ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಶನಿವಾರ 8818 ಕೊರೊನಾ ವೈರಸ್ ಪ್ರಕರಣ ಪತ್ತೆ, 6,629 ಮಂದಿ ಡಿಸ್ಚಾರ್ಜ್

|
Google Oneindia Kannada News

ಬೆಂಗಳೂರು, ಆಗಸ್ಟ್ 15: ರಾಜ್ಯದಲ್ಲಿ ಒಟ್ಟು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಶನಿವಾರ 2,19,926ಕ್ಕೆ ಏರಿದೆ. ಶನಿವಾರದಂದು ಒಟ್ಟು 8,818 ಹೊಸ ಪ್ರಕರಣಗಳು ವರದಿಯಾಗಿವೆ. ಒಂದೇ ದಿನ 114 ಮಂದಿ ಬಲಿಯಾಗಿದ್ದಾರೆ.

ಹಾಗೆಯೇ ಚೇತರಿಕೆ ಪ್ರಮಾಣದಲ್ಲಿಯೂ ಗಣನೀಯ ಏರಿಕೆಯಾಗಿದೆ. ಒಂದು ದಿನ 6,629 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 81,276 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ ಒಟ್ಟು 3,831 ಮಂದಿ ರಾಜ್ಯದಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ. 716 ಮಂದಿ ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಕೊರೊನಾ ವೈರಸ್ ಸೋಂಕು ಇದ್ದರೂ ಅನ್ಯ ಕಾರಣಕ್ಕೆ ಎಂಟು ಮಂದಿ ಜೀವ ಕಳೆದುಕೊಂಡಿದ್ದಾರೆ.

ಹಾಗೆಯೇ ಒಂದು ಒಟ್ಟು 25,731 ಮಂದಿಯನ್ನು ಕೊರೊನಾ ವೈರಸ್ ಆಂಟಿಜೆನ್ ಪರೀಕ್ಷೆಗೆ ಒಳಪಡಿಸಲಾಗಿದೆ. ಒಟ್ಟು 54,806 ಮಂದಿ ಇಂದು ತಪಾಸಣೆಗೆ ಒಳಪಟ್ಟಿದ್ದಾರೆ.

Karnakata Records 8818 New Cases And 114 Death Of Coronavirus

ಬೆಂಗಳೂರು ನಗರದಲ್ಲಿ 3,495 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 87,680ಕ್ಕೆ ಏರಿಕೆಯಾಗಿದೆ. 35 ಮಂದಿ ಬೆಂಗಳೂರು ನಗರವೊಂದರಲ್ಲಿಯೇ ಮೃತಪಟ್ಟಿದ್ದಾರೆ. 2034 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನಂತರದ ಸ್ಥಾನದಲ್ಲಿ ಬಳ್ಳಾರಿ ಇದ್ದು, ಇಂದು 759 ಮಂದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ವರದಿ ಬಂದಿದೆ. ಮೈಸೂರಿನಲ್ಲಿ 635, ಬೆಳಗಾವಿ 358, ದಾವಣಗೆರೆ 327, ದಕ್ಷಿಣ ಕನ್ನಡ 271, ಉಡುಪಿ 241, ಧಾರವಾಡ 239, ವಿಜಯಪುರದಲ್ಲಿ 232 ಪ್ರಕರಣಗಳು ವರದಿಯಾಗಿವೆ.

ಮೈಸೂರಿನಲ್ಲಿ ಹತ್ತು ಮಂದಿ ಒಂದು ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಬಳ್ಳಾರಿ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ ಆರು ಮಂದಿ ಸತ್ತಿದ್ದಾರೆ. ಬಳ್ಳಾರಿಯಲ್ಲಿ 556, ಕೊಪ್ಪಳ 405, ಬೆಳಗಾವಿ 404, ದಾವಣಗೆರೆ 267 ಮಂದಿ ಬಿಡುಗಡೆಯಾಗಿದ್ದಾರೆ.

English summary
Karnataka has recorded 8,818 new coronavirus cases on August 15 and 114 deaths. 6624 people have discharged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X