸಲು ಮಾತ್ರ ಸ್ಮಾರ್ಟ್ ಟಿವಿಗಳನ್ನು ವಿತರಿಸಲಾಗುತ್ತಿದೆ ಎಂದಿದ್ದಾರೆ.

"ಶಾಸಕ ಭೈರತಿ ಸುರೇಶ್ ಅವರು ಹೆಬ್ಬಾಳದಲ್ಲಿ 40,000 (ನಲವತ್ತು ಸಾವಿರ) ಸ್ಮಾರ್ಟ್ ಟಿವಿಗಳನ್ನು ನೀಡಿದ್ದಾರೆ. ಒಂದು ಟಿವಿಗೆ 10,000 ಆಗಿದ್ದರೂ ಸಹ

ಒಟ್ಟು 40,00,00,000 (40 ಕೋಟಿ) ಖರ್ಚು ಮಾಡಿದ್ದಾರೆ. ಹಾಗಾದರೆ, ಈ ಹಣ ಎಲ್ಲಿಂದ ಬರುತ್ತಿದೆ..? ಚುನಾವಣೆಯಲ್ಲಿ ಗೆದ್ದ ನಂತರ ಈ ಹಣವನ್ನು ಹೇಗೆ ಹಿಂಪಡೆಯಲಾಗುತ್ತದೆ..?" ಎಂದು ಪ್ರಶ್ನಿಸಿದ್ದಾರೆ.

English summary
Karnataka assembly elections 2023: Hebbal Congress MLA Byrathi Suresh distributing free smart TVs in his constituency. he said it will help students for online class. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X