• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರಣಂ ಪವನ್ ಪ್ರಸಾದರ 'ಪುರಹರ" ನಾಟಕ ಮತ್ತೊಮ್ಮೆ ಕಲಾಸೌಧದಲ್ಲಿ ನೋಡಿ

|

ಬೆಂಗಳೂರು, ಅಕ್ಟೋಬರ್ 17: ಯುವ ಉತ್ಸಾಹಿ ರಂಗಕರ್ಮಿಗಳು ಸೇರಿಕೊಂಡು ಕಟ್ಟಿರುವ ಅಶ್ವಘೋಷ ಥಿಯೇಟರ್ ಟ್ರಸ್ಟ್ ಮೂಲಕ ಜನಮನ್ನಣೆ ಗಳಿಸಿದ ಐತಿಹಾಸಿಕ ನಾಟಕ 'ಪುರಹರ' ಮತ್ತೊಮ್ಮೆ ಪ್ರದರ್ಶನಕ್ಕೆ ಸಿದ್ಧವಾಗಿದೆ. ನಾಟಕಕಾರ ಕರಣಂ ಪವನ್ ಪ್ರಸಾದ್ ರಚಿಸಿ, ನಿರ್ದೇಶಿಸಿರುವ ಈ ನಾಟಕವನ್ನು ಕಳೆದ ಕೆಲವು ವರ್ಷಗಳಿಂದ ವಿವಿಧ ರಂಗಸಂಸ್ಥೆಗಳು ರಂಗದ ಮೇಲೆ ತಂದು ಯಶಸ್ವಿ ಪ್ರದರ್ಶನ ಕಂಡಿವೆ.

ಶೈವ-ವೈಷ್ಣವ ಪಂಥ, ಮುಸ್ಲಿಮ್ ಆಡಳಿತ, ಧರ್ಮ-ಕರ್ಮ, ವೀರತ್ವ, ಆಧ್ಯಾತ್ಮ ಹೀಗೆ ಅನೇಕ ವಿಷಯಗಳ ಸುತ್ತ ಸುತ್ತುವ ಈ ನಾಟಕದ ಕಥಾ ವಸ್ತುವಿನಲ್ಲಿ ನವಿರಾದ ಪ್ರೇಮಕಥೆಯೂ ಇದೆ.

