ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನಾ ಬಗೆಯ ಬದುಕು, ಬವಣೆಯ 'ಕಮರ್ಷಿಯಲ್ ಸಿನಿಮಾ' ಬೆಂಗಳೂರಿನ ಗಾಂಧಿನಗರ

|
Google Oneindia Kannada News

ಬೆಂಗಳೂರು ವ್ಯಾಪ್ತಿಯ ಗಾಂಧಿನಗರ ವಿಧಾನಸಭೆ ಕ್ಷೇತ್ರ ಅಂದಾಕ್ಷಣ ಕನ್ನಡ ಚಿತ್ರರಂಗ, ಸೊಬಗು, ಸೊಗಸು ಎಲ್ಲವೂ ಕಣ್ಣ ಮುಂದೆ ಬರಬಹುದು. ಆದರೆ ಇದು ನಿಮ್ಮ ಊಹೆಯ ಸಮಸ್ಯೆ. ಕಳೆದ ಬಾರಿ ಚುನಾವಣೆಯಲ್ಲಿ ಇಲ್ಲಿ ಚಲಾವಣೆ ಆಗಿದ್ದು ಶೇ ನಲವತ್ತರಷ್ಟು ಮತಗಳು ಮಾತ್ರ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಆದ ಮತದಾನದ ಪ್ರಮಾಣ ಶೇ ಐವತ್ತೇಳಕ್ಕೆ ಹೋಲಿಸಿದರೆ ಇದು ಭ್ರಮನಿರಸನಗೊಳಿಸುವ ಸಂಖ್ಯೆ.

ಈ ಕ್ಷೇತ್ರ ವ್ಯಾಪ್ತಿಯಲ್ಲಿ ಬಹುತೇಕ ಮತಗಳು ಕೇಂದ್ರೀಕೃತ ಆಗಿರುವುದು ಸುಭಾಷ್ ನಗರ ಹಾಗೂ ಓಕಳಿಪುರಂನಲ್ಲಿ. ಇನ್ನು ಬಿನ್ನಿಪೇಟೆ ಹಾಗೂ ಕಾಟನ್ ಪೇಟೆ ಅದರ ಸುತ್ತಮುತ್ತ ಇರುವ ಪೇಟೆಯು ವಾಣಿಜ್ಯ ಚಟುವಟಿಕೆ ಹೆಚ್ಚಾಗಿರುವ ಪ್ರದೇಶಗಳು. ಮಧ್ಯಮ ಹಾಗೂ ಕೆಳಮಧ್ಯಮ ವರ್ಗದವರು ಹೆಚ್ಚಾಗಿ ವಾಸಿಸುವ ಪ್ರದೇಶ ದತ್ತಾತ್ರೇಯ ದೇವಸ್ಥಾನ ವಾರ್ಡ್ ಹಾಗೂ ಗಾಂಧಿನಗರ.

ಬಹಳ ಕಾಲದಿಂದಲೂ ಗಾಂಧಿನಗರ ಕ್ಷೇತ್ರ ಕಾಂಗ್ರೆಸ್ ಪಾಲಿನ ಗಟ್ಟಿಮುಟ್ಟಾದ ಕೋಟೆ. 1999, 2004, 2008, 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ದಿನೇಶ್ ಗುಂಡೂರಾವ್ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಈ ಹಿಂದಿನ ಎರಡು ಚುನಾವಣೆಯಲ್ಲಿ ಬಿಜೆಪಿಯಿಂದ ಪಿ.ಸಿ.ಮೋಹನ್ ಎರಡನೇ ಸ್ಥಾನ ಪಡೆದಿದ್ದಾರೆ.

