ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುನಿರಾಜು ಅವರ ಹ್ಯಾಟ್ರಿಕ್ ಕನಸು ಈಡೇರುತ್ತಾ ದಾಸರಹಳ್ಳಿಯಲ್ಲಿ?

|
Google Oneindia Kannada News

ಬೆಂಗಳೂರು, ಏಪ್ರಿಲ್ 20: ರಾಜಧಾನಿ ಬೆಂಗಳೂರಿನ ಬಿಜೆಪಿಗಳ ಭದ್ರಕೋಟೆಗಳ ಪೈಕಿ ಒಂದು ಎನಿಸಿರುವ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಬಿಜೆಪಿಯ ಮುನಿರಾಜು ಹ್ಯಾಟ್ರಿಕ್ ಸಾಧಿಸುವ ಕನಸು ಕಾಣುತ್ತಿದ್ದಾರೆ. ಅದಕ್ಕೆ ಬ್ರೇಕ್ ಹಾಕಲು ಇನ್ನಿಲ್ಲದ ಪ್ರಯತ್ನ ಆರಂಭಿಸಿದೆ.

ಶಿವಾಜಿನಗರ : ಅಧಿಪತ್ಯಕ್ಕೆ ಬೇಗ್-ಕಟ್ಟಾ ಕಾದಾಟ ಶಿವಾಜಿನಗರ : ಅಧಿಪತ್ಯಕ್ಕೆ ಬೇಗ್-ಕಟ್ಟಾ ಕಾದಾಟ

ಬಿಜೆಪಿಯ ನಾಗಾಲೋಟದ ಗೆಲುವಿಗೆ ಜೆಡಿಎಸ್ ನ ಮಂಜುನಾಥ್ ಈ ಬಾರಿ ಪ್ರಬಲ ಪೈಪೋಟಿ ಒಡ್ಡಿದ್ದು, ಕಳೆದ ಬಾರಿ ಕಾಂಗ್ರೆಸ್ ನ ಹಿರಿಯ ಮುಖಂಡ ಬಿ.ಎಲ್. ಶಂಕರ್ ಅವರನ್ನು ಸೋಲಿಸಿದ ಮುನಿರಾಜು ಅವರಿಗೆ ಈ ಬಾರಿ ಅವರ ಕಾರ್ಯ ವೈಖರಿ ಬಗೆಗೆ ಇರುವ ಅಸಾಮಾಧಾನ ಕೆಲ ಮಟ್ಟಿಗೆ ಆತಂಕ ಉಂಟುಮಾಡಿದೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಕಳೆದ 2 ಚುನಾವಣೆಯಲ್ಲಿ ದಾಸರಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮುನಿರಾಜು, ಈ ಬಾರಿಯೂ ತಮ್ಮ ಪ್ರಾಬಲ್ಯ ಉಳಿಸಿಕೊಂಡಿದ್ದಾರೆ. ಪಕ್ಷದ ಟಿಕೆಟ್ ಘೋಷಣೆಯಾಗಿದೆ. ಆದರೆ, ಈ ಬಾರಿ ಬಿಜೆಪಿಗೆ ಜೆಡಿಎಸ್ ಪ್ರಬಲ ಹೋರಾಟಕ್ಕೆ ಅಣಿಯಾಗುತ್ತಿದೆ. ಕಳೆದ ಬಾರಿ ಕಾಂಗ್ರೆಸ್ ನ ಬಿ.ಎಲ್. ಶಂಕರ್ ಚುನಾವಣಾ ಕಣದಲ್ಲಿ 6-7 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು.

Karnataka Assembly Election 2018 bengaluru Dasarahalli constituency

ಈ ಬಾರಿ ಕಾಂಗ್ರೆಸ್ ಇನ್ನೂ ಈ ಕ್ಷೇತ್ರದ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಒಂದು ವೇಳೆ ಕಾಂಗ್ರೆಸ್ ಪ್ರಭಾವಿ ನಾಯಕರನ್ನು ಕಣಕ್ಕಿಳಿಸಿದರೆ, ಮೂರು ಪಕ್ಷಗಳಿಗೆ ಕ್ಷೇತ್ರ ಸವಾಲಾಗಿ ಪರಿಣಮಿಸಿದೆ. ಬಿಜೆಪಿಯ ಭದ್ರಕೋಟೆಯಲ್ಲೊಂದಾಗಿರುವ ಟಿ.ದಾಸರಹಳ್ಳಿಯಲ್ಲಿ ಪ್ರಸ್ತುತ ಮೂರು ಪಕ್ಷಗಳಲ್ಲಿ ಅಸಮಾಧಾನವೂ ಹೊಗೆಯಾಡುತ್ತಿದೆ.

