ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭೂ ತಿದ್ದುಪಡಿ ವಿಧೇಯಕದ ಹಿಂದೆ ಭೂ ಮಾಫಿಯಾ ಕೈವಾಡ; ಆರೋಪ

|
Google Oneindia Kannada News

ಬೆಂಗಳೂರು ಮಾರ್ಚ್ 3; ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ವಿಧೇಯಕ 2020 ಸರ್ಕಾರ ವಿಧಾನಸಭೆಯಲ್ಲಿ ತರಾತುರಿಯಲ್ಲಿ ಮಂಡಿಸಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಸದನವು ಗೊಂದಲದಲ್ಲಿ ಮುಳುಗಿರುವಾಗ, ಪ್ರತಿಪಕ್ಷಗಳು ಧರಣಿಯಲ್ಲಿ ತೊಡಗಿರುವಾಗ, ಚರ್ಚೆಗಳನ್ನು ಮಾಡದೇ ಇರುವ ವಾತಾವರಣದಲ್ಲಿ ಆತುರಾತುರವಾಗಿ ವಿಧೇಯಕ ಮಂಡನೆಯಾಗಿರುವುದರ ಹಿಂದೆ ಭೂಮಾಫಿಯಾಗಳ, ಭೂಗಳ್ಳರ ಕೈವಾಡವಿರುವುದು ಖಚಿತ ಎಂದು ಅವರು ಹೇಳಿದ್ದಾರೆ.

ಎಎಪಿ ಗೆಲುವು: ದೆಹಲಿಯಲ್ಲಿ ಬಿರಿಯಾನಿ ವ್ಯಾಪಾರ ಜೋರುಎಎಪಿ ಗೆಲುವು: ದೆಹಲಿಯಲ್ಲಿ ಬಿರಿಯಾನಿ ವ್ಯಾಪಾರ ಜೋರು

ಈಗಿನ ವಿದ್ಯಮಾನವನ್ನು ಗಮನಿಸಿದರೆ ಯಡಿಯೂರಪ್ಪನವರ ಈ ಹಿಂದಿನ ಸರ್ಕಾರದಲ್ಲಿ ನೋಟಿಫಿಕೇಷನ್, ಡಿನೋಟಿಫಿಕೇಷನ್, ಕೆಐಎಡಿಬಿ, ಬಿಡಿಎ ಇನ್ನೂ ಮುಂತಾದ ಭೂ ಅವ್ಯವಹಾರಗಳು ಭೂ ಮಾಫಿಯಾಗಳಿಗೆ ನೆರವು ನೀಡುವಂತಹ ಚಟುವಟಿಕೆಗಳನ್ನು ಈಗಿನ ಸರ್ಕಾರದಲ್ಲೂ ಸಹ ಯಡಿಯೂರಪ್ಪನವರು ಕ್ರಮೇಣ ಪ್ರಾರಂಭ ಮಾಡುತ್ತಿರುವ ಬಗ್ಗೆ ಮನವರಿಕೆ ಆಗುತ್ತಿದೆ ಎಂದು ಹೇಳಿದ್ದಾರೆ.

Karnataka AAP Party Leaders Attacks On BJP Government

ಇದೇ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷವು ಕೈಗಾರಿಕೆಗಳನ್ನು ಸ್ಥಾಪಿಸುವ ಈ ಕಾಯ್ದೆಯ ಅಡಿಯಲ್ಲಿ ಎಷ್ಟು ಶಾಸಕರುಗಳಿಗೆ ಮಾಜಿ ಶಾಸಕರುಗಳಿಗೆ ಮಂತ್ರಿ ಮಾಜಿ ಮಂತ್ರಿ ಮಹೋದಯರು ಗಳಿಗೆ ಹಾಗೂ ರಾಜಕೀಯ ಮಂಜೂರು ಮಾಡಿರುವ ಮಾಹಿತಿಯನ್ನು ಈ ಕೂಡಲೇ ರಾಜ್ಯದ ಜನತೆಗೆ ತಿಳಿಸಬೇಕೆಂದು ಆಗ್ರಹಿಸುತ್ತದೆ. ಈ ಜನವಿರೋಧಿ ಕಾನೂನನ್ನು ಸರ್ಕಾರವು ಹಿಂಪಡೆಯದಿದ್ದಲ್ಲಿ ಆಮ್ ಆದ್ಮಿ ಪಕ್ಷವು ರಾಜ್ಯದಾದ್ಯಂತ ಉಗ್ರ ಪ್ರತಿಭಟನೆಯನ್ನು ಮಾಡುವುದರ ಮೂಲಕ ರಾಜ್ಯದ ಜನತೆಗೆ ಈ ವಿಷಯವನ್ನು ತಿಳಿಸಲಾಗುವುದೆಂದು ಈ ಮೂಲಕ ಎಚ್ಚರಿಕೆ ನೀಡುತ್ತಿದೆ ಇದರ ವಿರುದ್ಧ ಕಾನೂನು ಸಮರವನ್ನು ಸಹ ಸಾರುತ್ತದೆ ಎಚ್ಚರಿಕೆಯನ್ನು ಪಕ್ಷವು ನೀಡುತ್ತದೆ ಎಂದು ಹೇಳಿದ್ದಾರೆ.

English summary
Karnataka AAP Party Leaders Attacks On BJP Government in press meet at bengaluru. about land mafia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X