Karnataka Assembly Election 2018: Bengaluru- Gandhi Nagar constituency profile

ಈ ಸಲವೂ ದಿನೇಶ್ ಗುಂಡೂರಾವ್ ಕಾಂಗ್ರೆಸ್ ನ ಹುರಿಯಾಳು. ಬಿಜೆಪಿಯಿಂದ ಸಪ್ತಗಿರಿಗೌಡ, ಜೆಡಿಎಸ್ ನಿಂದ ನಾರಾಯಣಸ್ವಾಮಿ ಕಣದಲ್ಲಿ ಇದ್ದಾರೆ. ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ದಿನೇಶ್ ಗುಂಡೂರಾವ್ ಜಯ ಗಳಿಸಿರುವ ವ್ಯತ್ಯಾಸ ಗಮನಿಸಿದರೆ ಅವರಿಗೆ ಅನುಕೂಲಕರ ವಾತಾವರಣ ಇದ್ದಂತಿದೆ.

ತುಂಬ ವೈವಿಧ್ಯ ಇರುವಂಥ ವಿಧಾನಸಭಾ ಕ್ಷೇತ್ರ ಇದು. ಸಂಚಾರ ದಟ್ಟಣೆ, ಕಸದ ಸಮಸ್ಯೆ ಇದ್ದು, ಕೊಳೆಗೇರಿಗಳ ಅಭಿವೃದ್ಧಿ ಆಗಬೇಕಿದೆ. ನಿತ್ಯವೂ ಬಂದು ಹೋಗುವ ಜನರ ಪ್ರಮಾಣ ಇಲ್ಲಿ ಹೆಚ್ಚು. ಅದಕ್ಕೆ ಕಾರಣ ಇಲ್ಲಿರುವ ಮಾರ್ಕೆಟ್ ಗಳು. ಕೆ.ಜಿ.ರಸ್ತೆ, ಮೆಜೆಸ್ಟಿಕ್ ಕೂಡ ಇದೇ ಕ್ಷೇತ್ರ ವ್ಯಾಪ್ತಿಗೆ ಬರುವುದರಿಂದ ಕಸದ ಸಮಸ್ಯೆ ಅತಿ ದೊಡ್ಡ ಸವಾಲಾಗಿದೆ.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಬಿಬಿಎಂಪಿ ವಾರ್ಡ್ ಗಳು
ದತ್ತಾತ್ರೇಯ ದೇವಸ್ಥಾನ, ಗಾಂಧಿನಗರ, ಸುಭಾಷ್ ನಗರ, ಓಕಳೀಪುರಂ, ಕಾಟನ್ ಪೇಟೆ, ಬಿನ್ನಿಪೇಟೆ. ಓಕಳೀಪುರಂನಲ್ಲಿ ಬಿಜೆಪಿ ಕಾರ್ಪೊರೇಟರ್ ಇದ್ದಾರೆ. ಉಳಿದ ಎಲ್ಲ ಕಡೆಯೂ ಕಾಂಗ್ರೆಸ್ ಕಾರ್ಪೊರೇಟರ್ ಗಳೇ ಆರಿಸಿಬಂದಿದ್ದಾರೆ.

ಈ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 1,16,240 ಪುರುಷ, 1,06,978 ಮಹಿಳೆ ಹಾಗೂ 6 ತೃತೀಯಲಿಂಗಿ ಮತದಾರರಿದ್ದಾರೆ.

ಮುಖ್ಯ ಸಮಸ್ಯೆಗಳು
* ಸ್ವಚ್ಛತೆ ಕೊರತೆ, ಕಸ ವಿಲೇವಾರಿ ಸಮಸ್ಯೆ
* ದಿನದಿನಕ್ಕೂ ಹೆಚ್ಚುತ್ತಿರುವ ಸಂಚಾರ ಸಮಸ್ಯೆ
* ಮುಖ್ಯ ರಸ್ತೆಗಳ ನಿರ್ವಹಣೆ ಸಮಸ್ಯೆ

English summary
Karnataka Assembly Election 2018: Read all about Gandhi Nagar assembly constituency of Bengaluru. Get election news from Bengaluru district. Know about Gandhi Nagar candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X