ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಇಟಿ ಪರೀಕ್ಷೆ ಮುಗಿದ ಬಳಿಕವಷ್ಟೇ ದ್ವಿತೀಯ ಪಿಯುಸಿ ಫಲಿತಾಂಶ

|
Google Oneindia Kannada News

ಬೆಂಗಳೂರು, ಜನವರಿ 17: ಸಿಇಟಿ ಪರೀಕ್ಷೆ ಮುಗಿದ ಬಳಿಕವಷ್ಟೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಮಾಡಲಾಗುವುದು ಎಂದು ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಇಷ್ಟು ವರ್ಷ ದ್ವಿತೀಯ ಪಿಯುಸಿ ಫಲಿತಾಂಶ ಬಂದ ಬಳಿಕವಷ್ಟೇ ಸಿಇಟಿ ಪರೀಕ್ಷೆಯನ್ನು ಘೋಷಣೆ ಮಾಡುತ್ತಿದ್ದರು. ದ್ವಿತೀಯ ಪಿಯುಸಿ ಫಲಿತಾಂಶ ನೋಡಿ ಸಿಇಟಿ ಬರೆಯಬೇಕೋ ಬೇಡವೋ ಎಂದು ವಿದ್ಯಾರ್ಥಿಗಳು ನಿರ್ಧರಿಸುತ್ತಿದ್ದವು.

ಪ್ರಸಕ್ತ ಸಾಲಿನ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಮೊಬೈಲ್‌ ಬ್ಯಾನ್‌ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Karnataka 2nd PUC Result 2020 Declared After CET Exam

ಮೂಲಗಳ ಪ್ರಕಾರ 2,46,772 ವಿದ್ಯಾರ್ಥಿಗಳು 1,016 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ಬರೆಯಲಿದ್ದಾರೆ. 1,014 ಕೇಂದ್ರಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ. ಜನವರಿ 25 ರಿಂದ ಫೆಬ್ರವರಿ 10 ರವರೆಗೆ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ.

ಈ ಮೊದಲೇ ತಿಳಿಸಿದಂತೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ 40 ಪುಟಗಳ ಉತ್ತರ ಪತ್ರಿಕೆ ಬುಕ್‌ಲೆಟ್‌ ನೀಡಲಾಗುತ್ತದೆ. ಈ ಹಿಂದೆ 24 ಪುಟಗಳ ಉತ್ತರ ಪತ್ರಿಕೆ ನೀಡಿ, ನಂತರ ಹೆಚ್ಚುವರಿ ಶೀಟ್‌ಗಳನ್ನು ನೀಡಲಾಗುತ್ತಿತ್ತು. ಈ ವಿಧಾನದಿಂದ ಅಡಿಷನಲ್ ಉತ್ತರ ಹಾಳೆಗಳು ಕೆಲವು ವೇಳೆ ಕಳೆದುಹೋಗುವ ಅವಕಾಶ ಇತ್ತು.

ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಅಡ್ಮಿಟ್‌ ಕಾರ್ಡ್ ಜನವರಿ 17 ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಡಿಸೆಂಬರ್ 26, 2019 ರಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.

English summary
No mobile phones are allowed in 2nd PU examination centres this year. A meeting done by primary and secondary education minister S Suresh Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X