ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪಚುನಾವಣೆ: ಬೆಂಗಳೂರಿನಲ್ಲಿ 4 ದಿನ ಮದ್ಯಮಾರಾಟ ನಿಷೇಧ

|
Google Oneindia Kannada News

ಬೆಂಗಳೂರು, ನ 28: ಹದಿನೈದು ಅಸೆಂಬ್ಲಿ ಕ್ಷೇತ್ರಗಳ ಉಪಚುನಾವಣೆ ಮತ್ತು ಮತಎಣಿಕೆ ಪ್ರಕ್ರಿಯೆ ಡಿಸೆಂಬರ್ ತಿಂಗಳಲ್ಲಿ ನಡೆಯುತ್ತಿದೆ. ಈ ಸಂಬಂಧ, ಬೆಂಗಳೂರು ನಗರ ಪೊಲೀಸ್ ಆಯುಕ್ತ, ಭಾಸ್ಕರ್ ರಾವ್, ಮದ್ಯಮಾರಾಟ ನಿಷೇಧಗೊಳಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

"ದಿನಾಂಕ: 05.12.2019ರಂದು ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯ ನಾಲ್ಕು ಅಸೆಂಬ್ಲಿ ಕ್ಷೇತ್ರಗಳಲ್ಲಿ ಚುನಾವಣೆ ನಿಗದಿಯಾಗಿದೆ. ಸದರಿ ದಿನದಂದು ಮತದಾರರಿಗೆ ಮುಕ್ತ ಮತ್ತು ನ್ಯಾಯೋಚಿತ ಮತದಾನಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ, ಮತದಾನದ ಮುಕ್ತಾಯದ ಹಿಂದಿನ 48 ಗಂಟೆಗಳ ಕಾಲದ ಅವಧಿಯನ್ನು ಪಾನ ವಿರೋಧ (ಡ್ರೈ ಡೇ) ದಿನವೆಂದು ಘೋಷಿಸುವಂತೆ, ಚುನಾವಣಾ ಆಯೋಗ ಸೂಚಿಸಿರುತ್ತದೆ".

ಕುಡಿದು ಗಲಾಟೆ ಮಾಡಿ ಸಿಕ್ಕಿಬಿದ್ದರೆ ಊರಿಗೆಲ್ಲ ಮಟನ್ ಊಟ ಹಾಕಿಸೋ ಶಿಕ್ಷೆ ಕುಡಿದು ಗಲಾಟೆ ಮಾಡಿ ಸಿಕ್ಕಿಬಿದ್ದರೆ ಊರಿಗೆಲ್ಲ ಮಟನ್ ಊಟ ಹಾಕಿಸೋ ಶಿಕ್ಷೆ

"ಭಾಸ್ಕರ್ ರಾವ್ ಆದ ನಾನು, ಕರ್ನಾಟಕ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಸೆಕ್ಷನ್ 135ಸಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಚುನಾವಣೆ ನಡೆಯುವ ಕಮಿಷನರೇಟ್ ವ್ಯಾಪ್ತಿಯ (ರಾಮನಗರ ಹೊರತು ಪಡಿಸಿ), ಕೆ.ಆರ್.ಪುರಂ, ಮಹಾಲಕ್ಶ್ಮೀ ಲೇಔಟ್, ಯಶವಂತಪುರ ಮತ್ತು ಶಿವಾಜಿನಗರ ಅಸೆಂಬ್ಲಿ ಕ್ಷೇತ್ರಗಳಲ್ಲಿ ಈ ಕೆಳಗಂಡಂತೆ, ಮದ್ಯ ಮಾರಾಟವನ್ನು ನಿಷೇಧಿಸಿದ್ದೇನೆ" ಎಂದು ಪೊಲೀಸ್ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

Karnataka Assembly By Elections 2019: Liquor Ban Order From Bengaluru City Police Commissioner

ದಿನಾಂಕ: 03.12.2019ರ ಸಂಜೆ ಆರು ಗಂಟೆಯಿಂದ, ದಿನಾಂಕ: 05.12.2019ರ ಮಧ್ಯರಾತ್ರಿ ಹನ್ನೆರಡು ಗಂಟೆಯವರೆಗೆ

ದಿನಾಂಕ: 08.12.2019ರ ಮಧ್ಯರಾತ್ರಿ 12 ಗಂಟೆಯಿಂದ, ದಿನಾಂಕ : 09.12.2019ರ ಮಧ್ಯರಾತ್ರಿ 12 ಗಂಟೆಯವರೆಗೆ

ಈ ಸರಹದ್ದಿನಲ್ಲಿ ಬರುವ ಎಲ್ಲಾ ರೀತಿಯ ಮದ್ಯದ ಅಂಗಡಿ, ಬಾರ್, ರೆಸ್ಟೋರೆಂಟ್ ಮತ್ತು ಕ್ಲಬ್ ಗಳಲ್ಲಿ ಮದ್ಯ ಮಾರಾಟವನ್ನು, ಮೇಲೆ ನಮೂದಿಸಿದ ದಿನಗಳಲ್ಲಿ ನಿಷೇಧಿಸಲಾಗಿದೆ.

English summary
Karnataka Assembly By Elections 2019: Liquor Ban Order From Bengaluru City Police Commissioner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X