ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿಷ್ಟಾಚಾರ, ಹಕ್ಕುಚ್ಯುತಿ ಹೆಸರಿನಲ್ಲಿ ಶರತ್ ಬಚ್ಚೇಗೌಡ 'ಕೈ'ಹಿಡಿದ ಕಾಂಗ್ರೆಸ್

|
Google Oneindia Kannada News

ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಸುದ್ದಿಯೋ/ವದಂತಿಯೋ ಅದು ಇಂದು ನಿನ್ನೆಯದಲ್ಲ. ಆದರೆ, ಅಧಿಕೃತವಾಗಿ ಕಾಂಗ್ರೆಸ್ ಆಗಲಿ ಶರತ್ ಆಗಲಿ ಈ ಬಗ್ಗೆ ಹೇಳಿಕೆಯನ್ನು ನೀಡುತ್ತಿಲ್ಲ.

ವಿಧಾನ ಮಂಡಲದ ಹಾಲೀ ಬಜೆಟ್ ಅಧಿವೇಶನದಲ್ಲಿ, ಶರತ್ ತಮ್ಮ ಒಂದು ಕಾಲನ್ನು ಕಾಂಗ್ರೆಸ್ಸಿನಲ್ಲಿಟ್ಟಿರುವುದು ಹೌದು ಎನ್ನುವುದಕ್ಕೆ ಪೂರಕ ಎನ್ನುವಂತೆ ವಿದ್ಯಮಾನವೊಂದು ನಡೆದಿದೆ. ಇದು ಸ್ಪಷ್ಟವಾಗಿ ಶರತ್ ಅವರು ಬಿಜೆಪಿಯಿಂದ ದೂರವಾಗುತ್ತಿರುವ ಸೂಚನೆಯಂತೆ ತೋರುತ್ತಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕ ಶರತ್ ಬಚ್ಚೇಗೌಡ ತಡರಾತ್ರಿ ಭೇಟಿ ರಹಸ್ಯ ಬಯಲು!ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕ ಶರತ್ ಬಚ್ಚೇಗೌಡ ತಡರಾತ್ರಿ ಭೇಟಿ ರಹಸ್ಯ ಬಯಲು!

ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಆರೋಪಿಸಿದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರನ್ನು ಕರೆಯದೇ ಇರುವುದು ಶರತ್ ಬೆಂಬಲಿಗರನ್ನು ಕೆರಳಿಸಿದೆ.

ಶಿವಮೊಗ್ಗ ಸ್ಪೋಟ: ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂಶಿವಮೊಗ್ಗ ಸ್ಪೋಟ: ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ

ರಾಜಕೀಯ ಜಿದ್ದಾಜಿದ್ದಿಗೆ ಹೆಸರಾಗಿರುವ ಹೊಸಕೋಟೆಯ ಗೌತಂ ಕಾಲೋನಿಯಲ್ಲಿ ಸರಕಾರದ ಅನುದಾನದ ಅಡಿಯಲ್ಲಿ ಒಳಚರಂಡಿ ಕಾಮಗಾರಿಯ ಗುದ್ದಲಿಪೂಜೆ ಕಾರ್ಯಕ್ರಮವಿತ್ತು. ಸಚಿವ ಎಂ.ಟಿ.ಬಿ ನಾಗರಾಜ್ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆಯೇ, ಶರತ್ ಬೆಂಬಲಿಗರು ಪ್ರತಿಭಟನೆ ನಡೆಸಲು ಆರಂಭಿಸಿ, ಹೆದ್ದಾರಿ ತಡೆಯನ್ನು ಮಾಡಿದ್ದರು. ಇದಕ್ಕಾಗಿ ಶರತ್ ಸೇರಿದಂತೆ ಹದಿನೆಂಟು ಜನರ ವಿರುದ್ದ ಎಫ್‌ಐಆರ್ ದಾಖಲಾಗಿತ್ತು.

ಅಧಿವೇಶನ ಆರಂಭ

ಅಧಿವೇಶನ ಆರಂಭ

ಅಧಿವೇಶನ ಆರಂಭವಾದ ನಂತರ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಶರತ್ ಬಚ್ಬೇಗೌಡ ಹಕ್ಕುಚ್ಯುತಿ ಮಂಡನೆಯನ್ನು ಮಾಡಿದ್ದರು. ಸ್ಪೀಕರ್ ಕಾಗೇರಿಯವರು ಇದಕ್ಕೆ ಅವಕಾಶವನ್ನೂ ನೀಡಿದ್ದರು. ಈ ಬಗ್ಗೆ ಸದನದಲ್ಲಿ ಮಾತನಾಡಿದ ಶರತ್, ಸ್ಥಳೀಯ ಪೊಲೀಸರು ಮತ್ತು ನಗರಸಭೆಯ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಈ ಸಂದರ್ಭದಲ್ಲಿ ಶರತ್ ಬೆಂಬಲಕ್ಕೆ ಕಾಂಗ್ರೆಸ್ ಶಾಸಕರು ನಿಂತರು. ಪ್ರಮುಖವಾಗಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಕೃಷ್ಣ ಭೈರೇಗೌಡ ಅವರು ಸರಕಾರದ ವಿರುದ್ದ ಕಿಡಿಕಾರುತ್ತಾ, ಸದನದ ಬಾವಿಗೆ ಇಳಿದರು. ಆಗ ಕಾಂಗ್ರೆಸ್ಸಿನ ಇತರ ಶಾಸಕರೂ ಶರತ್ ಪರವಾಗಿ ನಿಂತರು.

