{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"https://kannada.oneindia.com/news/bengaluru/karnataka-advocates-files-contempt-of-court-against-jayalalithaa-088160.html" }, "headline": "ಜಯಲಲಿತಾ ವಿರುದ್ಧ ನ್ಯಾಯಾಂಗ ನಿಂದನೆ ದೂರು", "url":"https://kannada.oneindia.com/news/bengaluru/karnataka-advocates-files-contempt-of-court-against-jayalalithaa-088160.html", "image": { "@type": "ImageObject", "url": "http://kannada.oneindia.com/img/1200x60x675/2014/10/07-amma-poster-600.jpg", "width": "1200", "height":"675" }, "thumbnailUrl":"http://kannada.oneindia.com/img/128x50/2014/10/07-amma-poster-600.jpg", "datePublished": "2014-10-07T12:05:39+05:30", "dateModified": "2014-10-07T13:39:52+05:30", "author": { "@type": "Person", "name": "Mahesh" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Bangalore", "description": "Karnataka senior advocate team today filed a contempt of the court petition in High court against Jayalalitha, as AIADMK men staging protest against justice Kunha who delivered verdict against Jayalalithaa in the asset case on Sept 27.", "keywords": "Karnataka Advocates Team Files Contempt of the Court Against Jayalalithaa, ಜಯಲಲಿತಾ ವಿರುದ್ಧ ನ್ಯಾಯಾಂಗ ನಿಂದನೆ ದೂರು", "articleBody":"ಬೆಂಗಳೂರು, ಅ.7: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಜೈಲಾ? ಬೈಲಾ? ಎಂಬ ಪ್ರಶ್ನೆಗೆ ಉತ್ತರ ಸಿಗುವ ಮೊದಲೇ ಮತ್ತೊಂದು ಕೇಸ್ ಕೋಮಲವಲ್ಲಿ ಮೇಡಂ ಮೇಲೆ ಬೀಳುವ ಎಲ್ಲಾ ಸಾಧ್ಯತೆಗಳು ಕಂಡು ಬಂದಿದೆ. ನ್ಯಾ. ಮೈಕಲ್ ಕುನ್ಹಾ ವಿರುದ್ಧ ಜಯಾ ಬೆಂಬಲಿಗರು ಪ್ರತಿಭಟನೆ ನಡೆಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕದ ವಕೀಲರು ಈ ಬಗ್ಗೆ ಸುಪ್ರೀಂಕೋರ್ಟಿನಲ್ಲಿ ದೂರು ಸಲ್ಲಿಸಿದ್ದಾರೆ.ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ ಅವರು ಅಪರಾಧಿ ಎಂದು ಘೋಷಿದ ಸಿಬಿಐ ವಿಶೇಷ ನ್ಯಾಯಾಧೀಶ ಮಂಗಳೂರು ಮೂಲದ ಮೈಕಲ್ ಜಾನ್ ಕುನ್ಹಾ ಅವರ ವಿರುದ್ಧ ಎಐಎಡಿಎಂಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿರುವುದನ್ನು ಕರ್ನಾಟಕ ಬಾರ್ ಅಸೋಸಿಯೇಷನ್ ತೀವ್ರವಾಗಿ ಖಂಡಿಸಿದೆ.ಕರ್ನಾಟಕದ ಹಿರಿಯ ನ್ಯಾಯವಾದಿಗಳಾದ ಧರ್ಮಪಾಲ, ಮುಖರ್ಜಿ ಹಾಗೂ ರವಿವರ್ಮಾ ಕುಮಾರ್ ಅವರು ಡಿಫೆನ್ಸ್ ವಕೀಲ ತಂಡವನ್ನು ಈ ಬಗ್ಗೆ ಸಲಹೆ ಕೇಳಿದೆ. ಅಡ್ವೋಕೇಟ್ ಜನರಲ್ ಈ ಬಗ್ಗೆ ಪರಿಶೀಲನೆ ನೀಡಿದ ನಂತರ ಪಿಟೀಷನ್ ಹಾಕಲು ನಿರ್ಧಾರ ಕೈಗೊಂಡಿದ್ದಾರೆ.ಯಾರ ಮೇಲೆ ದೂರು?: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ, ವೆಲ್ಲೂರು ಮೇಯರ್, ಜಯಾ ಟಿವಿ ಎಂಡಿ ಹಾಗೂ ಎಐಎಡಿಎಂಕೆ ಪ್ರಮುಖ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹೊರೆಸಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದೆ. ಜಯಾ ಜಾಮೀನು ಅರ್ಜಿ ವಿಚಾರಣೆಮಿತಿ ಮೀರಿದ ಪ್ರತಿಭಟನೆ: ಜಯಲಲಿತಾ ಅವರ ಅಭಿಮಾನಿಗಳ ಪ್ರತಿಭಟನೆಯ ಪರಾಕಾಷ್ಠೆಯನ್ನು ಕಾಣುವ ದೌರ್ಭಾಗ್ಯ ಬೆಂಗಳೂರಿಗೆ ಲಭಿಸಿದೆ. ಕೆಲವರು ಆತ್ಮಹತ್ಯೆ ಮಾಡಿಕೊಂಡರು, ಮತ್ತೆ ಕೆಲವರು ಜಯಾ ಬಿಡುಗಡೆಗಾಗಿ ಪೂಜೆ, ಹೋಮ-ಹವನಗಳನ್ನು ಮಾಡಿದರು. ತಮಿಳುನಾಡಿನಾದ್ಯಂತ ಪ್ರತಿಭಟನೆಗಳು ನಡೆದವು. ಏನು ಮಾಡಿದರೇನು ಕಾನೂನು ಮಾತ್ರ ಎಲ್ಲರಿಗೂ ಒಂದೇ ಪ್ರತಿಭಟನೆ, ವಿರೋಧ, ಖಂಡನೆಗೆ ಕಾನೂನು ಬಗ್ಗುವುದಿಲ್ಲ ಎಂದು ವಕೀಲರ ಸಂಘ ಹೇಳಿದೆ.ಸೆ.27ರಂದು ಜಯಾ ಮೇಲಿನ ಆರೋಪ ಸಾಬೀತಾಗಿ ಪರಪ್ಪನ ಅಗ್ರಹಾರದ ಸಿಬಿಐ ವಿಶೇಷ ನ್ಯಾಯಾಲಯದ ಶಿಕ್ಷೆ ಪ್ರಕಟಿಸಿತ್ತು. ಬೆಂಗಳೂರಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಾನ್& zwnj ಮೈಕಲ್& zwnj ಕುನ್ಹಾ ಅವರು ಜಯಲಲಿತಾ, ಶಶಿಕಲಾ, ಇಳವರಸಿ, ದಿನಕರನ್ ಅವರ ವಿರುದ್ದ ಮಾಡಲಾಗಿರುವ ಆರೋಪ ಭ್ರಷ್ಟಾಚಾರ ತಡೆ ಖಾಯ್ದೆ ಸೆಕ್ಷನ್& zwnj 13(1)ಇ ಅಡಿ ಸಾಬೀತಾಗಿದೆ ಎಂದು ತೀರ್ಪು ಘೋಷಿಸಿದರು. ಬೇಲ್ ಸಿಗದಿದ್ದರೆ ಕನ್ನಡಿಗರ ದಿಗ್ಬಂಧನ?ನಂತರ 29ರಂದು ಹೈಕೋರ್ಟ್ ರಜಾ ಕಾಲದ ಪೀಠದ ಮುಂದೆ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಾಧೀಶರಾದ ಜೆ.ರತ್ನಕಲಾ ಅವರು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಸರ್ಕಾರಿ ಅಭಿಯೋಜಕರ ನೇಮಕಾತಿ ಗೊಂದಲದ ಹಿನ್ನಲೆಯಲ್ಲಿ ಅ.6ಕ್ಕೆ ಮುಂದೂಡಿದ್ದರು." }
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯಲಲಿತಾ ವಿರುದ್ಧ ನ್ಯಾಯಾಂಗ ನಿಂದನೆ ದೂರು