ಕಳೆದ 2 ಬಾರಿ ಗೆದ್ದ ಬಿಜೆಪಿಯ ಮುನಿರಾಜು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಸಿಕೊಂಡಿಲ್ಲ ಎಂಬ ಜನಾಭಿಪ್ರಾಯವೂ ವ್ಯಕ್ತವಾಗಿದೆ.

ವಲಸಿಗರೇ ಹೆಚ್ಚು: ರಾಷ್ಟ್ರೀಯ ಹೆದ್ದಾರಿ, ತುಮಕೂರು ರಸ್ತೆ ಭಾಗ ಎಂಬುದಾಗಿ, ಗುರುತಿಸಿಕೊಂಡಿರುವ ದಾಸರಹಳ್ಳಿ ಕ್ಷೇತ್ರದಲ್ಲಿ ಶಾಹಿ ಎಕ್ಸ್ ಪೋರ್ಟ್ಸ್, ಜಿಂದಾಲ್ ಸೇರಿ ವಿವಿಧ ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳಿವೆ. ಕೂಲಿ ಕಾರ್ಮಿಕರು, ಕಾರ್ಖಾನೆಗಳ ಕಾರ್ಮಿಕರು ಈ ಭಾಗದಲ್ಲಿ ಹೆಚ್ಚಿರುವುದು ಗಮನಾರ್ಹ ಅಂಶ. ಅಂತೆಯೇ ಉದ್ಯೋಗಕ್ಕಾಗಿ ನಗರದಲ್ಲಿ ನೆಲೆಸಿರುವವರ ಸಂಖ್ಯೆಯೂ ಹೆಚ್ಚು.

ತಮಿಳುನಾಡು, ಆಂಧ್ರಪ್ರದೇಶ ಹಾಗೂ ಉತ್ತರ ಭಾರತದಿಂದ ವಲಸೆ ಬಂದವರೂದೊಡ್ಡ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಮತ ಚಲಾಯಿಸುವ ಹಕ್ಕು ಪಡೆದ ವಲಸಿಗರ ಸಂಖ್ಯೆಯೂ ಚುನಾವಣಾ ಲೆಕ್ಕಾಚಾರದಲ್ಲಿ ಪ್ರಮುಖವಾಗಲಿದೆ. ಕಾಂಗ್ರೆಸ್ ನಿಂದ ಪ್ರಬಲ ಅಭ್ಯರ್ಥಿ ಕಣಕ್ಕಿಳಿದರೆ, ಅತ್ಯುತ್ತಮ ಪೈಪೋಟಿ ಏರ್ಪಡುವ ಸಾಧ್ಯತೆ ಹೆಚ್ಚಿದೆ.

2013ರ ವಿಧಾನಸಭಾ ಚುನಾವಣೆಯ ಫಲಿತಾಂಶ: ಬಿಜೆಪಿಯಿಂದ ಮುನಿರಾಜು 57,562 ಮತದಿಂದ ಗೆಲುವು ಸಾಧಿಸಿದ್ದರೆ, ಅವರು ಎದುರು ಸ್ಪರ್ಧಿಸಿದ್ದ ಕಾಂಗ್ರೆಸ್ ನ ಬಿಎಲ್ ಶಂಕರ್ 46,734 ಮತ, ಜೆಡಿಎಸ್ ನಿಂದ ಅಂದಾನಪ್ಪ 43,039 ಮತಗಳನ್ನು ಪಡೆದುಕೊಂಡಿದ್ದರು.

ಪಾಲಿಕೆ ಬಲಾಬಲ: ಬಿಜೆಪಿ-5, ಚೊಕ್ಕಸಂದ್ರ, ದಾಸರಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ, ಹೆಗ್ನಳ್ಳಿ, ಕಾಂಗ್ರೆಸ್-2- ಶೆಟ್ಟಿಹಳ್ಳಿ, ಪೀಣ್ಯ ಕೈಗಾರಿಕಾ ಪ್ರದೇಶ, ಜೆಡಿಎಸ್ 1 ರಾಜಗೋಪಾಲನಗರದಲ್ಲಿದೆ.
ಮತದಾರರ ಸಂಖ್ಯೆ: ದಾಸರಹಳ್ಳಿ ಕ್ಷೇತ್ರದಲ್ಲಿ ಪುರುಷರು-2,36,853, ಮಹಿಳೆಯರು 2,00,138, ಇತರೆ 86, ಒಟ್ಟು 4,37,077 ಮತದಾರರಿದ್ದಾರೆ.

English summary
Bengaluru district, Know about Dasarahalli candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X