Recommended Video

Union Budget : ನಮ್ಮ ರಾಜ್ಯದಲ್ಲಿ ಸಾಕಷ್ಟು ಬದಲಾವಣೆ ಆಗತ್ತೆ | R Ashok | Oneindia Kannada
ಅಧಿಕಾರ ಅನ್ನುವುದು ಶಾಶ್ವತವಲ್ಲ

ಅಧಿಕಾರ ಅನ್ನುವುದು ಶಾಶ್ವತವಲ್ಲ

"ಅಧಿಕಾರ ಅನ್ನುವುದು ಶಾಶ್ವತವಲ್ಲ , ಇವತ್ತು ಇಲ್ಲಿ ಕೂತವರು ನಾಳೆ ಅಲ್ಲಿ ಕೂರಬಹುದು. ಅಲ್ಲಿ ಕೂತವರು ಇಲ್ಲಿ‌ ಬರಬಹುದು. ಹೊಸಕೋಟೆಯಲ್ಲಿ ಕಾರ್ಯಕ್ರಮ ನಡೆಯುತ್ತದೆ. ಶನಿವಾರ ಬೆಳಗ್ಗೆ ಕಾರ್ಯಕ್ರಮಕ್ಕೆ ಸಚಿವರನ್ನ ಆಹ್ವಾನಿಸುತ್ತಾರೆ. ಇವೆಲ್ಲವನ್ನೂ ನಗರಸಭೆಯ ಆಯುಕ್ತರು ಮಾಡುತ್ತಾರೆ. ಸ್ಥಳೀಯ ಶಾಸಕನಿಗೆ ಆಹ್ವಾನ ಕೊಡಿಸುವಷ್ಟೂ ಸೌಜನ್ಯವಿಲ್ಲವೇ? ಇದನ್ನು ಪ್ರಶ್ನಿಸಿ ನಮ್ಮ ಬೆಂಬಲಿಗರು ಪ್ರತಿಭಟನೆ ಮಾಡಿದರೆ, ಲಾಠಿಚಾರ್ಜ್ ಮಾಡುತ್ತಾರೆ"ಎಂದು ಶರತ್ ಬಚ್ಚೇಗೌಡ ಆಕ್ರೋಶ ವ್ಯಕ್ತ ಪಡಿಸಿದರು.

ಹಕ್ಕುಚ್ಯುತಿ ಹೆಸರಿನಲ್ಲಿ ಶರತ್ ಬಚ್ಚೇಗೌಡ 'ಕೈ'ಹಿಡಿದ ಕಾಂಗ್ರೆಸ್

ಹಕ್ಕುಚ್ಯುತಿ ಹೆಸರಿನಲ್ಲಿ ಶರತ್ ಬಚ್ಚೇಗೌಡ 'ಕೈ'ಹಿಡಿದ ಕಾಂಗ್ರೆಸ್

ರಾಜಕೀಯದಲ್ಲಿ ಇಂತಹ ಶಿಷ್ಟಾಚಾರ ಉಲ್ಲಂಘನೆಯಾಗುವ ಹತ್ತುಹಲವು ನಿದರ್ಶನಗಳಿವೆ. ಆದರೆ, ಶರತ್ ಪರವಾಗಿ ಕಾಂಗ್ರೆಸ್ ಶಾಸಕರು ಒಂದಾಗಿ, ಬಾವಿಗಿಳಿದಿದ್ದು ಪ್ರಮುಖಾಂಶವಾಗಿತ್ತು. ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು, ಬಿಜೆಪಿಗೆ ಪಾಠ ಕಲಿಸಿದ ಯುವ ಮುಖಂಡ ಶರತ್ ಬಚ್ಚೇಗೌಡ, ಕಾಂಗ್ರೆಸ್ಸಿಗೆ ಮತ್ತಷ್ಟು ಹತ್ತಿರವಾಗುತ್ತಿರುವುದಕ್ಕೆ ಈ ವಿದ್ಯಮಾನ ಒಂದು ಉದಾಹರಣೆ. ದಟ್ಸ್ ಆಲ್...

English summary
Karnataka Assembly Budget Session 2021: Congress Supported Sharath Bachegowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X