By Mahesh
|
Google Oneindia Kannada News

ಬೆಂಗಳೂರು, ಅ.7: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಜೈಲಾ? ಬೈಲಾ? ಎಂಬ ಪ್ರಶ್ನೆಗೆ ಉತ್ತರ ಸಿಗುವ ಮೊದಲೇ ಮತ್ತೊಂದು ಕೇಸ್ 'ಕೋಮಲವಲ್ಲಿ' ಮೇಡಂ ಮೇಲೆ ಬೀಳುವ ಎಲ್ಲಾ ಸಾಧ್ಯತೆಗಳು ಕಂಡು ಬಂದಿದೆ. ನ್ಯಾ. ಮೈಕಲ್ ಕುನ್ಹಾ ವಿರುದ್ಧ ಜಯಾ ಬೆಂಬಲಿಗರು ಪ್ರತಿಭಟನೆ ನಡೆಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕದ ವಕೀಲರು ಈ ಬಗ್ಗೆ ಸುಪ್ರೀಂಕೋರ್ಟಿನಲ್ಲಿ ದೂರು ಸಲ್ಲಿಸಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ ಅವರು ಅಪರಾಧಿ ಎಂದು ಘೋಷಿದ ಸಿಬಿಐ ವಿಶೇಷ ನ್ಯಾಯಾಧೀಶ ಮಂಗಳೂರು ಮೂಲದ ಮೈಕಲ್ ಜಾನ್ ಕುನ್ಹಾ ಅವರ ವಿರುದ್ಧ ಎಐಎಡಿಎಂಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿರುವುದನ್ನು ಕರ್ನಾಟಕ ಬಾರ್ ಅಸೋಸಿಯೇಷನ್ ತೀವ್ರವಾಗಿ ಖಂಡಿಸಿದೆ.

