ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಗ್ರ ಅಸಾದುಲ್ಲಾನನ್ನು ಬೆಂಗಳೂರಿಗೆ ಕರೆತಂದ ಎನ್‌ಐಎ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಡಿಸೆಂಬರ್ 10 : ಹೈದರಾಬಾದ್‌ನ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಲಷ್ಕರ್ ಉಗ್ರ ಅಸಾದುಲ್ಲಾ ಖಾನ್‌ನನ್ನು ಬೆಂಗಳೂರಿಗೆ ಕರೆತಂದಿದ್ದು, ಎನ್‌ಐಎ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. 4 ತಿಂಗಳ ಹಿಂದೆ ಅಸಾದುಲ್ಲಾನನ್ನು ಬಂಧಿಸಲಾಗಿತ್ತು.

ಪೊಲೀಸ್ ಅಧಿಕಾರಿಗಳು, ಪತ್ರಕರ್ತರು ಮತ್ತು ಕೆಲವು ರಾಜಕೀಯ ಮುಖಂಡರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಆರೋಪದ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು 2012ರಲ್ಲಿ 12 ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರು ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದಾರೆ ಎಂದು ಆರೋಪಿಸಲಾಗಿತ್ತು. [ಬೆಳಗಾವಿಯಲ್ಲಿ ಸಿಕ್ಕಿಬಿದ್ದವರ ಬಳಿ 36 ವಿಡಿಯೋಗಳು ಇವೆ]

terrorist

ಈ ಪ್ರಕರಣದಲ್ಲಿ ಆರೋಪಿಯಾಗಿರುವ ಅಸಾದುಲ್ಲಾ ಖಾನ್ ಅಲಿಯಾಸ್ ಅಬು ಸೂಫಿಯಾನ್ ತಲೆಮರೆಸಿಕೊಂಡಿದ್ದ. 4 ತಿಂಗಳ ಹಿಂದೆ ಎನ್‌ಐಎ ಅಧಿಕಾರಿಗಳು ಅಸಾದುಲ್ಲಾನನ್ನು ಬಂಧಿಸಿದ್ದರು. ಸದ್ಯ, ಕೊಲೆ ಸಂಚಿನ ವಿಚಾರಣೆಗಾಗಿ ಆತನನ್ನು ಬೆಂಗಳೂರಿಗೆ ಕರೆತರಲಾಗಿದೆ. [ಉಗ್ರರ ಕರಿನೆರಳು ಬೆಳಗಾವಿಯ ಮೇಲೂ ಬಿತ್ತೇ?]

ಪ್ರಕರಣದ ವಿವರ : 2012ರ ಆ.29ರಂದು ಬೆಂಗಳೂರಿನ ಸಿಸಿಬಿ ಪೊಲೀಸರು ಓರ್ವ ಪತ್ರಕರ್ತ, ಓರ್ವ ವಿಜ್ಞಾನಿ ಸೇರಿ 12 ಆರೋಪಿಗಳನ್ನು ಪೊಲೀಸ್ ಅಧಿಕಾರಿಗಳು, ಪತ್ರಕರ್ತರು ಮತ್ತು ಕೆಲವು ರಾಜಕೀಯ ಮುಖಂಡರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಆರೋಪದ ಮೇಲೆ ಬಂಧಿಸಿದ್ದರು.

ಬಂಧಿತರೂ ಸೇರಿ 25 ಆರೋಪಿಗಳ ವಿರುದ್ಧ 2013ರ ಫೆಬ್ರವರಿಯಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ ಪಟ್ಟಿಯಲ್ಲಿ ಅಸಾದುಲ್ಲಾ ಖಾನ್‌ನನ್ನು ಸೇರಿಸಲಾಗಿತ್ತು. 2014ರಲ್ಲಿ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಕ್ಕೆ ವಹಿಸಲಾಗಿತ್ತು.

ತನಿಖೆ ಆರಂಭಿಸಿದ ಎನ್‌ಐಎ ಅಸಾದುಲ್ಲಾ ಸೇರಿಸಿ ಮೂವರ ವಿರುದ್ಧ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಿದ್ದರು. ಆಗ ತಲೆಮರೆಸಿಕೊಂಡಿದ್ದ ಅಸಾದುಲ್ಲಾನನ್ನು ನಾಲ್ಕು ತಿಂಗಳ ಹಿಂದೆ ಬಂಧಿಸಲಾಗಿತ್ತು. ಈಗ ಪ್ರಕರಣದ ವಿಚಾರಣೆಗಾಗಿ ಆತನನ್ನು ಬೆಂಗಳೂರಿಗೆ ಕರೆತಂದು ಕೋರ್ಟ್‌ಗೆ ಹಾಜರುಪಡಿಸಿ, ಎನ್‌ಐಎ ವಶಕ್ಕೆ ಪಡೆಯಲಾಗಿದೆ.

8 ಮಂದಿ ಖುಲಾಸೆ : ಸಿಸಿಬಿ ಬಂಧಿಸಿದ 12 ಆರೋಪಿಗಳ ಪೈಕಿ ಪತ್ರಕರ್ತ, ವಿಜ್ಞಾನಿ ಸೇರಿ 8 ಮಂದಿಯನ್ನು ಎನ್‌ಐಎ ನ್ಯಾಯಾಲಯ ಖುಲಾಸೆಗೊಳಿಸಿದೆ. ಇವರ ಮೇಲಿರುವ ಆರೋಪಗಳಿಗೆ ಪೂರಕ ಸಾಕ್ಷಿ ಲಭ್ಯವಾಗಿಲ್ಲ. ಉಳಿದ ಮೂವರು ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ. ಉಳಿದ ಒಬ್ಬ ಆರೋಪಿ ಅಸಾದುಲ್ಲಾ ಖಾನ್ ಈಗ ಎನ್‌ಐಎ ವಶದಲ್ಲಿದ್ದಾನೆ.

English summary
The National Investigating Agency has secured the custody of one Abu Sufiyan alias Assadullah Khan an alleged operative of the Lashkar-e-Tayiba-e-Tayiba in connection with a plot to kill prominent personalities including journalists in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X