ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಲುಕ್ಯರ ‌ಅಜೇಯ ಸೇನೆ ''ಕರ್ಣಾಟ ಬಲ'' ವೆಬ್ಸೈಟ್ ಲೋಕಾರ್ಪಣೆ

|
Google Oneindia Kannada News

ವೈಭವೋಪೇತ ಅಲಂಕಾರ, ಸವಲತ್ತುಗಳ ಅರಮನೆ ನಿಮ್ಮದು ಇಲ್ಲೇ ಇದ್ದುಕೊಂಡು ಇದನ್ನ ಬಳಸುತ್ತಾ ಇರುತ್ತೀರಿ ಅಂದರೆ ಅರಮನೆ ‌ನಿಮ್ಮದು ಅಂತ ಅಂದರೂ ಅದರ ಸವಲತ್ತು, ವೈಭವಗಳ ಅರಿಯದೆ ಹಳೆಯದು ಅರಮನೆಯಂತ 30*40 ವಿಸ್ತೀರ್ಣದ ನಾವೇ ಕಟ್ಕೊಂಡ ಮನೆಯೆ ಶ್ರೇಷ್ಠ ಅಂತ ನಾವೇ ಕಟ್ಕೊಂಡ‌ ಮನೆಯಲ್ಲಿ ಬದುಕಿದರೆ ಅದು ಅರಮನೆಯ ತಪ್ಪಲ್ಲ. ಅದರ ಬಗ್ಗೆ ಸರಿಯಾಗಿ ತಿಳಿಯದಿರುವುದು ಬಳಸದ ಜನರ ಮೂಢತನ. ಇಂತಹ ಅರಮನೆ ವೈಭವ, ಸವಲತ್ತುಗಳ ಭಾಷೆ ಕನ್ನಡ, ಆದರೆ ಕನ್ನಡದಲ್ಲಿರುವ ಭಾಷಾ ಸವಲತ್ತುಗಳು, ಶ್ರಿಮಂತಿಕೆ ತುಂಬಾ ಜನಕ್ಕೆ ಗೊತ್ತಿಲ್ಲದಿರುವುದು ವಿಪರ್ಯಾಸ.

ಈ ಮೂಢತನ ಹೋಗಲಾಡಿಸಲು ಹಾಗೂ ಭಾಷೆಯ ಉಳಿಸಲು‌ ಟೊಂಕಕಟ್ಟಿ‌‌ ನಿಲ್ತಾ ಇದ್ದಾರೆ "ಕರ್ಣಾಟ ಬಲ" ತಂಡದವರು. ಚಾಲುಕ್ಯರ ‌ಅಜೇಯ ಸೇನೆಯ ಹೆಸರಿಟ್ಟುಕೊಂಡಿದ್ದಾರೆ.ಕನ್ನಡ ಭಾಷೆಗಾಗಿ ಶ್ರಮಿಸಲು ‌ಒಗ್ಗೂಡಿ‌ ನಿಂತಿದ್ದಾರೆ.

Karnatabala new Website to promote Karnataka culture and language

ಕನ್ನಡ ರಾಜ್ಯೋತ್ಸವದ ಶುಭದಿನದಿಂದು ಕೆಂಗಲ್ ಹನುಮಂತಯ್ಯ ಕಲಾಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಎಂ.ರಾಜಶೇಖರ್ ಕರ್ಣಾಟ ಬಲ ಯೂಟೂಬ್ ಚಾನೆಲ್,ಲಾಂಛನ ಮತ್ತು ವೆಬ್ ಸೈಟ್ ಲೋಕಾರ್ಪಣೆಗೊಳಿಸಿದರು.

ಭವಿಷ್ಯದ ಕನ್ನಡ ತಂತ್ರಜ್ಞಾನದ ಜೊತೆಗೆ ಬೆಳೆಯಬೇಕೆಂದು, ಕನ್ನಡ ಭಾಷೆ ‌ಬಳಕೆ ಅಭಿಮಾನದಿಂದ ಇರಬೇಕೆ ಹೊರತು ತೋರಿಕೆಗಾಗಿ ಅಲ್ಲ ಎಂದು ಹೇಳುತ್ತಾ "ನಿರಂತರ ಕನ್ನಡ ಕಲಿಕೆ ನಿರಂತರ ಕನ್ನಡ ಬಳಕೆ ನನ್ನ ಕಾಯಕ" ಎಂಬ ತತ್ವವನ್ನು ಪ್ರತಿಯೊಬ್ಬ ಕನ್ನಡಿಗರು ಜೀವನದಲ್ಲಿ ಅಳವಡಿಸಿ ಕೊಂಡು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು‌ ಎಂದು ಕರ್ನಾಟಕ‌ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು ಮಾತಾಡಿ ಹಾರೈಸಿದರು.

Karnatabala new Website to promote Karnataka culture and language

ಕ.ಸಾ.ಪ‌ ಅಧ್ಯಕ್ಷ ಡಾ.ಮನು ಬಳಿಗಾರ್ ಮಾತಾಡಿ ನಾಡಿನ ಸಾಹಿತ್ಯ, ಸಂಸ್ಕೃತಿ ಸಂಪದ್ಭರಿತವಾದದ್ದು. ಇತಿಹಾಸ ಹೆಕ್ಕಿ ತೆಗೆದು ನಾಡಿನ ಜನತೆಗೆ ಉಪಯುಕ್ತವಾಗುವ ಕೆಲಸ ಮಾಡುತ್ತಿರುವ ಕರ್ಣಾಟ ಬಲ ತಂಡಕ್ಕೆ ಎಲ್ಲರು ಬೆಂಬಲಕೊಡಬೇಕೆಂದರು.

Karnatabala new Website to promote Karnataka culture and language

ನಟ, ನಿರ್ದೇಶಕ ಸುರೇಶ ಹೆಬ್ಳೀಕರ್ ಮತ್ತು ಶೇಷಾದ್ರಿಪುರಂ‌ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಹೆಚ್. ಎಸ್. ಅನುಪಮಾ ಸಹ ತಂಡಕ್ಕೆ ಹಾರೈಸಿದರು. ಚಿತ್ರ ಸಾಹಿತಿ ಡಾ||ವಿ.ನಾಗೇಂದ್ರ ಪ್ರಸಾದ ಉಪಸ್ಥಿತರಿದ್ದರು.

ಕರ್ಣಾಟ ಬಲದ ಅಧ್ಯಕ್ಷರಾದ ಭುವನೇಶ್ ಮತ್ತು ‌ತಂಡದವರು ದಿವ್ಯ ಆಲೂರವರ ನಿರೂಪಣೆಯಲ್ಲಿ‌ಕಾರ್ಯಕ್ರಮ ನಡೆಯಿಸಿಕೊಟ್ಟರು. ಕರ್ಣಾಟ ಬಲದ ‌‌‌ಆಗಮನದಿಂದ ಚಾಲುಕ್ಯೆ ಸೇನೆಯ ಬಲ ‌‌ಕನ್ನಡಕ್ಕೆ ಬಂದಂತಾಗಿದೆ.

English summary
Karnatabala new Website, logo and Youtube is launched at KH Kala soudha by IFS officer M Rajashekhar on the occasion of Kannada Rajyotsava to promote Karnataka culture and language.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X