ಕರ್ನಾಟಕದ ಹಿರಿಯ ನ್ಯಾಯವಾದಿಗಳಾದ ಧರ್ಮಪಾಲ, ಮುಖರ್ಜಿ ಹಾಗೂ ರವಿವರ್ಮಾ ಕುಮಾರ್ ಅವರು ಡಿಫೆನ್ಸ್ ವಕೀಲ ತಂಡವನ್ನು ಈ ಬಗ್ಗೆ ಸಲಹೆ ಕೇಳಿದೆ. ಅಡ್ವೋಕೇಟ್ ಜನರಲ್ ಈ ಬಗ್ಗೆ ಪರಿಶೀಲನೆ ನೀಡಿದ ನಂತರ ಪಿಟೀಷನ್ ಹಾಕಲು ನಿರ್ಧಾರ ಕೈಗೊಂಡಿದ್ದಾರೆ.

ಯಾರ ಮೇಲೆ ದೂರು?: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ, ವೆಲ್ಲೂರು ಮೇಯರ್, ಜಯಾ ಟಿವಿ ಎಂಡಿ ಹಾಗೂ ಎಐಎಡಿಎಂಕೆ ಪ್ರಮುಖ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹೊರೆಸಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದೆ. [ಜಯಾ ಜಾಮೀನು ಅರ್ಜಿ ವಿಚಾರಣೆ]

Karnataka Advocates Team Files Contempt of the Court Against Jayalalithaa

ಮಿತಿ ಮೀರಿದ ಪ್ರತಿಭಟನೆ: ಜಯಲಲಿತಾ ಅವರ ಅಭಿಮಾನಿಗಳ ಪ್ರತಿಭಟನೆಯ ಪರಾಕಾಷ್ಠೆಯನ್ನು ಕಾಣುವ ದೌರ್ಭಾಗ್ಯ ಬೆಂಗಳೂರಿಗೆ ಲಭಿಸಿದೆ. ಕೆಲವರು ಆತ್ಮಹತ್ಯೆ ಮಾಡಿಕೊಂಡರು, ಮತ್ತೆ ಕೆಲವರು ಜಯಾ ಬಿಡುಗಡೆಗಾಗಿ ಪೂಜೆ, ಹೋಮ-ಹವನಗಳನ್ನು ಮಾಡಿದರು. ತಮಿಳುನಾಡಿನಾದ್ಯಂತ ಪ್ರತಿಭಟನೆಗಳು ನಡೆದವು. ಏನು ಮಾಡಿದರೇನು ಕಾನೂನು ಮಾತ್ರ ಎಲ್ಲರಿಗೂ ಒಂದೇ ಪ್ರತಿಭಟನೆ, ವಿರೋಧ, ಖಂಡನೆಗೆ ಕಾನೂನು ಬಗ್ಗುವುದಿಲ್ಲ ಎಂದು ವಕೀಲರ ಸಂಘ ಹೇಳಿದೆ.

ಸೆ.27ರಂದು ಜಯಾ ಮೇಲಿನ ಆರೋಪ ಸಾಬೀತಾಗಿ ಪರಪ್ಪನ ಅಗ್ರಹಾರದ ಸಿಬಿಐ ವಿಶೇಷ ನ್ಯಾಯಾಲಯದ ಶಿಕ್ಷೆ ಪ್ರಕಟಿಸಿತ್ತು. ಬೆಂಗಳೂರಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಾನ್‌ ಮೈಕಲ್‌ ಕುನ್ಹಾ ಅವರು ಜಯಲಲಿತಾ, ಶಶಿಕಲಾ, ಇಳವರಸಿ, ದಿನಕರನ್ ಅವರ ವಿರುದ್ದ ಮಾಡಲಾಗಿರುವ ಆರೋಪ ಭ್ರಷ್ಟಾಚಾರ ತಡೆ ಖಾಯ್ದೆ ಸೆಕ್ಷನ್‌ 13(1)ಇ ಅಡಿ ಸಾಬೀತಾಗಿದೆ ಎಂದು ತೀರ್ಪು ಘೋಷಿಸಿದರು. [ಬೇಲ್ ಸಿಗದಿದ್ದರೆ ಕನ್ನಡಿಗರ ದಿಗ್ಬಂಧನ?]

ನಂತರ 29ರಂದು ಹೈಕೋರ್ಟ್ ರಜಾ ಕಾಲದ ಪೀಠದ ಮುಂದೆ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಾಧೀಶರಾದ ಜೆ.ರತ್ನಕಲಾ ಅವರು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಸರ್ಕಾರಿ ಅಭಿಯೋಜಕರ ನೇಮಕಾತಿ ಗೊಂದಲದ ಹಿನ್ನಲೆಯಲ್ಲಿ ಅ.6ಕ್ಕೆ ಮುಂದೂಡಿದ್ದರು.

English summary
Karnataka senior advocate Dharmapal and team today(Oct.7) filed a contempt of the court petition in High court against Jayalalitha, as AIADMK men staging protest against justice Kunha who delivered verdict against Jayalalithaa in the asset case on Sept 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X