ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೊರೆತ ಎಲ್ಲ ವೋಟರ್ ಐಡಿಗಳು ಅಸಲಿ: ಚುನಾವಣಾ ಆಯೋಗ

|
Google Oneindia Kannada News

ಬೆಂಗಳೂರು: ರಾಜರಾಜೇಶ್ವರಿ ನಗರದ ವಿಧಾನಸಭೆ ಕ್ಷೇತ್ರದ ಫ್ಲಾಟ್ ಒಂದರಲ್ಲಿ ದೊರೆತ ಎಲ್ಲ ಮತದಾರರ ಗುರುತಿನ ಚೀಟಿಗಳು ಅಸಲಿ ಎಂದು ಚುನಾವಣಾ ಆಯೋಗ ತಿಳಿಸಿದೆ.

ಜಾಲಹಳ್ಳಿಯ ಮನೆಯೊಂದರಲ್ಲಿ 9,896 ಗುರುತಿನ ಚೀಟಿಗಳು ಪತ್ತೆಯಾಗಿದ್ದು, ಎಲ್ಲವೂ ಅಸಲಿ ಎನ್ನುವುದು ಪ್ರಾಥಮಿಕ ಪರಿಶೀಲನೆಯಿಂದ ದೃಢಪಟ್ಟಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್‌ ಸ್ಪಷ್ಟಪಡಿಸಿದರು.

ರಾಕೇಶ್ ಫ್ಲಾಟ್‌ನ ಬಾಡಿಗೆದಾರರಲ್ಲ: ನಕಲಿ ವೋಟರ್ ಐಡಿ ಸಿಕ್ಕ ಮನೆ ಮಾಲಕಿ ಸ್ಪಷ್ಟನೆರಾಕೇಶ್ ಫ್ಲಾಟ್‌ನ ಬಾಡಿಗೆದಾರರಲ್ಲ: ನಕಲಿ ವೋಟರ್ ಐಡಿ ಸಿಕ್ಕ ಮನೆ ಮಾಲಕಿ ಸ್ಪಷ್ಟನೆ

ಈ ಐಡಿಗಳ ಜತೆಗೆ ರಾಜಕೀಯ ಪಕ್ಷಗಳ ಕರಪತ್ರಗಳು ಸಹ ಇದ್ದವು. ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಅವುಗಳನ್ನು ಇರಿಸಿರಬಹುದು. ಆದರೆ, ಕ್ಷೇತ್ರದ ಚುನಾವಣೆಯನ್ನು ರದ್ದು ಮಾಡಲು ಇವಿಷ್ಟೇ ಕಾರಣಗಳು ಸಾಕು ಎನಿಸುವುದಿಲ್ಲ ಎಂದು ತಿಳಿಸಿದರು.

karnataka assembly elections 2018 rr nagar voter ids are not fake

ಚುನಾವಣಾ ಆಯೋಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಇನ್ನೂ ಅನೇಕರನ್ನು ಬಂಧಿಸುವ ಸಾಧ್ಯತೆ ಇದೆ. ಸದ್ಯ ಪ್ರಕರಣದ ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದರು.

ಆದಷ್ಟು ಶೀಘ್ರವೇ ಸತ್ಯವನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಯಾರೂ ನಮ್ಮ ವ್ಯವಸ್ಥೆಯನ್ನು ಭೇದಿಸಿಲ್ಲ ಮತ್ತು ಹೊಸ ಮತದಾರರ ಚೀಟಿಗಳನ್ನು ಸೃಷ್ಟಿಸಿಲ್ಲ ಎನ್ನುವುದು ಖಚಿತ ಎಂದು ತಿಳಿಸಿದರು.

ವೋಟರ್ ಐಡಿ ಸಿಕ್ಕಿದ ಫ್ಲ್ಯಾಟ್ ಗೂ ನನಗೂ ಸಂಬಂಧವಿಲ್ಲ: ರಾಕೇಶ್ವೋಟರ್ ಐಡಿ ಸಿಕ್ಕಿದ ಫ್ಲ್ಯಾಟ್ ಗೂ ನನಗೂ ಸಂಬಂಧವಿಲ್ಲ: ರಾಕೇಶ್

ಯಾವುದೇ ಪಕ್ಷದ ಕೆಲವು ವಸ್ತುಗಳು ಸಿಕ್ಕಿದೆ ಎಂಬ ಕಾರಣಕ್ಕೆ ತರಾತುರಿಯ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪ್ರಕರಣ ಸಂಬಂಧ ಕೇಂದ್ರದ ಉಪ ಚುನಾವಣಾ ಆಯುಕ್ತರು ಭೇಟಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

English summary
Chief Election Officer Sanjiv Kumar has confirmed that the voter id's found in a house in Rajarajeshwari nagar constituency all are original. This is a very serious matter he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X