ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಹೋರಾಟದಲ್ಲಿ ಕರ್ನಾಟಕ-ಕೇರಳ 'ಮಾದರಿ': ಬಿಎಸ್ವೈ-ಪಿಣರಾಯಿ 'ವಿಕ್ಟರಿ'

|
Google Oneindia Kannada News

ಬೆಂಗಳೂರು, ಜೂನ್ 16: ಕೊರೊನಾ ವೈರಸ್ ಹೋರಾಟದಲ್ಲಿ ಇಡೀ ದೇಶಕ್ಕೆ ಕರ್ನಾಟಕ ಮತ್ತು ಕೇರಳ ಮಾದರಿಯಾಗಿದೆ. ರಾಜಕೀಯವಾಗಿ ಈ ಎರಡು ರಾಜ್ಯಗಳಲ್ಲಿ ಅಷ್ಟಾಗಿ ಸಾಮ್ಯತೆ ಇಲ್ಲ. ಕೇರಳದಲ್ಲಿ ಕಮ್ಯೂನಿಸ್ಟ್ ಆಳ್ವಿಕೆ, ಕರ್ನಾಟಕದಲ್ಲಿ ಕೇಸರಿ ಆಡಳಿತ. ಪರಸ್ಪರ ವಿರುದ್ಧದ ತತ್ವ ಆದರ್ಶ ಹೊಂದಿರುವ ಆಡಳಿತ.

Recommended Video

Careful! Your sanitizer may be poisonous, CBI issues alert for the first time | Oneindia Kannada

ಆದರೆ, ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ಈ ಎರಡು ರಾಜ್ಯಗಳು ಪ್ರಶಂಸೆಗೆ ಪಾತ್ರವಾಗಿದೆ. ಬಿಎಸ್ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರ ಹಾಗೂ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ ಕೊವಿಡ್ ಮಹಾಮಾರಿ ವಿರುದ್ಧ ತಮ್ಮ ರಾಜ್ಯಗಳನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ.

'ಮತ್ತೆ ಲಾಕ್‌ಡೌನ್‌ ಮಾಡಲ್ಲ': 'ಕೊರೊನಾ' ಹಾಟ್‌ಸ್ಪಾಟ್‌ ರಾಜ್ಯಗಳೇ ಹಿಂದೇಟು 'ಮತ್ತೆ ಲಾಕ್‌ಡೌನ್‌ ಮಾಡಲ್ಲ': 'ಕೊರೊನಾ' ಹಾಟ್‌ಸ್ಪಾಟ್‌ ರಾಜ್ಯಗಳೇ ಹಿಂದೇಟು

ಈ ವಿಚಾರಲ್ಲಿ ಕೇರಳ ಮತ್ತು ಕರ್ನಾಟಕ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಎರಡು ರಾಜ್ಯಕ್ಕೂ ನೆರೆರಾಜ್ಯವಾಗಿರುವ ತಮಿಳುನಾಡಿನಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಆಂಧ್ರ ಮತ್ತು ತೆಲಂಗಾಣ ಸ್ಥಿತಿ ಉತ್ತಮ ಎನ್ನಬಹುದು. ಮುಂದೆ ಓದಿ....

ಆಕ್ರಮಣಕಾರಿ ಹೋರಾಟ

ಆಕ್ರಮಣಕಾರಿ ಹೋರಾಟ

ಕಳೆದ 90 ದಿನಗಳಿಂದ ಕೇರಳ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳು ಕೊರೊನಾ ವಿರುದ್ಧದ ಹೋರಾಟದಲ್ಲಿ ಬಹಳ ಆಕ್ರಮಣಕಾರಿಯಾಗಿ ಆಡಳಿತ ಮಾಡಿದೆ. ಇಡೀ ದೇಶ ದೊಡ್ಡ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಸಂದರ್ಭದಲ್ಲಿ ಕೊರೊನಾ ಸೋಂಕು ಹರಡುವಿಕೆಯನ್ನು ತಮ್ಮ ರಾಜ್ಯಗಳಲ್ಲಿ ನಿಯಂತ್ರಿಸುವಲ್ಲಿ ಸಫಲತೆ ಕಂಡಿದೆ. ಉಳಿದ ರಾಜ್ಯಗಳಿಗೆ ಹೋಲಿಸಿಕೊಂಡರೆ ಎರಡೂ ರಾಜ್ಯಗಳು ಉತ್ತಮ ಸ್ಥಿತಿಯಲ್ಲಿದೆ.

