ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರವೇ ಕಾರ್ಯಕರ್ತೆ ಅಶ್ವಿನಿ ಗೌಡ ಸೇರಿ 13 ಮಂದಿ ಪೊಲೀಸರಿಗೆ ಶರಣು

|
Google Oneindia Kannada News

ಬೆಂಗಳೂರು, ನವೆಂಬರ್ 8: ಮಿಂಟೋ ಆಸ್ಪತ್ರೆ ವೈದ್ಯರ ಮೇಲಿನ ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ಕರವೇ ಕಾರ್ಯಕರ್ತರು ಪೊಲೀಸರಿಗೆ ಶರಣಾಗಿದ್ದಾರೆ.

ವಿವಿಪುರಂ ಪೊಲೀಸ್ ಠಾಣೆಯಲ್ಲಿ ಕರವೇ ಮಹಿಳಾ ಘಟಕದ ಅಧ್ಯಕ್ಷೆ ಅಶ್ಚಿನಿ ಗೌಡ ಸೇರಿದಂತೆ ಅನೇಕ ಕಾರ್ಯಕರ್ತರು ಪೊಲೀಸರಿಗೆ ಶರಣಾಗಿದ್ದಾರೆ.

ಕರವೇ ತಪ್ಪೊಪ್ಪಿಕೊಂಡರೂ ಪ್ರತಿಭಟನೆ ನಿಲ್ಲಲ್ಲ, ವೈದ್ಯರ ಹಠಕರವೇ ತಪ್ಪೊಪ್ಪಿಕೊಂಡರೂ ಪ್ರತಿಭಟನೆ ನಿಲ್ಲಲ್ಲ, ವೈದ್ಯರ ಹಠ

Recommended Video

ಡಿಕೆಶಿ ಬಂಧನ ಖಂಡನೆ ಹೋರಾಟಕ್ಕೂ ಕರವೇಗೂ ಸಂಬಂಧವಿಲ್ಲ | Oneindia Kannada

ಕಾರ್ಯಕರ್ತರು ಪೊಲೀಸರಿಗೆ ಶರಣಾದರೂ ಕೂಡ ನಾವು ಪ್ರತಿಭಟನೆ ಕೈಬಿಡುವುದಿಲ್ಲ ಎಂದು ವೈದ್ಯರು ಹೇಳಿದ್ದರು. ಆದರೆ ಇದೀಗ ಅವರು ಮೊದಲು ಶರಣಾಗಲಿ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳುತ್ತೇವೆ ಎಂದು ಐಎಂಎ ತಿಳಿಸಿದೆ.

Karave Activist Ashwini Gowda And Other 13 activists Surrender T Police

ಪ್ರತಿಭಟನೆ ಹಿಂಪಡೆಯುವ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆ ಡೀನ್ ಜೊತೆಗೆ ಮಾತುಕತೆ ನಡೆಯುತ್ತಿದೆ. ಚರ್ಚೆ ಬಳಿಕ ಮುಷ್ಕರ ಕೈಬಿಡುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಬಳಿಕ ಮ್ಯಾಜಿಸ್ಟ್ರೇಟ್‌ಕೋರ್ಟ್ ಮುಂದೆ ಅವರುಗಳನ್ನು ಹಾಜರುಪಡಿಸಲಾಗುತ್ತದೆ. ಕರವೇ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಳ್ಳಲಿದ್ದಾರೆ. ಮಿಂಟೋ ಕಣ್ಣಿನ ಆಸ್ಪತ್ರೆ ವೈದ್ಯರ ದೂರಿನ ಮೇರೆಗೆ ಕರವೇ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಮಿಂಟೋ ಕಣ್ಣಿನ ಆಸ್ಪತ್ರೆ ಕಿರಿಯ ವೈದ್ಯರು ಸೇರಿದಂತೆ ರಾಜ್ಯದಾದ್ಯಂತ ಇತರೆ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೊರರೋಗಿಗಳ ವಿಭಾಗವನ್ನು ಮುಚ್ಚಲಾಗಿದೆ. ಇದರಿಂದ ರೋಗಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣ =ವಾಗಿದೆ.
ಮಿಮಟೋ ವೈದ್ಯರ ಒತ್ತಾಯಕ್ಕೆ ಮಣಿದು ನಾವು ಪೊಲೀಸರಿಗೆ ಶರಣಾಗುತ್ತಿಲ್ಲ ರೋಗಿಗಳಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಶರಣಾಗುತ್ತಿದ್ದೇವೆ ಎಂದು ಕರವೇ ಕಾರ್ಯಕರ್ತರು ತಿಳಿಸಿದ್ದಾರೆ.

English summary
Minto Doctors strike:Karave Activists Ashwini Gowda And other 13 activists are surrenderd to VV puram Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X