ನಾಟಕ: ಪುರಹರ

ದಿನಾಂಕ, ದಿನ, ಸಮಯ: 18 ಅಕ್ಟೋಬರ್ 2019, ಶುಕ್ರವಾರ ಸಂಜೆ 7:30ಕ್ಕೆ

ರಚನೆ ಮತ್ತು ನಿರ್ದೇಶನ: ಕರಣಂ ಪವನ್ ಪ್ರಸಾದ್

ಸಹ ನಿರ್ದೇಶನ - ಶ್ರೇಯಸ್ ಶರ್ಮ

ಸ್ಥಳ: ಕೆ ಹೆಚ್ ಕಲಾಸೌಧ, ಹನುಮಂತನಗರ, ಬೆಂಗಳೂರು

ನಿರ್ವಹಣೆ: ನಂದೀಶ್ ದೇವ್,ಕಾರ್ಯದರ್ಶ, ಅಶ್ವಘೋಷ ಥಿಯೇಟರ್ ಟ್ರಸ್ಟ್

ಬೆಳಕು: ಮನಸ್ ಸಂಪತ್

ಪ್ರಸಾದನ: ಮೋಹನ್ ಕುಮಾರ್

ರಂಗ ಸಜ್ಜಿಕೆ: ಮನಸ್ ಸಂಪತ್

ಸಂಗೀತ ನಿರ್ವಹಣೆ: ಹರಿಪ್ರಸಾದ್ ಮತ್ತು ತಂಡ

ಟಿಕೆಟ್ ದರ: 100/-

ಪುರಹರ ನಾಟಕದ ಕುರಿತು

ಪುರಹರ ಎಂಬ ನಾಟಕವು ದೇವಪುರಿ ಎಂಬ ಊರಿನಲ್ಲಿ ಶುರು ವಾಗುತ್ತದೆ. ಶೈವ ಮತ್ತು ವೈಷ್ಣವ ಪಂಥದವರು ಹೆಚ್ಚಾಗಿ ಇರುವ ಊರಿನಲ್ಲಿ ಅವರವರೇ ಒಬ್ಬರಿಗೆ ಇನ್ನೊಬ್ಬರನ್ನು ಕಂಡರೆ ಆಗದಷ್ಟು ವೈರತ್ವ ಇರುತ್ತದೆ. ಒಬ್ಬರು ಇನ್ನೊಬ್ಬರ ದೇವಾಲಯವನ್ನು ಪ್ರವೇಶ ಮಾಡದಿರುವಷ್ಟು ಹಗೆತನ ಇರುತ್ತದೆ. ಇದೇ ಸಮಯದಲ್ಲಿ ಆ ಊರಿಗೆ ಸುಲ್ತಾನರ ಆಡಳಿತ ಶುರುವಾಗುತ್ತದೆ. ಅಲ್ಲಿಗೆ ಅರಬ್ ಆದಿಲ್ ಶಾ ಎಂಬುವನು ಮನ್ಸಬ್ದಾರನಾಗಿ ಬರುತ್ತಾನೆ.

ತಮಸ್ಸಿನಿಂದ ಸತ್ಯದ ತೇಜಸ್ಸಿನೆಡೆಗೆ ದಾರಿ ತೋರುವ 'ನನ್ನಿ'

ಆ ಊರಿನಲ್ಲಿ ಇಬ್ಬರ ನಡುವೆ ಇರುವ ಅಸಮಾನತೆ ಮತ್ತು ಅಸ್ಪೃಷ್ಯತೆಯನ್ನು ಕಂಡು ಇಬ್ಬರನ್ನು ಒಂದುಗೂಡಿಸುವ ಪ್ರಯತ್ನ ಮಾಡುತ್ತಾನೆ. ಇದರ ಮುನ್ನುಡಿಯಾಗಿ ಆತ ಎರಡು ದೇವರನ್ನು ಸೇರಿಸಿ ಒಂದು ದೇವಾಲಯವನ್ನು ನಿರ್ಮಿಸುವ ಆಲೋಚನೆಯಲ್ಲಿ ತೋಡಗುತ್ತಾನೆ. ಎರಡು ದೇವರ ವಿಗ್ರಹಗಳಿರುವ ದೇವಸ್ಥಾನವನ್ನು ನಿರ್ಮಿಸಿದರೆ ಎರಡು ಪಂಥದವರು ಆ ದೇವಾಲಯಕ್ಕೆ ಬಂದು ಇಬ್ಬರಲ್ಲೂ ಸಾಮರಸ್ಯ ಮತ್ತು ಸೌಹಾ‍ರ್ಧತೆಯಿಂದ ಇರಬಹುದು ಎಂದು ಮನಗಾಣುತ್ತಾನೆ.

ಭೈರಪ್ಪ ಹೊಗಳಿದ 'ಕರ್ಮ' ಕೃತಿ ವಿಶ್ವದೆಲ್ಲೆಡೆ ಲಭ್ಯ

ಈ ನಾಟಕದ ಕಥಾವಸ್ತು ತುಂಬಾ ನವೀನ ವಾದುದು ಮತ್ತು ಹಿಂದೆ ಎಂದು ಬಂದಿರದುದು. ಈ ನಾಟಕವು ಹಿಂದುಗಳ ಒಳಪಂಗಡಗಳಲ್ಲಿ ಇರುವ ಅನೇಕ ಒಡಕುಗಳನ್ನು ಸರಿಪಡಿಸುವಲ್ಲಿ ಬೆಳಕು ಚೆಲ್ಲುತ್ತದೆ. ಈ ನಾಟಕದ ಮೂಲಕ ನಾವು ಎಲ್ಲ ಧರ್ಮಗಳನ್ನು, ಜಾತಿಗಳನ್ನು ಗೌರವಿಸಬೇಕು ಎಂಬುದನ್ನು ತಿಳಿದುಕೊಳ್ಳಬಹುದು.

ಈ ನಾಟಕವನ್ನು ರಂಗಭೂಮಿ ಮತ್ತು ಕಾದಂಬರಿಕಾರ ಕರಣಂ ಪವನ್ ಪ್ರಸಾದ್ ರಚಿಸಿ, ನಿರ್ದೇಶನವನ್ನು ಮಾಡಿದ್ದಾರೆ. ಅವರ ಇತರೆ ನಾಟಕಗಳು ಬೀದಿಬಿಂಬ ರಂಗದ ತುಂಬ, ಭವ ಎನಗೆ ಹಿಂಗಿತು. ಕಾದಂಬರಿಗಳು ಕರ್ಮ, ನನ್ನಿ ಮತ್ತು ಗ್ರಸ್ತ.

English summary
Team Ashwaghosha Trust presents 'PURAHARA' a historical Kannada play penned and directed by Karanam Pavan Prasad. The drama will be staged on October 31st at K H Kalasoudha, Hanumanthanagar, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X