ಪರಸ್ಪರ ಚರ್ಚಿಸಿ ಮುಂದೆ ಸಾಗಿದೆ

ಪರಸ್ಪರ ಚರ್ಚಿಸಿ ಮುಂದೆ ಸಾಗಿದೆ

ಸೈದ್ಧಾಂತಿಕವಾಗಿ ವಿರುದ್ಧವಾಗಿರುವ ಬಿಜೆಪಿ ಮತ್ತು ಕಮ್ಯೂನಿಸ್ಟ್ ಸರ್ಕಾರ, ಕೊರೊನಾ ವಿಚಾರದಲ್ಲಿ ಇಬ್ಬರು ಒಗ್ಗಟ್ಟಾಗಿ ಹೆಜ್ಜೆಯಿಟ್ಟಿದ್ದಾರೆ. ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಮತ್ತು ಕೇರಳ ಆರೋಗ್ಯ ಸಚಿವೆ ಶೈಲಜಾ ಟೀಚರ್ ಇಬ್ಬರು ಕೊರೊನಾ ವಿಷಯಕ್ಕೆ ಸಂಬಂಧಿಸಿದಂತೆ ಪರಸ್ಪರ ಚರ್ಚಿಸಿದ್ದರು. ಆಯಾ ರಾಜ್ಯಗಳಲ್ಲಿ ಕೈಗೊಂಡು ಕ್ರಮಗಳ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದರು. ಇದು ಉಭಯ ರಾಜ್ಯಗಳಿಗೂ ಅನುಕೂಲವೂ ಆಗಿದೆ.

'ಭಾರತದಲ್ಲಿ ಸಮುದಾಯಕ್ಕೆ ಹರಡಿದೆ ಕೊರೊನಾ': ಆಘಾತಕಾರಿ ವಿಷಯ ಬಿಚ್ಚಿಟ್ಟ ತಜ್ಞರು'ಭಾರತದಲ್ಲಿ ಸಮುದಾಯಕ್ಕೆ ಹರಡಿದೆ ಕೊರೊನಾ': ಆಘಾತಕಾರಿ ವಿಷಯ ಬಿಚ್ಚಿಟ್ಟ ತಜ್ಞರು

ಉತ್ತಮ ಸ್ಥಿತಿಯಲ್ಲಿ ಬೆಂಗಳೂರು

ಉತ್ತಮ ಸ್ಥಿತಿಯಲ್ಲಿ ಬೆಂಗಳೂರು

ಕೊರೊನಾ ವೈರಸ್ ವಿರುದ್ಧ ಹೋರಾಡುವ ಕರ್ನಾಟಕದ ಪ್ರಯತ್ನಗಳನ್ನು ನೀತಿ ಅಯೋಗ್‌ನ ಸಿಇಒ ಅಮಿತಾಬ್ ಕಾಂತ್ ಶ್ಲಾಘಿಸಿದ್ದಾರೆ. ''ದೇಶದ ಇತರೆ ಮೆಟ್ರೋ ನಗರಗಳಿಗೆ ಹೋಲಿಸಿಕೊಂಡರೆ ಬೆಂಗಳೂರಿನಲ್ಲಿ ಪ್ರಕರಣಗಳು ಬಹಳ ಕಡಿಮೆ. ಕರ್ನಾಟಕದಲ್ಲಿ ಒಬ್ಬ ಸೋಂಕಿತನಿಂದ 47 ಜನ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದೆ. ದೊಡ್ಡ ಪ್ರಮಾಣದಲ್ಲಿ ಕೊರೊನಾ ಪರೀಕ್ಷೆಗಳನ್ನು ಸಹ ಕರ್ನಾಟಕ ಸರ್ಕಾರ ಮಾಡಿದೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊರೊನಾ ವಿರುದ್ಧ ಹೋರಾಟ: ಬೆಂಗಳೂರಿನಿಂದ ಚೆನ್ನೈ ಕಲಿಯಬೇಕಾದ 6 ಸಂಗತಿಕೊರೊನಾ ವಿರುದ್ಧ ಹೋರಾಟ: ಬೆಂಗಳೂರಿನಿಂದ ಚೆನ್ನೈ ಕಲಿಯಬೇಕಾದ 6 ಸಂಗತಿ

ಕರ್ನಾಟಕ ಸಕ್ಸಸ್ ಕಂಡಿದ್ದು ಎಲ್ಲಿ?

ಕರ್ನಾಟಕ ಸಕ್ಸಸ್ ಕಂಡಿದ್ದು ಎಲ್ಲಿ?

ಕೊವಿಡ್ ಹೋರಾಟದಲ್ಲಿ ಕರ್ನಾಟಕ ಯಶಸ್ಸು ಕಾಣಲು ಪ್ರಮುಖ ಕಾರಣವಾಗಿದ್ದು, ಸೋಂಕಿತನ ಸಂಪರ್ಕವನ್ನು ಆಕ್ರಮಣಕಾರಿಯಾಗಿ ಪತ್ತೆ ಹೆಚ್ಚಿದ್ದು, ಅವರನ್ನು ಸೂಕ್ತ ಕ್ರಮಗಳೊಂದಿಗೆ ಕ್ವಾರಂಟೈನ್ ಮಾಡಿದ್ದು ಹಾಗೂ ಹೆಚ್ಚು ಪರೀಕ್ಷೆಗಳನ್ನು ಮಾಡಿದ್ದು. ಮಂಗಳವಾರದ ವೇಳೆಗೆ ಕರ್ನಾಟಕದಲ್ಲಿ 7530 ಕೇಸ್ ದಾಖಲಾಗಿದೆ. 94 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. 4456 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. 2976 ಜನರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೇರಳದಲ್ಲಿ ಮಂಗಳವಾರದ ವರದಿ

