ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರವೇ ಕಾರ್ಯಕರ್ತರು ಪೊಲೀಸರಿಗೆ ಶರಣು: ಪ್ರತಿಭಟನೆ ಕೈಬಿಟ್ಟ ವೈದ್ಯರು

|
Google Oneindia Kannada News

ಬೆಂಗಳೂರು, ನವೆಂಬರ್ 8: ಮಿಂಟೋ ಆಸ್ಪತ್ರೆ ವೈದ್ಯರ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಿಯ ವೈದ್ಯರು ಹಮ್ಮಿಕೊಂಡಿದ್ದ ಮುಷ್ಕರವನ್ನು ಹಿಂಪಡೆಯಲಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆಯ 13 ಕಾರ್ಯಕರ್ತರು ಪೊಲೀಸರಿಗೆ ಶರಣಾಗಿರುವ ಕಾರಣ ಪ್ರತಿಭಟನೆ ಹಿಂಪಡೆಯುತ್ತಿದ್ದೇವೆ ಎಂದು ಬಿಎಂಸಿಎ ಡೀನ್ ಡಾ. ಜಯಂತಿ ತಿಳಿಸಿದ್ದಾರೆ.

ಕರವೇ ಕಾರ್ಯಕರ್ತೆ ಅಶ್ವಿನಿ ಗೌಡ ಸೇರಿ 13 ಮಂದಿ ಪೊಲೀಸರಿಗೆ ಶರಣುಕರವೇ ಕಾರ್ಯಕರ್ತೆ ಅಶ್ವಿನಿ ಗೌಡ ಸೇರಿ 13 ಮಂದಿ ಪೊಲೀಸರಿಗೆ ಶರಣು

Recommended Video

ಡಿಕೆಶಿ ಬಂಧನ ಖಂಡನೆ ಹೋರಾಟಕ್ಕೂ ಕರವೇಗೂ ಸಂಬಂಧವಿಲ್ಲ | Oneindia Kannada

ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅನೇಕ ರೋಗಿಗಳು ಕಣ್ಣು ಕಳೆದುಕೊಂಡಿದ್ದಾರೆ ಎಂದು ಆರೋಪಿಸಿ ಕರವೇ ಕಾರ್ಯಕರ್ತರು ಮಿಂಟೋ ಆಸ್ಪತ್ರೆಗೆ ನುಗ್ಗಿದ್ದರು. ಆ ಸಂದರ್ಭದಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವೈದ್ಯರು ವಿವಿಪುರಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

Karave Activists Surrender Doctors Strike Called Off

ನಾವು ವೈದ್ಯರ ಮುಷ್ಕರಕ್ಕೆ ಹೆದರಿ ಶರಣಾಗುತ್ತಿಲ್ಲ, ಆದರೆ ರೋಗಿಗಳ ಹಿತದೃಷ್ಟಿಯಿಂದ ಶರಣಾಗುತ್ತಿದ್ದೇವೆ ಎಂದು ಕರವೇ ಕಾರ್ಯಕರ್ತರು ತಿಳಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತೆ ಅಶ್ವಿನಿ ಗೌಡ ಜೊತೆ 13 ಮಂದಿ ಪೊಲೀಸರಿಗೆ ಶರಣಾಗಿದ್ದಾರೆ.

ಇದೀಗ ಕರವೇ ಕಾರ್ಯಕರ್ತರು ಪೊಲೀಸರಿಗೆ ಶರಣಾಗಿರುವ ಕಾರಣ ವೈದ್ಯರು ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ.

English summary
The out-patient department (OPDs) services in private hospitals across the state affected for a few hours on Friday now Karave Activists Surrendered to police So Doctors Called Off Protest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X