ಕೇರಳದಲ್ಲಿ ಮಂಗಳವಾರದ ವರದಿ

ಕೇರಳದಲ್ಲಿ ಮಂಗಳವಾರ 79 ಹೊಸ ಕೇಸ್ ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2623ಕ್ಕೆ ಏರಿದೆ. ಅದರಲ್ಲಿ 1234 ಮಂದಿ ಗುಣಮುಖರಾಗಿದ್ದು, 1367 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ 21 ಜನ ಮಾತ್ರ ಪ್ರಾಣ ಕಳೆದುಕೊಂಡಿದ್ದಾರೆ.

ಯಡಿಯೂರಪ್ಪ ಯಶಸ್ವಿಯಾಗಿದ್ದು ಹೇಗೆ?

ಯಡಿಯೂರಪ್ಪ ಯಶಸ್ವಿಯಾಗಿದ್ದು ಹೇಗೆ?

ಲಾಕ್‌ಡೌನ್ ಘೋಷಿಸುವುದಕ್ಕೆ ಮುಂಚೆಯೇ, ಯಡಿಯೂರಪ್ಪ ಕೊರೊನಾ ವೈರಸ್‌ ವಿರುದ್ಧ ಹೋರಾಡುವ ಯೋಜನೆಗಳನ್ನು ಜಾರಿ ಮಾಡಿದರು. ಆರಂಭಿಕ ಹಂತಕ್ಕೆ ಹಿಡಿತ ಸಾಧಿಸಿದರು. ಒಂದು ಹಂತದಲ್ಲಿ ಕೊರೊನಾಗೆ ಕೋಮು ಬಿಕ್ಕಟ್ಟು ಅಂಟಿಕೊಂಡಿತ್ತು. ಈ ವೇಳೆಯೂ ಬಿಎಸ್ವೈ ಉತ್ತಮವಾಗಿ ನಿಭಾಯಿಸಿದರು. ಯಡಿಯೂರಪ್ಪ ಅವರ ಕೆಲವು ಕ್ರಮಗಳು ಪಕ್ಷದೊಳಗೆ ಮತ್ತು ಹೊರಗೆ ಮೆಚ್ಚುಗೆ ಗಳಿಸಿತು. ಮೊದಲ ದಿನದಿಂದ, ಮಾಧ್ಯಮ ಮತ್ತು ಸಾರ್ವಜನಿಕರೊಂದಿಗೆ ಪ್ರತಿಯೊಂದು ವಿವರಗಳನ್ನು ಹಂಚಿಕೊಳ್ಳುವ ಮೂಲಕ ನಿರ್ವಹಣೆಯನ್ನು ಪಾರದರ್ಶಕವಾಗಿರಿಸಿದರು. ಕೆಳಮಟ್ಟದ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಉತ್ತಮ ಬೆಂಬಲ ನೀಡಿದೆ. ವಲಸೆ ಕಾರ್ಮಿಕರ ವಿಚಾರದಲ್ಲಿ ಟೀಕೆ ಎದುರಿಸಿದರೂ, ನಂತರ ಅದನ್ನು ಉತ್ತಮವಾಗಿ ನಿಭಾಯಿಸಿದರು.

ಕೇರಳ-ಕರ್ನಾಟಕ ಮಾದರಿ

ಕೇರಳ-ಕರ್ನಾಟಕ ಮಾದರಿ

ಕರ್ನಾಟಕ ಮತ್ತು ಕೇರಳ ಉತ್ತಮವಾಗಿ ಕಾರ್ಯನಿರ್ವಹಿಸಿವೆ. ರೋಗದ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಎರಡು ರಾಜ್ಯಗಳು ಯಶಸ್ಸು ಕಂಡಿದೆ ಎನ್ನುವುದನ್ನು ಅಂಕಿಅಂಶಗಳು ಸಾಬೀತುಪಡಿಸುತ್ತವೆ. ಲಾಕ್‌ಡೌನ್‌ ಘೋಷಣೆ ಮಾಡಿದ ಮೊದಲ ಎರಡು ವಾರಗಳಲ್ಲಿ, ಕರ್ನಾಟಕ ಮತ್ತು ಕೇರಳ ರಾಜ್ಯ ಗಡಿ ಬಂದ್ ಮಾಡುವ ಮೂಲಕ ಗೊಂದಲಕ್ಕೆ ಕಾರಣವಾಗಿತ್ತು. ಬಳಿಕ ಎರಡು ರಾಜ್ಯಗಳು ಸಮನ್ವಯ ಕಾಪಾಡಿಕೊಂಡು ಕೊರೊನಾ ವಿರುದ್ಧ ಹೋರಾಡಿದವು.

English summary
Karantaka and kerala is the model states in COVID19 Battle at india. both govt are hailed from experts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X